Advertisment

ಕಾರುಗಳಲ್ಲಿ ಕಾಣಿಸಿಕೊಂಡ ದೋಷ.. 1.72 ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು ಹಿಂಪಡೆದ ನಾಲ್ಕು ಕಂಪನಿಗಳು!

author-image
AS Harshith
Updated On
ಕಾರುಗಳಲ್ಲಿ ಕಾಣಿಸಿಕೊಂಡ ದೋಷ.. 1.72 ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು ಹಿಂಪಡೆದ ನಾಲ್ಕು ಕಂಪನಿಗಳು!
Advertisment
  • ಜನಪ್ರಿಯ ಕಂಪನಿಗಳ ಕಾರುಗಳಲ್ಲಿ ದೋಷ.. ಹಿಂತಿರುಗಿಸುವಂತೆ ಮನವಿ
  • ನಾಲ್ಕು ಆಟೋ ಮೊಬೈಲ್​ ಕಂಪನಿಗಳ 1,71,976 ಯುನಿಟ್​ಗಳನ್ನು ಹಿಂಪಡೆಯಲು ಮುಂದು
  • ಏರ್​ಬ್ಯಾಗ್​ ದೋಷ, ಬೆಂಕಿ ಕಾಣಿಸಿಕೊಳ್ಳುವ ಅಪಾಯ.. ಈ ಕಾರುಗಳಲ್ಲಿ ಕಾಣಿಸಿಕೊಂಡ ಸಮಸ್ಯೆ

ಜನಪ್ರಿಯ 4 ಕಾರು ತಯಾರಿಕಾ ಕಂಪನಿಗಳು ತಮ್ಮ ಕಾರುಗಳಲ್ಲಿ ದೋಷ ಕಂಡುಬಂದ ಪರಿಣಾಮ ಬರೋಬ್ಬರಿ 1,72,000 ಕಾರುಗಳನ್ನು ಹಿಂಪಡೆಯುತ್ತಿವೆ. ಸ್ವಯಂ ಪ್ರೇರಿತವಾಗಿ ಈ ನಿರ್ಧಾರವನ್ನು ತೆಗೆದುಕೊಂಡು ದೋಷಗಳನ್ನು ಸರಿಪಡಿಸುವುದಾಗಿ ತಿಳಿಸಿವೆ.

Advertisment

BMW ಕೊರಿಯಾ, ಹುಂಡೈ ಮೋಟಾರ್​​, ಕಿಯಾ ಮತ್ತು ಕೆಜಿಎಮ್​ ಜನಪ್ರಿಯ ಕಾರುಗಳು ಕಂಪನಿಗಳಾಗಿದ್ದು, ಅಧಿಕೃತ ಹೇಳಿಕೆಯನ್ನು ಹೊರಡಿಸಿವೆ. ನಾಲ್ಕು ಆಟೋ ಮೊಬೈಲ್​ ಕಂಪನಿಗಳು 103 ವಿಭಿನ್ನ ಮಾದರಿಗಳ 1,71,976 ಯುನಿಟ್​ಗಳನ್ನು ಹಿಂಪಡೆಯಲು ಮುಂದಾಗಿವೆ.

ಇದನ್ನೂ ಓದಿ: ಆರ್​ಸಿಬಿ ಈ ಸ್ಟಾರ್​​ ಪ್ಲೇಯರನ್ನು ಕೈ ಬಿಡೋ ಸಾಧ್ಯತೆ; ಖರೀದಿಸಲು ರೆಡಿ ಇವೆಯಂತೆ 3 ತಂಡಗಳು!

ಯೋನ್​​ಹಾಪ್​​ ಸುದ್ದಿ ಸಂಸ್ಥೆಯೊಂದು ಹಂಚಿಕೊಂಡ ಮಾಹಿತಿ ಪ್ರಕಾರ, BMW 320d ಕಾರಿನಲ್ಲಿ ಏರ್​ಬ್ಯಾಗ್​ ಮಾಡ್ಯೂಲ್​ಗಳಲ್ಲಿ ದೋಷ ಕಂಡು ಬಂದ ಕಾರಣ ಕಾರುಗಳನ್ನು ಮರಳಿ ಪಡೆಯುತ್ತಿವೆ. ಹುಂಡೈ Santa Fe SUV ಕಾರಿನಲ್ಲಿ ಸೀಟ್​ಗಳಲ್ಲಿ ವೈರಿಂಗ್​ ದೋಷದಿಂದ 43 ಸಾವಿರ ಕಾರುಗಳನ್ನು ಮರಳಿ ಪಡೆಯುತ್ತಿವೆ.

Advertisment

ಇದನ್ನೂ ಓದಿ: 3 ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್​.. ಸಾವಿನ ಸುತ್ತ ಅನುಮಾನದ ಹುತ್ತ 

ಇನ್ನು ಕಿಯಾ ಸೋಲ್​ ಹೈಡ್ರಾಲಿಕ್​​ ಎಲೆಕ್ಟ್ರಾನಿಕ್​ ಕಂಟ್ರೋಲ್​ನಲ್ಲಿ ಬೆಂಕಿ ಕಾಣಿಸುವ ಅಪಾಯ ಇರುವುದರಿಂದ 15 ಸಾವಿರ ಕಾರುಗಳನ್ನು ಹಿಂಪಡೆಯುತ್ತಿವೆ. KGM ತನ್ನ ಸ್ಮಾರ್ಟ್​ 110E ಎಲೆಕ್ಟ್ರಿಕ್​ 52 ಕಾರುಗಳನ್ನು ಮರಳಿ ಪಡೆಯುತ್ತಿವೆ.

ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ.. ಪ್ರಿಯತಮೆ ಜೊತೆ ನೇಣಿಗೆ ಶರಣಾದ ಪೂಜಾರಿ

ಕಳೆದ ತಿಂಗಳು ಕಿಯಾ ಮತ್ತು ನಿಸ್ಸಾನ್​​ ಕೊರಿಯಾ ಸೇರಿ ಮೂರು ಕಾರು ತಯಾರಕರು 1,56,00ಕ್ಕೂ ಹೆಚ್ಚು ಕಾರುಗಳನ್ನು ಸ್ವಯಂ ಪ್ರೇರಣೆಯನ್ನು ಹಿಂಪಡೆದಿದ್ದರು. ಇದೀಗ ಪೋರ್ಷೆ ಕೊರಿಯಾ, ಟೊಯೋಟಾ ಮೋಟಾರ್​ ಕೊರಿಯಾ ಕಂಪನಿ ಕೂಡ 32 ವಿಭಿನ್ನ ಮಾದರಿಗಳ 1,56,740 ಕಾರುಗಳನ್ನು ರಿಟರ್ನ್​​ ಹಿಂಪಡೆಯಲು ಮುಂದಾಗಿವೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment