ಕರ್ನಾಟಕದಿಂದ ನಾಲ್ವರು ಪಾಕಿಸ್ತಾನಿಯರು ಗಡಿಪಾರು.. ಇನ್ನೂ ಎಷ್ಟು ಮಂದಿ ಉಳ್ಕೊಂಡಿದ್ದಾರೆ..?

author-image
Veena Gangani
Updated On
ಪಾಕಿಸ್ತಾನಿ ನಾಗರಿಕರಿಗೆ ಭಾರತ ಬಿಟ್ಟು ಹೋಗಲು ಇಂದೇ ಕೊನೆಯ ದಿನ.. ಸಂಜೆಯೊಳಗೆ ಭಾರೀ ಗಡಿಪಾರು!
Advertisment
  • ಪಾಕ್​ಗೆ ಹೋಗಲು 48 ಗಂಟೆಗಳ ಕಾಲ ಗುಡುವು ಕೊಟ್ಟಿರೋ ಸರ್ಕಾರ
  • ದೀರ್ಘಾವಧಿ ವೀಸಾ ಪಡೆದು ರಾಜ್ಯದಲ್ಲಿ ನೆಲೆಸಿದ್ದಾರೆ 91 ಮಂದಿ
  • ಪಾಕಿಸ್ತಾನಿಯರನ್ನ ಮದ್ವೆಯಾದವರಿಗೆ ದೀರ್ಘಾವಧಿ ವೀಸಾ ಕೊಟ್ಟ ಸರ್ಕಾರ

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪಹಲ್ಗಾಮ್​​ನಲ್ಲಿ ನಡೆದ ದಾಳಿಯಲ್ಲಿ ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರ ಜೀವ ಬಲಿಯಾಗಿದೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಇದನ್ನೂ ಓದಿ: ‘ಭಾರತದಲ್ಲೇ ಇರಲು ಬಿಡಿ ಪ್ಲೀಸ್​’.. ಪಾಕಿಸ್ತಾನಿ ಸೀಮಾ ಹೈದರ್​ಗೆ ಗಡಿಪಾರು ಭೀತಿ!

publive-image

ಹೀಗಾಗಿ ಸರ್ಕಾರ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ತಿರಿಸಿಕೊಳ್ಳಲು ಭಾರತದಲ್ಲಿ ವಾಸವಾಗಿರೋ ಪಾಕಿಸ್ತಾನಿಗಳು ವಾಪಸ್​ ಹೋಗುವಂತೆ 48 ಗಂಟೆಗಳ ಕಾಲ ಗುಡುವು ಕೊಟ್ಟಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಬಂದ್ ಮಾಡಲಾಗಿದೆ. ಈಗಾಗಲೇ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪ್ರಜೆಗಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ. ದೀರ್ಘಾವಧಿ ವೀಸಾ ಹೊಂದಿರೊ 91 ಮಂದಿ ಪಾಕಿಸ್ತಾನ ಪ್ರಜೆಗಳ ಗಡಿಪಾರಿಲ್ಲ. ದೀರ್ಘಾವಧಿ ವೀಸಾ ಹೊಂದಿದವರ ಗಡಿಪಾರಿಗೆ ಕೇಂದ್ರ ಸೂಚಿಸಿಲ್ಲ. ಭಟ್ಕಳದ ನವಾಯತ್ ಸಮುದಾಯದಲ್ಲಿ ಪಾಕಿಸ್ತಾನದವರೊಂದಿಗೆ ಮದುವೆಯಾಗುವ ಸಂಪ್ರದಾಯವಿದೆ. ಪಾಕಿಸ್ತಾನಿಯರನ್ನ ಮದುವೆಯಾದ ಬಳಿಕ ಕೇಂದ್ರ ಸರ್ಕಾರ ದೀರ್ಘಾವಧಿ ವೀಸಾ ನೀಡುತ್ತಿದೆ.

publive-image

ಹೀಗೆ ದೀರ್ಘಾವಧಿ ವೀಸಾ ಪಡೆದ 91 ಮಂದಿ ರಾಜ್ಯದಲ್ಲಿ ನೆಲೆಸಿದ್ದಾರೆ. ಭಟ್ಕಳದಲ್ಲಿ 14 , ಕಾರವಾರದಲ್ಲಿ 1 ಸೇರಿದಂತೆ 3 ಮಕ್ಕಳು ದೀರ್ಘಾವಧಿ ವೀಸಾದಲ್ಲಿ ಇದ್ದಾರೆ. ಇದಲ್ಲದೆ ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು, ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಪಾಕಿಸ್ತಾನ ಪ್ರಜೆಗಳು ನೆಲೆಸಿದ್ದಾರೆ. ದಾವಣಗೆರೆಯಲ್ಲಿ ಓರ್ವ ಪಾಕಿಸ್ತಾನಿ ಪ್ರಜೆ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ. ಈ ವಿದ್ಯಾರ್ಥಿಯ ವೀಸಾ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ಕು ಮಂದಿಯನ್ನಷ್ಟೇ ರಾಜ್ಯ ಸರ್ಕಾರ ಗಡಿಪಾರು ಮಾಡಿದೆ. ಅಲ್ಲದೇ ಎಫ್​ಆರ್​ಆರ್​ಒ ಮಾಹಿತಿ ಆಧಾರದ ಮೇಲೆ ನಾಲ್ವರ ಗಡಿಪಾರು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment