ಮಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಮಳೆಗೆ ಗೋಡೆ ಕುಸಿದು ಗಂಡ, ಹೆಂಡತಿ, ಇಬ್ಬರು ಮಕ್ಕಳು ಸಾವು

author-image
Ganesh
Updated On
Remal Cyclone: ರೆಮಲ್ ಸೈಕ್ಲೋನ್‌ ರಣಚಂಡಿ ಅವತಾರ.. ಮೂವರ ಸಾವು; ಎಲ್ಲೆಲ್ಲಿ? ಏನಾಯ್ತು?

ಸಾಂದರ್ಭಿಕ ಚಿತ್ರ

Advertisment
  • ಇಂದು ಮುಂಜಾನೆ ಗೋಡೆ ಕುಸಿದು ಸಾವು
  • ನಿನ್ನೆ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿತ್ತು
  • ದುರ್ಘನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ

ಮಂಗಳೂರು: ನಿರಂತರ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರು ಮದನಿ ನಗರದಲ್ಲಿ ನಡೆದಿದೆ.

ಇಂದು ಮುಂಜಾನೆ ದುರ್ಘಟನೆ ನಡೆದಿದೆ. ಯಸೀರ್, ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡಾಯಿಸಿದ್ದಾರೆ. ಸದ್ಯ ಘಟನೆ ಹೇಗೆ ಆಗಿದೆ ಎಂದು ಪರಿಶೀಲನೆ ನಡೆಸ್ತಿದ್ದಾರೆ. ವರದಿಗಳ ಪ್ರಕಾರ.. ಇಂದು ಮುಂಜಾನೆ ವೇಳೆ ಮಳೆಗೆ ಗೋಡೆ ನೆನೆದು ಕಸಿದು ಬಿದ್ದಿದೆ.

ನಿನ್ನೆ ರಾತ್ರಿ ಯಾಸೀರ್ ಕುಟುಂಬ ಊಟ ಮಾಡಿ ನಿದ್ರೆಗೆ ಜಾರಿತ್ತು. ಬೆಳಗ್ಗೆ ಎಳುವಷ್ಟರಲ್ಲಿ ಇಡೀ ಕುಟುಂಬ ಜೀವಂತ ಸಮಾಧಿ ಆಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.

ಇದನ್ನೂ ಓದಿ:ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ.. 10 ವರ್ಷದ ಬಳಿಕ ಲೋಕಸಭೆಗೆ ಅಧಿಕೃತ ವಿಪಕ್ಷ ನಾಯಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment