/newsfirstlive-kannada/media/post_attachments/wp-content/uploads/2024/08/Raichur-Death.jpg)
ರಾಯಚೂರು: ರಾತ್ರಿ ಮನೆಯಲ್ಲಿ ಮಟನ್ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ಕು ಮಂದಿ ಪ್ರಾಣ ಬಿಟ್ಟಿದ್ರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
ಮನೆಯಲ್ಲಿದ್ದ ಗಂಡ- ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಭೀಮಣ್ಣ (60), ಈರಮ್ಮ (57), ಮಲ್ಲೇಶ್ (21), ಪಾರ್ವತಿ (19) ಮೃತರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಾವಿನಲ್ಲಿ ಒಂದಾದ ಅಣ್ಣ, ತಂಗಿ.. ರೈಲಿಗೆ ತಲೆ ಕೊಟ್ಟು ದುರಂತ ಅಂತ್ಯ; ಕಾರಣವೇನು?
ಒಂದೇ ಮನೆಯ ನಾಲ್ವರು ಸಾವನ್ನಪ್ಪಿರೋ ಘಟನೆಗೆ ಕಲ್ಲೂರು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಟನ್ ತಿಂದವರಿಗೆ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮಸ್ಥರು ಭೀಮಣ್ಣನ ಮನೆಯವರು ಸಂಕಷ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಗಂಭೀರವಾಗಿರುವ ಮತ್ತೊಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿರವಾರ ಪೊಲೀಸರು ನಾಲ್ವರ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಿದ್ದು, ಘಟನೆಗೆ ಅಸಲಿ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ