/newsfirstlive-kannada/media/post_attachments/wp-content/uploads/2025/03/BOY.jpg)
ಕಿತಾಪತಿ, ಹಟ ಮಕ್ಕಳ ಸಹಜ ಗುಣ. ತಾವು ಇಷ್ಟಪಡುವ ವಸ್ತುಗಳನ್ನು ಬೇರೆಯವರು ಮುಟ್ಟಿದರೆ ದೊಡ್ಡ ರಂಪ ಮಾಡೋದನ್ನೇ ನೋಡಿದ್ದೇವೆ. ಆದರೆ ಅಮೆರಿಕದಲ್ಲಿ ನಾಲ್ಕು ವರ್ಷ ಪೋರನೊಬ್ಬ ನೆಕ್ಸ್ಟ್ ಲೇವೆಲ್ಗೆ ಹೋಗಿದ್ದಾನೆ.
ತನ್ನ ತಾಯಿ ಐಸ್ ಕ್ರೀಮ್ ತಿಂದಳು ಅಂತಾ ಕೋಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ. ನೇರವಾಗಿ ಅಲ್ಲಿನ ಪೊಲೀಸ್ ನಂಬರ್ 911ಕ್ಕೆ ಕರೆ ಮಾಡಿ ಕೇಸ್ ದಾಖಲಿಸಿದ್ದಾನೆ. ಮಗುವಿನ ಪ್ರಕರಣವನ್ನು ಸೀರಿಯಲ್ ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿದ್ದಾರೆ.
ನನ್ನ ಅಮ್ಮ, ಅನುಮತಿ ಇಲ್ಲದೇ ಇಸ್ಕ್ರೀಮ್ ತಿಂದಿದ್ದಾಳೆ. ಅವಳನ್ನು ಜೈಲಿಗೆ ಹಾಕುವಂತೆ ಫೋನ್ ಕರೆಯಲ್ಲಿ ಪೊಲೀಸರಿಗೆ ವಿನಂತಿಸಿದ್ದ. ಸ್ಥಳಕ್ಕೆ ಬಂದಾಗ ಆತ, ಬೇಡ ಅಮ್ಮ ನನ್ನ ಜೊತೆಯಲ್ಲೇ ಇರಲಿ ಎಂದು ಪ್ರಾರ್ಥಿಸಿದ್ದಾನೆ. ಅಮೆರಿಕದ ಮಿಸ್ಕೊನ್ಸಿನ್ (Wisconsin) ನಗರದಲ್ಲಿ ಅಪರೂಪರ ಘಟನೆ ನಡೆದಿದೆ. ಬಾಲಕ ಮೌಂಟ್ ಪ್ಲೆಸೆಂಟ್ ಪೊಲೀಸ್ ಠಾಣೆಯ ನಂಬರ್ಗೆ ಕರೆ ಮಾಡಿದ್ದ.
Four-Year-Old Calls 911 on Mom For Eating his Ice Cream. 🇺🇸
I will not eat my kids snacks anymore !! 😰 pic.twitter.com/qa0o4zlh80— Alangajoa (@berthsfamily) March 11, 2025
ಇದನ್ನೂ ಓದಿ: ‘ಪೊಲಿಟಿಷಿಯನ್, ಮಾಜಿ MLA ಅವನೇ ನನ್ನ ಗಂಡ’ ಎಂದ ಮಹಿಳಾ ಅಧಿಕಾರಿ; ದಡೇಸೂಗೂರ್ 2ನೇ ಮದುವೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ