/newsfirstlive-kannada/media/post_attachments/wp-content/uploads/2024/11/Agra-1.jpg)
ರೀಲ್ಸ್..ರೀಲ್ಸ್.. ರೀಲ್ಸ್.. ಸಾಕಷ್ಟು ಜನರನ್ನು ಬಲಿಪಡೆದುಕೊಂಡ ವೈಶಿಷ್ಟ್ಯ ಇದಾಗಿದೆ. ಇದೀಗ ರೀಲ್ಸ್ ಮಂಪರಿನಲ್ಲಿ ಮಗ್ನರಾಗಿದ್ದಾಗ ಸಾವೊಂದು ಸಂಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮ್ಮ ರೀಲ್ಸ್ ಮಂಪರಿನಲ್ಲಿದ್ದಾಗ 4 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದಾಳೆ. ಆದರೆ ಬೇಸರದ ಸಂಗತಿ ಎಂದರೆ ಚಿಕ್ಕಮ್ಮನಿಗೆ ಗೊತ್ತಿಲ್ಲದೆ ರೀಲ್ಸ್ನಲ್ಲಿ ಬಾಲಕಿ ಕೊಚ್ಚಿ ಹೋಗುವ ದೃಶ್ಯ ಸೆರೆಯಾಗಿದೆ.
ಉತ್ತರ ಪ್ರದೇಶದ ಗಾಜಿಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 4 ವರ್ಷದ ಬಾಲಕಿ ಕುಟುಂಬದವರೊಂದಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಾಳೆ. ಮಗುವಿನ ಚಿಕ್ಕಮ್ಮ ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಮಗ್ನರಾಗಿದ್ದಾಗ ಬಾಲಕಿ ಕೊಚ್ಚಿ ಹೋಗಿದ್ದಾಳೆ. ರೀಲ್ಸ್ನಲ್ಲಿ ಈ ದೃಶ್ಯ ಸೆರೆಯಾದರೂ ಚಿಕ್ಕಮ್ಮ ಮಾತ್ರ ರೀಲ್ಸ್ನಲ್ಲೇ ಕಳೆದು ಹೋಗಿರುವ ಘಟನೆ ನಡೆದಿದೆ.
ಸಾವನ್ನಪ್ಪಿರುವ ಬಾಲಕಿಯನ್ನ ತಾನ್ಯಾ ಎಂದು ಗುರುತಿಸಲಾಗಿದೆ. ತಾನ್ಯಾ ತನ್ನ ತಾಯಿ ಅಂಕಿತಾ ಪಾಂಡೆಯೊಂದಿಗೆ ಸೈದ್ಪುರಕ್ಕೆ ಭೇಟಿ ನೀಡಿದ್ದಳು. ಅಜ್ಜಿ ಮನೆಯಲ್ಲಿ ದೀಪಾವಳಿ ಕಾರ್ಯಕ್ರಮ ಇದ್ದ ಕಾರಣ ಬಂದಿದ್ದಳು. ಈ ವೇಳೆ ಕುಟುಂಬ ಸಮೇತ ಗಂಗಾ ನದಿಯ ಬಳಿ ತೆರಳಿ ಸ್ನಾನ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಚಿಕನ್ ಗ್ರಿಲ್ ತಿಂದು 10 ಮಂದಿ ಅಸ್ವಸ್ಥಗೊಂಡ ಆರೋಪ.. ವಾಂತಿ, ಭೇದಿಯಾಗಿ ಆಸ್ಪತ್ರೆ ಸೇರಿದ ಜನರು
ತಾನ್ಯಾ ತನ್ನ ಅಜ್ಜಿ, ತಾಯಿ, ಚಿಕ್ಕಮ್ಮ ಸ್ಮೃತಿ ಜೊತೆಗೆ ಸ್ನಾನಘಟ್ಟದ ಬಳಿ ತೆರಳಿದ್ದಾಳೆ. ಅಮ್ಮ, ಅಜ್ಜಿ ಜೊತೆಗೆ ಸ್ನಾನ ಮಾಡುವಾಗ ತಾನ್ಯಾ ಕಣ್ಮರೆಯಾಗಿದ್ದಾಳೆ. ಆದರೆ ಚಿಕ್ಕಮ್ಮ ಸ್ಮೃತಿ ಈ ವೇಳೆ ರೀಲ್ಸ್ ಮಾಡೋದರಲ್ಲಿ ಮಗ್ನರಾಗಿದ್ದು, ಆಕೆಯ ಸ್ಮಾರ್ಟ್ಫೋನ್ನಲ್ಲಿ ತಾನ್ಯಾ ನದಿಯಲ್ಲಿ ತೇಲಿ ಹೋಗುವ ದೃಶ್ಯ ಸೆರೆಯಾಗಿದೆ.
यूपी के गाजीपुर के इस लापरवाह परिवार को देखिए। गंगा में नहाते वक्त चार साल की बच्ची सबके सामने डूब रही है और सारे पानी के साथ अठखेलियों में व्यस्त हैं। मौसी का बनाया हुआ वीडियो वायरल है, जिसमें साफ़ साफ़ बच्ची डूबती नज़र आ रही है। pic.twitter.com/krLG310NKy
— SANJAY TRIPATHI (@sanjayjourno)
यूपी के गाजीपुर के इस लापरवाह परिवार को देखिए। गंगा में नहाते वक्त चार साल की बच्ची सबके सामने डूब रही है और सारे पानी के साथ अठखेलियों में व्यस्त हैं। मौसी का बनाया हुआ वीडियो वायरल है, जिसमें साफ़ साफ़ बच्ची डूबती नज़र आ रही है। pic.twitter.com/krLG310NKy
— SANJAY TRIPATHI (@sanjayjourno) November 4, 2024
">November 4, 2024
ಇದನ್ನೂ ಓದಿ: ಪತನಗೊಂಡ ಮಿಗ್-29 ಯುದ್ಧ ವಿಮಾನ.. ಹೊತ್ತಿಕೊಂಡ ಬೆಂಕಿ.. ಇಬ್ಬರು ಪೈಲಟ್ಗಳು ಬಚಾವ್
ಕೊಂಚ ಹೊತ್ತಿನ ಬಳಿಕ ತಾನ್ಯಾ ನಾಪತ್ತೆಯಾದ ಘಟನೆ ಗೊತ್ತಾಗಿದೆ. ಈ ವೇಳೆ ತಾನ್ಯಾ ಕುಟುಂಬದವರೊಂದಿಗೆ ಅಲ್ಲಿ ನೆರೆದಿದ್ದವರು ಸೇರಿ ಹುಡುಕಲು ಆರಂಭಿಸಿದ್ದಾರೆ. ಕೊನೆಗೆ ಚಿಕ್ಕಮ್ಮನ ಮೊಬೈಲ್ ಪರಿಶೀಲಿಸಿದಾಗ ತಾನ್ಯಾ ನದಿ ನೀರಿನಲ್ಲಿ ತೇಲಿ ಹೋಗೋದು ಬೆಳಕಿಗೆ ಬಂದಿದೆ. ನಂತರ ಹುಡುಕಾಡಿದಾಗ ತಾನ್ಯಾ ಮೃತದೇಹ 50 ಮೀಟರ್ ಕೆಳಗೆ ಪತ್ತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ