newsfirstkannada.com

ವಾಟ್ಸಾಪ್ ಬಳಸುವವರೇ ಹುಷಾರ್.. ಖತರ್ನಾಕ್ ಖದೀಮರ ಹೊಸ ಮಾರ್ಗ ಬಯಲು; ಏನದು?

Share :

Published February 22, 2024 at 3:15pm

Update February 22, 2024 at 3:17pm

    ವಾಟ್ಸಾಪ್​ ಯೂಸ್​ ಮಾಡಿಕೊಂಡು ವಂಚಕರು ಮೋಸ ಹೇಗೆ ಮಾಡ್ತಾರೆ?​

    ವಾಟ್ಸಾಪ್​ನಿಂದ ನಿಮ್ಮ ಬ್ಯಾಂಕ್​ ಅಕೌಂಟ್ ಕೂಡ ಖಾಲಿ ಆಗಬಹುದು

    ಈ ರೀತಿ ವಾಟ್ಸಾಪ್​ ದೋಖಾದಿಂದ ಜನರು ಹೇಗೆ ಬಚಾವಾಗೋದು?

ದಿನ ಬೆಳಗಾದರೇ ಸಾಕು ಜನ ದೇವರ ಫೋಟೋ ನೋಡ್ತಾರೋ ಇಲ್ವೊ ಗೊತ್ತಿಲ್ಲ. ಆದ್ರೆ ವಾಟ್ಸಾಪ್​ ಅಂತೂ ಪಕ್ಕಾ ನೋಡೇ ನೋಡ್ತಾರೆ. ಯಾರು ಮೆಸೇಜ್ ಮಾಡಿದ್ದಾರೆ? ಎಷ್ಟು ಮೆಸೇಜ್​ ಬಂದಿವೆ. ಇದನ್ನ ತಿಳಿದುಕೊಳ್ಳೋ ಕುತೂಹಲ. ಆದ್ರೆ ಇದೇ ವಾಟ್ಸಾಪ್​ನಿಂದ ನಿಮ್ಮ ಬ್ಯಾಂಕ್​ ಅಕೌಂಟ್ ಕೂಡ ಖಾಲಿ ಖಾಲಿ ಆಗಬಹುದು ಎಚ್ಚರದಿಂದಿರಿ. ಹೌದು, ನೀವು ಪ್ರತಿದಿನ ನೋಡೋ ವಾಟ್ಸಾಪ್​ನಿಂದಾನೇ ನಿಮ್ಮ ದುಡ್ಡು ಗೋವಿಂದಾಯ ನಮಃ ಆಗಬಹುದು. ಯಾಕಂದ್ರೆ ಸೈಬರ್​ ಖದೀಮರು ನೋಡಿಕೊಂಡಿರುವ ಹೊಸ ಮಾರ್ಗನೇ ಈ ವಾಟ್ಸಾಪ್ ದೋಖಾ. ಹಾಗಾದ್ರೆ ವಾಟ್ಸಾಪ್​ ಯೂಸ್​ ಮಾಡೋದೇ ತಪ್ಪಾ? ಖಂಡಿತ ಇಲ್ಲ. ಆದ್ರೆ ವಾಟ್ಸಾಪ್​ನಲ್ಲಿ ಬರುವ ಕೆಲವೊಂದು ಮೆಸೇಜ್​ಗಳಿಗೆ ನೀವು ಮರುಳಾದ್ರೆ ಮಾತ್ರಾನೇ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ.

ಅಭಿನಂದನೆಗಳು ನೀವು 10 ಸಾವಿರ ಯುಸ್​ ಡಾಲರ್‌ಗಳನ್ನು ಗೆದ್ದಿದ್ದೀರಿ. ಹೀಗೆ ಯಾವುದಾದರೂ ಒಂದು ಮೆಸೇಜ್​ನ ನೀವು ನೋಡಿದ್ರೆ ಖಂಡಿತವಾಗಲೂ ನಿಮ್ಮ ಗಮನ ಮತ್ತು ಕುತೂಹಲವನ್ನು ಎಲ್ಲ ಆ ಕಡೆನೇ ಹೋಗುತ್ತೆ. ಯಾಕಂದ್ರೆ ನಮಗೆ ಯಾವುದಾದ್ರೂ ಫ್ರೀ, ಅದೃಷ್ಟ, ಲಕ್​, ಜಾಕ್​ಪಾಟ್​ ಇಂತಹ ವಿಷ್ಯಾ ಕೇಳಿದ್ರೆ ಸಾಕು, ನಮ್ಮ ಕಣ್ಣು ಕಿವಿ ತೆರೆದುಕೊಳ್ಳುತ್ತದೆ. ಹಾಗೂ ಇಂತಹ ಕಾನ್ಸೆಪ್ಟ್​ ಇಟ್ಟುಕೊಂಡೇ ವಂಚಕರು ಆ ರೀತಿ ದೋಖಾ ಪ್ಲ್ಯಾನ್​ ಮಾಡ್ತಾರೆ. ಎಸ್​ಎಂಎಸ್​ ಲಿಂಕ್ ಬಳಸಿಕೊಂಡು ವಂಚಿಸ್ತಾರೆ. ಇದಕ್ಕೆ ಎಸ್​ಎಂಎಸ್ ಫಿಶಿಂಗ್​​ ಅಂತ ಕೂಡ ಕರೀತಾರೆ.

ವಾಟ್ಸಾಪ್​ ಯೂಸ್​ ಮಾಡಿಕೊಂಡು ಹೇಗೆ ವಂಚಕರು ಮೋಸ ಮಾಡುತ್ತಾರೆ ಗೊತ್ತಾ?​

ನೀವು ಮನೆಯಲ್ಲೇ ಇದ್ದುಕೊಂಡು ತಿಂಗಳಿಗೆ 50ರಿಂದ 60 ಸಾವಿರ ರೂಪಾಯಿ ದುಡಿಯಬಹುದು. ಅದೂ ಯಾವುದೇ ಕಷ್ಟದ ಕೆಲಸ ಅಲ್ಲ. ಸಿಂಪಲ್ ಟಾಸ್ಕ್ ಕಂಪ್ಲೀಟ್ ಮಾಡಿ. ಸ್ಯಾಲರಿ ಪಡೆಯಿರಿ. ಆಫೀಸ್​ಗೂ ಹೋಗುವಂತಿಲ್ಲ. ಕುಳಿತಲ್ಲೇ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ದುಡೀರಿ. ಒಳ್ಳೆ ಸಂಬಳ, ಈಸಿ ಕೆಲಸ. ಅರೇ ಏನ್​ ಚೆನ್ನಾಗಿದೆ.. ಮನೇಲೇ ಕೂತುಕೊಂಡು, ಪಾರ್ಟ್​ ಟೈಂ ಜಾಬ್​ ಮಾಡ್ಕೊಂಡು 50-60 ಸಾವಿರ ದುಡೀಬೋದಾ?? ಪರವಾಗಿಲ್ವೇ. ಅಂತ ನಿಮಗೂ ಅನ್ನಿಸಬಹುದು. ಎಂತಹ ಒಳ್ಳೇ ಆಫರ್​ ಇದು ಅಂತ ಕೂಡ ಅನ್ನಿಸಬಹದು. ಆದ್ರೆ ಈ ಬಲೆಗೆ ನೀವು ಬಿದ್ರೀ ಅಂದ್ರೆ, ನಿಮ್ಮ ಕಥೆ ಮುಗಿದ ಹಾಗೇನೆ. ಇಲ್ಲೇನಾಗುತ್ತೆ ಅಂದ್ರೆ, ಇಂತಹ ಮೆಸೇಜ್​ ಬಂದ ಮೇಲೆ, ಅದರ ಜೊತೆಗೇನೆ ಒಂದು ಲಿಂಕ್​ ಕೂಡ ನಿಮ್ಮ ವಾಟ್ಸಾಪ್​ ನಂಬರ್​ಗೆ ಬರುತ್ತೆ. ಈ ಲಿಂಕ್​ನ ನೀವು ಕ್ಲಿಕ್​ ಮಾಡಿ ನಿಮ್ ಡೀಟೇಲ್ಸ್​ ತುಂಬಿ ಅಂತ ಕೂಡ ಹೇಳುತ್ತಾರೆ. ಆದ್ರೆ ಆ ಲಿಂಕ್​ ಬರೀ ಲಿಂಕ್ ಆಗಿರೋದಿಲ್ಲ. ಬದಲಿಗೆ ನಿಮ್ಮ ಫಿನನ್ಸಿಯಲ್ ಅಪ್ಲಿಕೇಶನ್ ಪಡೆಯೋ ವೇದಿಕೆ ಆಗಿರುತ್ತೆ. ನೀವು ಆ ಮೆಸೇಜ್‌ನಲ್ಲಿ ಬಂದಿರೋ ಲಿಂಕ್‌ ಓಪನ್‌ ಮಾಡಿದ್ರೆ ನಿಮ್ಮ ಡೀಟೇಲ್ಸ್ ತುಂಬಿಸಲು ಕೇಳುತ್ತೆ. ಅದು ಆಧಾರ್‌ ಇರಬಹುದು, ಪ್ಯಾನ್‌ ಕಾರ್ಡ್‌ ಇರಬಹುದು ಅಥವಾ ಅಕೌಂಟ್ ಡೀಟೇಲ್ಸ್ ತುಂಬಿಸೋಕೆ ರಿಕ್ವೆಸ್ಟ್‌ ಮಾಡುತ್ತೆ. ಇದು ಜಾಬ್‌ ಅಪ್ಲಿಕೇಶನ್ ಡೀಟೇಲ್ಸ್ ಅಂತ ನಂಬಿಸಿ ಬಿಡ್ತಾರೆ ಖದೀಮರು.

ಇದನ್ನು ಓದಿ: ರಾಜ್ಯಸಭಾ ಚುನಾವಣೆಯ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ FIR ದಾಖಲು; ಕಾರಣವೇನು?

ಆದ್ರೆ ನೀವು ಅವ್ರ ಮಾತನ್ನ ನಂಬಿ ತಿಂಗಳು ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು ಅಂದ್ಕೊಂಡು ಅಕೌಂಟ್‌, ಕಾರ್ಡ್‌ ಡೀಟೇಲ್ಸ್ ಕೊಟ್ಟರೆ ಗೋವಿಂದ. ನಿಜವಾಗಲೂ ಎಲ್ಲಾ ಗೋವಿಂದಾ. ಯಾಕಂದ್ರೆ ನೀವು ಲಿಂಕ್‌ ಕ್ಲಿಕ್‌ ಮಾಡ್ತಿದ್ದ ಹಾಗೇ ಸೈಬರ್‌ ಖದೀಮರು ನಿಮ್ಮ ಅಕೌಂಟ್‌ನೇ ಹ್ಯಾಕ್‌ ಮಾಡಿ ಬಿಡುತ್ತಾರೆ. ಜಾಬ್‌ ಅಪ್ಲಿಕೇಶನ್ ಇದು ಅಂತ ಯಮಾರಿಸ್ತಾನೆ, ನಿಮ್ಮಿಂದಲೇ OTP ಕೂಡ ಹಾಕ್ಸಿ, ಅಕೌಂಟ್‌ ಖಾಲಿ ಮಾಡಿಸಿಬಿಡುತ್ತಾರೆ. ಬರೀ ದುಡ್ಡು ಮಾತ್ರ ಅಲ್ಲ, ಪರ್ಸನಲ್‌ ಡೀಟೇಲ್ಸ್ ಕೂಡ ಕದಿಯೋ ಚಾನ್ಸ್‌ ಇರುತ್ತೆ. ಅದನ್ನ ಇಟ್ಕೊಂಡು ನಿಮ್ಮನ್ನ ಬ್ಲ್ಯಾಕ್‌ಮೇಲ್‌ ಮಾಡಬಹುದು, ಬೇರೆ ಯಾರಿಗಾದ್ರೂ ಕಳಿಸ್ಬೋದು ಅಥವಾ ವೈರಲ್‌ ಮಾಡೋ ಚಾನ್ಸ್‌ ಕೂಡ ಇರುತ್ತೆ.

ಈ ರೀತಿ ವಾಟ್ಸಾಪ್​ ದೋಖಾದಿಂದ ಹೇಗೆ ಬಚಾವಾಗೋದು?

ಇಂತಹ ಮೆಸೇಜ್​ಗಳು ಬಂದಾಗ ಅದನ್ನ ಆದಷ್ಟು ಅವಾಯ್ಡ್ ಮಾಡಿ. ಅಂದ್ರೆ ನಿಮ್ಮ ವಾಟ್ಸಾಪ್​ಗೆ ಮೆಸೇಜ್​ ಬಂದರೆ ಅದನ್ನು ಓಪನ್ ಮಾಡಿ ನೋಡಿದರೆ, ಯಾವುದೇ ಕಾರಣಕ್ಕೆ ಅದರಲ್ಲಿರೋ ಲಿಂಕ್ ಓಪನ್ ಮಾಡಲೇಬೇಡಿ. ಅದು ಎಷ್ಟೇ ಜೆನ್ಯೂನ್ ಎನಿಸಿದರೂ ಕೂಡ ಓಪನ್ ಮಾಡಬೇಡಿ. ಅಷ್ಟೇ ಅಲ್ಲದೇ ಇಂತಹ ಮೆಸೇಜ್ ಕಳುಹಿಸಿದ ನಂಬರ್​ನ ಆ ಕೂಡಲೇ ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ. ತುಂಬಾ ಮುಖ್ಯವಾಗಿ ಮೊಬೈಲ್‌ಗೆ ಆ್ಯಂಟಿ ವೈರಸ್​ ಹಾಕ್ಕೊಳ್ಳಿ. ಇದರಿಂದ ಥರ್ಡ್ ಪಾರ್ಟಿ ಸಾಫ್ಟ್​ವೇರ್​ಗಳನ್ನ ನಿಮ್ಮ ಫೋನ್​​ನಲ್ಲಿ ನೀವು ಡೌನ್​ಲೋಡ್​ ಮಾಡೋಕೆ ಹೋದ್ರೆ ಅಂತಹ ಡೇಂಜರಸ್​ ವೆಬ್​ಸೈಟ್​ಗಳಿಂದ ಆ್ಯಂಟಿ ವೈರಸ್​ ನಿಮ್ಮನ್ನ ಕಾಪಾಡುತ್ತೆ. ಇದ್ರ ಜೊತೆಗೆ ಸ್ಕ್ಯಾಮ್​ ಮೆಸೇಜ್​ಗಳಲ್ಲಿರೋ ವಾಕ್ಯದ ವ್ಯಾಕರಣ ತಪ್ಪಾಗಿರುತ್ತೆ. ಹೀಗೆ ಸ್ಕ್ಯಾಮ್ ಮೆಸೇಜ್​ಗಳನ್ನ ಕಳುಹಿಸೋರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ವ್ಯಾಕರಣ ಬಳಕೆ ಮಾಡಿ ವಾಕ್ಯ ರಚನೆ ಮಾಡಿರೋದಿಲ್ಲ. ಅದರಲ್ಲಿ ಸಾಕಷ್ಟು ಸ್ಪೆಲ್ಲಿಂಗ್ ಮಿಸ್ಟೇಕ್ ಹಾಗೂ ವಾಕ್ಯ ರಚನೆ ತಪ್ಪಿರುತ್ತದೆ. ಇದರಿಂದ ಕೂಡ ಆ ಮೆಸೇಜ್ ಜೆನ್ಯೂನ್ ಅಲ್ಲ ಅನ್ನೋದು ಈಸಿಯಾಗಿ ತಿಳಿದುಬಿಡುತ್ತದೆ. ಸೋ ಇದೂ ನಿಮ್ಮ ಗಮನದಲ್ಲಿರಲಿ. ಒಂದೇ ಒಂದು ವಾಟ್ಸಾಪ್​ ಮೆಸೇಜ್​ನಿಂದ ಖದೀಮರು ಹೇಗೆ ದುಡ್ಡನ್ನ ದುಡಿಯೋಕೆ ಕಾಯ್ತಾ ಇದ್ದಾರೆ ಅಂತ. ಸೋ ಲಿಂಕ್​ ಕ್ಲಿಕ್ ಮಾಡಿ ಆಮೇಲೆ ದುಡ್ಡೂ ಇಲ್ಲ, ಕೆಲಸಾನೂ ಇಲ್ಲದೇ ಇರೋ ಹಾಗೆ ಮಾಡ್ಕೋಬೇಡಿ. ಇಂತಹ ಮೆಸೇಜ್​ಗೆ ಮೋಸ ಹೋಗೋಕು ಮುಂಚೆ ಎಚ್ಚರವಹಿಸಿ.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಟ್ಸಾಪ್ ಬಳಸುವವರೇ ಹುಷಾರ್.. ಖತರ್ನಾಕ್ ಖದೀಮರ ಹೊಸ ಮಾರ್ಗ ಬಯಲು; ಏನದು?

https://newsfirstlive.com/wp-content/uploads/2024/02/Whatsaap.jpg

Load More