Advertisment

ಉಚಿತ, ಉಚಿತ, ಉಚಿತ..! ಮೋದಿ ಪ್ರಣಾಳಿಕೆಯಲ್ಲಿ ಏನೆಲ್ಲ ಉಚಿತ ಘೋಷಣೆ..?

author-image
Ganesh
Updated On
ಉಚಿತ, ಉಚಿತ, ಉಚಿತ..! ಮೋದಿ ಪ್ರಣಾಳಿಕೆಯಲ್ಲಿ ಏನೆಲ್ಲ ಉಚಿತ ಘೋಷಣೆ..?
Advertisment
  • ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ರಿಲೀಸ್ ಮಾಡಿದ ಬಿಜೆಪಿ
  • ದೇಶದಲ್ಲಿ ಮತ್ತೆ ಅಧಿಕಾರ ರಚಿಸಲು ಬಿಜೆಪಿ ಸರ್ಕಸ್ ಮಾಡುತ್ತಿದೆ
  • ಏಪ್ರಿಲ್ 19ರಂದು ದೇಶದಲ್ಲಿ ಮೊದಲ ಹಂತದ ಮತದಾನ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮೋದಿ ಅವರು, ಮತ್ತೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಯಾದರೆ ಮುಂದಿನ ಐದು ವರ್ಷಕ್ಕೆ ಏನೆಲ್ಲ ಕೆಲಸ ಮಾಡುತ್ತೇವೆ, ಐದು ವರ್ಷ ದೇಶದ ನಾಗರಿಕರಿಗೆ ಏನೆಲ್ಲ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದರು.

Advertisment

ಮೋದಿ ಹೇಳಿದ್ದೇನು..? ಯುವಕರು, ಮಹಿಳೆಯರು, ರೈತರು ಹಾಗೂ ಬಡವರನ್ನು ಇಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಇದೆ. ಉಚಿತ ವಿದ್ಯುತ್ ಯೋಜನೆ, ಉಚಿತ ಧಾನ್ಯ ಯೋಜನೆ ಅಡಿಯಲ್ಲಿ ಅನೇಕ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದರು. ಸ್ವಾನಿಧಿ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್ ಯೋಜನೆ ಇತರೆ ಯೋಜನೆಗಳನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಇರಾನ್ ಹಿಡಿತದಲ್ಲಿ 17 ಭಾರತೀಯರು; ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾದ್ರೆ ಭಾರತಕ್ಕೆ ದೊಡ್ಡ ಸಮಸ್ಯೆ, ಯಾಕೆ ಗೊತ್ತಾ?

publive-image

ಮುಂದಿನ ಐದು ವರ್ಷಗಳ ಕಾಲ..
ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. 2020ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಈ ಯೋಜನೆಯಡಿ 80 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಬಡವರ ತಟ್ಟೆಯನ್ನು ಖಾಲಿ ಬಿಡಲು ಬಿಡುವುದಿಲ್ಲ ಎಂದಿದ್ದಾರೆ.

Advertisment

70 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ಚಿಕಿತ್ಸೆ
ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ. ಇತರೆ ಆರೋಗ್ಯ ಸೇವೆಗಳನ್ನೂ ಇದರಡಿ ಸೇರಿಸಲಾಗುವುದು. ಶೇಕಡಾ 80 ರಷ್ಟು ರಿಯಾಯತಿಯೊಂದಿಗೆ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಲಭ್ಯವಾಗಲಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವರ್ಗದ ಹಿರಿಯರನ್ನು ಸಹ ಆಯುಷ್ಮಾನ್ ಯೋಜನೆಯ ವ್ಯಾಪ್ತಿಯಲ್ಲಿ ತರಲಾಗುತ್ತದೆ ಎಂದರು.

ಇದನ್ನೂ ಓದಿ: ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್​ ಇಲ್ಲಿದೆ..

publive-image

ಪೈಪ್​ಲೈನ್ ಮೂಲಕ ಎಲ್​ಪಿಜಿ:
ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗುತ್ತಿದೆ. ಪ್ರತಿ ಮನೆಗೂ ಗ್ಯಾಸ್ ಸೌಲಭ್ಯ ತಲುಪಿದೆ. ಈಗ ಪೈಪ್ ಮೂಲಕ ಪ್ರತಿ ಮನೆಗೆ ಅಗ್ಗದ ಅಡುಗೆ ಅನಿಲ ತಲುಪಿಸಲಾಗುವುದು. ಮೂರು ಕೋಟಿ ಕುಟುಂಬಗಳಿಗೆ ಶಾಶ್ವತ ಮನೆ ನೀಡಲಾಗುವುದು ಎಂದರು.

Advertisment

ಉಚಿತ ವಿದ್ಯುತ್
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಸೋಲಾರ್ ಮೂಲಕ 300 ಯುನಿಟ್​ವರೆಗೆ ಉಚಿತ್ ವಿದ್ಯುತ್ ನೀಡಲಾಗುವುದು ಎಂದರು. ಅಷ್ಟೇ ಅಲ್ಲ, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುವ ಜನರು, ವಾರ್ಷಿಕ ಸಾವಿರಾರರು ರೂಪಾಯಿ ಮುದ್ರಾ ಯೋಜನೆಯ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: 7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುಟ್ಯೂಬ್ ಸ್ಟಾರ್​ ಜೋಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment