newsfirstkannada.com

ಫ್ರೀ ಬಸ್​​ನಿಂದ ಭಾರೀ ನಷ್ಟ; ಸಂಬಳ ನೀಡಲಾಗದ ಸ್ಥಿತಿಯಲ್ಲಿವೆಯೇ ಸಾರಿಗೆ ಸಂಸ್ಥೆಗಳು?

Share :

Published August 5, 2023 at 6:32am

    ಶಕ್ತಿ ಯೋಜನೆ ಭರ್ಜರಿ ರೆಸ್ಪಾನ್ಸ್​​..!

    ಫ್ರೀ ಬಸ್​ ಸ್ಕೀಮ್​ನಿಂದ ಭಾರೀ ನಷ್ಟ

    ರಾಜ್ಯ ಸರ್ಕಾರದ ಮುಂದಿನ ನಡೆಯೇನು?

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಸಿಕ್ಕಿದ್ದು ಭರ್ಜರಿ ರೆಸ್ಪಾನ್ಸ್‌. ಆದ್ರೆ ಮೊದಲೇ ಲಾಸ್‌ನಲ್ಲಿರೋ ಸಾರಿಗೆ ಸಂಸ್ಥೆಗೆ ಸರ್ಕಾರ ತಿಂಗಳು ತಿಂಗಳು ದುಡ್ಡು ಹಾಕುತ್ತಾ ಅನ್ನೋ ಪ್ರಶ್ನೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಶಕ್ತಿಯ ಮೊದಲ ಕಂತಿನ ಪೈಕಿ 125.48 ಕೋಟಿ ರೂಪಾಯಿ ಹಣವನ್ನ ಸರ್ಕಾರ ರಿಲೀಸ್‌ ಮಾಡಿದೆ.

ಸಾರಿಗೆ ಸಂಸ್ಥೆಗೆ ಕೊಡಬೇಕಿರೋದು 734 ಕೋಟಿ ರೂಪಾಯಿ

ಯೆಸ್​​, ಇದುವರೆಗೂ 4 ನಿಗಮ ಸೇರಿ 29 ಕೋಟಿಯ 32 ಲಕ್ಷದ 49 ಸಾವಿರದ 151 ಶಕ್ತಿ ಟಿಕೆಟ್‌ ವಿತರಿಸಲಾಗಿದೆ. ಇದ್ರ ಒಟ್ಟು ಮೌಲ್ಯ 734 ಕೋಟಿಯ 74 ಲಕ್ಷ ರೂಪಾಯಿ. ಸರ್ಕಾರ ಈಗ ಕೊಟ್ಟಿರೋದು ಕೇವಲ 125 ಕೋಟಿ ಮಾತ್ರ. ಮೊದಲ ಕಂತಿನಲ್ಲಿ 250.96 ಕೋಟಿ ನೀಡಿ ಅಂತ ನಿಗಮಗಳು ಪ್ರಸ್ತಾವನೆ ಸಲ್ಲಿಸಿದಳು. ಹೀಗಾಗಿ ಮೊದಲೇ ಆರ್ಥಿಕ ನಷ್ಟದಲ್ಲಿ ಓಡ್ತಿರೋ ಸಾರಿಗೆ ನಿಗಮಗಳ ನಿರೀಕ್ಷೆ ಈಗ ಹುಸಿಯಾಗಿದೆ.

ಸರ್ಕಾರ ಹಣ ಬಿಡುಗಡೆ ಮಾಡದೆ ಸಂಬಳ ನೀಡಲಾಗದ ಸ್ಥಿತಿಯಲ್ಲಿ ನಿಗಮಗಳಿವೆ. ಸದ್ಯ ಅಗಸ್ಟ್ 1 ರಂದು ಕೆಎಸ್‌ಆರ್‌ಟಿಸಿ ತನ್ನಲ್ಲಿರೋ ಹಣದಲ್ಲಿ 140 ಕೋಟಿ ರೂಪಾಯಿ ಸಂಬಳವಾಗಿ ವಿತರಿಸಿದೆ. ಉಳಿದ ನಿಗಮಗಳ ಸ್ಥಿತಿ ಸದ್ಯ ಚಿಂತಾಜನಕ. ಹೀಗಾಗಿಯೇ ಮಾಜಿ ಸಿಎಂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಾರಿಗೆ ನಿಗಮ ತಿಂಗಳ ಖರ್ಚು

4 ನಿಗಮಗಳಿಗೆ ತಿಂಗಳ ಸಂಬಳದ ವೆಚ್ಚವೇ ₹400 ಕೋಟಿ ರೂಪಾಯಿ ಆಗುತ್ತೆ. ಡಿಸೇಲ್ ಸೇರಿ ಇತರೆ ಖರ್ಚು₹ 647 ಕೋಟಿ‌. 4 ನಿಗಮಗಳ ಒಟ್ಟು ಕಾರ್ಯಾಚರಣೆಯ ವೆಚ್ಚ ₹1047 ಕೋಟಿ. ಇನ್ನೂ ಪುರುಷರ ಓಡಾಟ ಹಾಗೂ ಪರ್ಯಾಯ ಆದಾಯದಿಂದ 550 ಕೋಟಿ ರೂಪಾಯಿ ಬಂದಿದೆ. ಶಕ್ತಿ ಯೋಜನೆಯ ಕೇವಲ 1 ತಿಂಗಳ ವೆಚ್ಚ ₹450 ಕೋಟಿ ಆಗಿದ್ದು ಅದನ್ನ ಸರ್ಕಾರವೇ ಭರಿಸಬೇಕಿದೆ.

ಒಟ್ಟಿನಲ್ಲಿ ಶಕ್ತಿ ಯೋಜನೆಯ ಕ್ರೆಡಿಟ್‌ ತೆಗೆದುಕೊಳ್ಳುವಲ್ಲಿ ಮುಂದಿರುವ ಸರ್ಕಾರ ಇದಕ್ಕಾಗಿ ಖರ್ಚಾದ ವೆಚ್ಚ ಭರಿಸೋಕೆ ಹಿಂದೆ ಬೀಳುತ್ತಿದೆ. ಸಚಿವರು ಉಳಿದ ಮೊತ್ತ ಬೇಗ ಬಿಡುಗಡೆ ಆಗುತ್ತೆ ಅಂತಿದ್ದಾರೆ. ಒಂದು ವೇಳೆ ಹಾಗಾದರೆ ಯೋಜನೆ ಜಾರಿ ವೇಳೆ ವಿಪಕ್ಷಗಳು ನೀಡಿದ್ದ ಎಚ್ಚರಿಕೆ ನಿಜವಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​​ನಿಂದ ಭಾರೀ ನಷ್ಟ; ಸಂಬಳ ನೀಡಲಾಗದ ಸ್ಥಿತಿಯಲ್ಲಿವೆಯೇ ಸಾರಿಗೆ ಸಂಸ್ಥೆಗಳು?

https://newsfirstlive.com/wp-content/uploads/2023/07/bmtc-bus-1.jpg

Load More