newsfirstkannada.com

ಇಂದಿನಿಂದ ಬಸ್​ಗಳಲ್ಲಿ ಫ್ರೀ ಪ್ರಯಾಣ.. ಮಹಿಳೆಯರು ಪಾಲಿಸಲೇಬೇಕಾದ ನಿಯಮಗಳು!

Share :

Published June 11, 2023 at 1:02am

    ಮೊದಲ ಗ್ಯಾರಂಟಿ ಜಾರಿಗೆ ಸಿದ್ದು ಸರ್ಕಾರ ಸನ್ನದ್ಧ

    ಇಂದಿನಿಂದ ಮಹಿಳೆಯರಿಗೆ ಉಚಿತ ‘ಶಕ್ತಿ’ ಜಾರಿ!

    ಸಾಮಾನ್ಯ, ವೇಗದೂತ, ಬಿಎಂಟಿಸಿ ಬಸ್​ನಲ್ಲಿ ಫ್ರೀ

ಬೆಂಗಳೂರು: ಶಕ್ತಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತರ್ತಿರೋ ಯೋಜನೆ.. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷಿ ಸ್ಕೀಂ.. ಇದೀಗ ಈ ಶಕ್ತಿಯೋಜನೆ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ.. ಇಂದಿನಿಂದಲೇ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ಸಿಗಲಿದೆ.. ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಫ್ರೀಯಾಗಿ ಪ್ರಯಾಣಿಸುವ ದಿನ ಸನ್ನಿಹಿತವಾಗಿದೆ.

ರಾಜ್ಯದಲ್ಲಿ ಮೊದಲ ಗ್ಯಾರಂಟಿಯನ್ನ ಜಾರಿಗೊಳಿಸಲು ಸರ್ಕಾರ ಸನ್ನದ್ಧವಾಗಿದೆ. ಮೊಟ್ಟ ಮೊದಲ ಗ್ಯಾರಂಟಿಯಾಗಿ ಶಕ್ತಿಯೋಜನೆ.. ಅಂದ್ರೆ, ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸೋ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ..

ಇಂದು ಮಹಿಳೆಯರಿಗೆ ಫ್ರೀ ಬಸ್‌ ಯೋಜನೆ ‘ಶಕ್ತಿ’ ಜಾರಿ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ.. ಇಂದು ರಾಜ್ಯಾದ್ಯಂತ ಏಕ‌ಕಾಲಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.. ಬೆಂಗಳೂರಿನ ವಿಧಾನಸೌಧದ ಬಳಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.. ಕೆಎಸ್ಆರ್‌ಸಿ, ಬಿಎಂಟಿಸಿ, NWKRTC ಹಾಗೂ KKRTCಯ ನಾಲ್ಕು ಸಾಮಾನ್ಯ ಬಸ್‌ಗಳನ್ನ ತಂದು ನಿಲ್ಲಿಸಲಾಗುತ್ತದೆ. ಬಳಿಕ ಆ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರು ಇರಲಿದ್ದು, ಅವರಿಗೆ ಝೀರೋ ದರದ ಪಿಂಕ್ ಟಿಕೆಟ್‌ ಅನ್ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಫ್ರೀ ಟಿಕೆಟ್​ ನೀಡುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.. ಬಳಿಕ 1 ಗಂಟೆ ಬಳಿಕ ರಾಜ್ಯದ ಮಹಿಳೆಯರು ಫ್ರೀಯಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ..

ಸ್ಟಿಕ್ಕರ್ ಇರೋ ಬಸ್​ಗಳಲ್ಲಿ ಮಾತ್ರ ಫ್ರೀ ಪ್ರಯಾಣ

ಶಕ್ತಿ ಯೋಜನೆಗೂ ಸರ್ಕಾರ ಹಲವು ಷರತ್ತುಗಳನ್ನ ವಿಧಿಸಿದೆ.. ಇದೀಗ ಸಾರಿಗೆ ಬಸ್‌ಗಳಲ್ಲಿ ಫ್ರೀ ಪ್ರಯಾಣ ಎಂಬ ಸ್ಟಿಕ್ಕರ್ ಹಾಕಲಾಗುತ್ತೆ.. ಈ ಸ್ಟಿಕ್ಕರ್ ಇರೋ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಮಹಿಳೆಯರು ಫ್ರೀಯಾಗಿ ಪ್ರಯಾಣಿಸಬಹುದು ಅಂತಾ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಅಲ್ಲದೇ ಮುಂದಿನ ಮೂರು ತಿಂಗಳಲ್ಲಿ ಸ್ಟಾರ್ಟ್‌ ಕಾರ್ಡ್‌ ಪಡೆಯಲು ಅವಕಾಶ ನೀಡಲಾಗುತ್ತೆ ಎಂಬ ಮಾಹಿತಿ ನೀಡಿದ್ದಾರೆ..

ಒಟ್ಟಾರೆ, ನುಡಿದಂತೆ ನಡೆಯುತ್ತೇವೆ ಎನ್ನುತ್ತಿರೋ ಕಾಂಗ್ರೆಸ್, ಕೊಟ್ಟಿರೋ ಪಂಚ ಗ್ಯಾರಂಟಿಯಲ್ಲಿ ಶಕ್ತಿ ಯೋಜನೆಯನ್ನ ಮೊದಲು ಬಾರಿಗೆ ಜಾರಿ ಮಾಡುತ್ತಿದೆ. ಈ ಮೂಲಕ ಇಂದಿನಿಂದಲೇ ಮಹಿಳೆಯರು ಫ್ರೀಯಾಗಿ ಸರ್ಕಾರದ ನಾನ್ ಲಕ್ಸುರಿ ಬಸ್‌ಗಳಲ್ಲಿ ಸಂಚರಿಸೋದು ಗ್ಯಾರಂಟಿಯಾಗಿದೆ..

ಫ್ರೀ ಪ್ರಯಾಣಕ್ಕೆ ಇವುಗಳಲ್ಲಿ ಯಾವುದಾದ್ರೂ ಒಂದು ಕಾರ್ಡ್​​ ಬೇಕು..!

    • ಆಧಾರ್ ಕಾರ್ಡ್
    • ಪಾನ್ ಕಾರ್ಡ್
    • ಡ್ರೈವಿಂಗ್ ಲೈಸೆನ್ಸ್
    • ವಾಸಸ್ಥಳ ದೃಢೀಕರಣ ಪತ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಬಸ್​ಗಳಲ್ಲಿ ಫ್ರೀ ಪ್ರಯಾಣ.. ಮಹಿಳೆಯರು ಪಾಲಿಸಲೇಬೇಕಾದ ನಿಯಮಗಳು!

https://newsfirstlive.com/wp-content/uploads/2023/06/BMTC-Bus.jpg

Load More