newsfirstkannada.com

‘ಆಗೋದೆಲ್ಲ ಒಳ್ಳೆಯದಕ್ಕೆ, ಬಿಡೋ ಮಾತೇ ಇಲ್ಲ’ ಅಂತಿದ್ದಾರೆ ಹಿಟ್​ಮ್ಯಾನ್ ರೋಹಿತ್..!

Share :

Published March 21, 2024 at 11:50am

    ಬೇಸರ ಬದಿಗೊತ್ತಿ ಅಖಾಡಕ್ಕೆ ಧುಮುಕಿದ ರೋಹಿತ್

    ಮೊದಲ ಟ್ರೈನಿಂಗ್​​ ಸೆಷನ್​​​ನಲ್ಲಿ ಗುಡುಗಿದ್ದೇಕೆ ರೋಹಿತ್​​..?

    ರೋಹಿತ್ ಈಗ ಕ್ಯಾಪ್ಟನ್ ಅಲ್ಲ, ಬರೀ ಆಟಗಾರ

ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋ ಮಾತಿದೆ. ಈ ಮಾತು ಐಪಿಎಲ್ ಮಹಾರಾಜ ರೋಹಿತ್​ ಶರ್ಮಾಗೆ ತುಂಬಾನೇ ಸೂಟ್ ಆಗುತ್ತೆ. ಯಾಕಂದ್ರೆ ರೋಹಿತ್ ಸದ್ಯ ಮುಂಬೈ ಕ್ಯಾಪ್ಟನ್ ಅಲ್ಲ. ಬರೀ ಆಟಗಾರ ಮಾತ್ರ. ಇದೇ ಸದ್ಯ ಹಿಟ್​ಮ್ಯಾನ್​ಗೆ ಅಡ್ವಾಂಡೇಜ್​​​​. ಈ ಸಲ ರೋಹಿತ್​​​​​ ಬೌಲರ್ಸ್​ ಮಾರಣಹೋಮ ನಡೆಸೋದು ಪಕ್ಕಾ!

ಸೈಲೆಂಟಾಗಿರೋ ಟೈಗರ್​​​​​​ ಕೆಣಕೋದು ದೊಡ್ಡ ತಪ್ಪು. ಆ ತಪ್ಪನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಡಿದೆ. ತಂಡಕ್ಕೆ ಎಲ್ಲವನ್ನೂ ತಂದುಕೊಟ್ಟಿದ್ದ ಹಿಟ್​ಮ್ಯಾನ್​​ರನ್ನ ಕೆಳಗಿಳಿಸಿ, ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಿದೆ. ಇದರಿಂದ ರೋಹಿತ್​ಗೆ ದೊಡ್ಡ ಅವಮಾನವಾಗಿದೆ. ಇದಕ್ಕೆ ತಕ್ಕ ಪ್ರತಿಕಾರ ತೀರಿಸಿಕೊಳ್ಳಲು ಇರೋದೊಂದೇ ದಾರಿ. ರನ್ ಭರಾಟೆ. ಅದೇ INTENSITY ಇಟ್ಟುಕೊಂಡ ರೋಹಿತ್ ಮುಂಬರೋ ಐಪಿಎಲ್​​​​​ ವಾರ್​​ನಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ.

ಬೇಸರ ಬದಿಗೊತ್ತಿ ಅಖಾಡಕ್ಕೆ ಧುಮುಕಿದ ರೋಹಿತ್​​​​..!
ರೋಹಿತ್​​ ಶರ್ಮಾ ಆಗ ಮುಂಬೈ ಕ್ಯಾಂಪ್​ ಸೇರ್ತಾರೆ, ಈಗ ಮುಂಬೈ ಕ್ಯಾಂಪ್ ಸೇರ್ತಾರೆ ಅಂತ ಫ್ಯಾನ್ಸ್​ ಬಕಪಕ್ಷಿಯಂತೆ ಕಾಯ್ತಿದ್ರು. ಕೊನೆಗೂ ಹಿಟ್​ಮ್ಯಾನ್​​ ಆ ಎಲ್ಲಾ ಕಾಯುವಿಕೆಗೆ ಅಂತ್ಯಹಾಡಿದ್ರು. ಸೋಮವಾರ ತಂಡ ಸೇರಿಕೊಂಡ ರೋಹಿತ್​​​​​, ಬರ್ತಿದ್ದಂತೆ ನೆಟ್ಸ್​​ನಲ್ಲಿ ಧೂಳೆಬ್ಬಿಸಿದ್ದಾರೆ. ಮಾಜಿ ಕ್ಯಾಪ್ಟನ್​​ ಮುಂಬೈ ಕ್ಯಾಂಪ್ ಸೇರಿದ ಬೆನ್ನಲ್ಲೆ ಬ್ಯಾಟ್​ ಹಿಡಿದು ಘರ್ಜಿಸಿದ್ದಾರೆ. ಆಡಿದ ಮೊದಲ ಟ್ರೈನಿಂಗ್​​ ಸೆಷನ್​​ನಲ್ಲಿ ಹೈ ಜೋಶ್​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿದ್ದಾರೆ. ಡಿಫೆನ್ಸ್​​​, ಪ್ಲಿಕ್ ಶಾಟ್​​, ಸ್ಟೆಪ್​​ ಔಟ್​​​​​, ಬ್ಯಾಕ್​​ಪುಟ್​​ ಶಾಟ್​​​​, ಫುಲ್​ ಶಾಟ್​​, ಹುಕ್​​​​​ ಹಾಗೂ ಓವರ್​​ ದಿ ಮಿಡ್ ವಿಕೆಟ್​​​​​​​. ಎಲ್ಲಾ ಬಗೆಯ ಶಾಟ್ಸ್​​​ಗಳನ್ನ ಆಡಿ ಐಪಿಎಲ್​​​​ ರಣರಂಗದಲ್ಲಿ ರಣಧೀರನಂಗೆ ಆರ್ಭಟಿಸುವ ಸೂಚನೆ ನೀಡಿದ್ದಾರೆ.

17ನೇ ಐಪಿಎಲ್​ನಲ್ಲಿ ರೋಹಿತ್​ ದರ್ಬಾರ್​ ಪಕ್ಕಾ..!
ಐಪಿಎಲ್ ಹಿಸ್ಟರಿಯಲ್ಲಿ 6211 ರನ್​​ ಕಲೆ ಹಾಕಿರೋ ರೋಹಿತ್​ ದಶಕಕ್ಕೂ ಅಧಿಕ ಫ್ಯಾನ್ಸ್​​ಗಳನ್ನ ರಂಜಿಸಿದ್ದಾರೆ. ಆದರೆ ಕಳೆದ ಮೂರು ಸೀಸನ್​ಗಳಲ್ಲಿ ಹೆಚ್ಚೇನೂ ಅಬ್ಬರಿಸಿಲ್ಲ. 2021 ರಲ್ಲಿ 381, 2022 ರಲ್ಲಿ 268 ಹಾಗೂ ಕಳೆದ ಸೀಸನ್​ನಲ್ಲಿ 332 ರನ್ ಗಳಿಸಿ ಡಿಸೆಂಟ್​ ಪ್ರದರ್ಶನ ನೀಡಿದ್ರು. ಆದ್ರೆ ಈ ಬಾರಿ ಹಾಗಾಗಲ್ಲ. ಡೆಫಿನೆಟ್ಲಿ ಕಳೆದ ಮೂರು ಸೀಸನ್​ಗಳ ಲೆಕ್ಕ ಚುಕ್ತಾ ಮಾಡೇ ಮಾಡ್ತಾರೆ. ಯಾಕಂದ್ರೆ ರೋಹಿತ್ ಈಗ ಫುಲ್ ಫ್ರೀಬರ್ಡ್​.

ರೋಹಿತ್ ಈಗ ಕ್ಯಾಪ್ಟನ್ ಅಲ್ಲ, ಬರೀ ಆಟಗಾರ
ರೋಹಿತ್​​​ರನ್ನ ಮುಂಬೈ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಿದೆ. ಈ ನಿರ್ಧಾರದಿಂದ ಹಿಟ್​ಮ್ಯಾನ್​​​​ಗೆ ಒಂದು ಲೆಕ್ಕದಲ್ಲಿ ಒಳ್ಳೆ ಆಗಿದೆ. ಯಾಕಂದ್ರೆ ರೋಹಿತ್​ ಇನ್ಮುಂದೆ ಮುಂಬೈ ತಂಡದ ಓರ್ವ ಆಟಗಾರರ ಅಷ್ಟೆ. ಕ್ಯಾಪ್ಟನ್ಸಿ ಕೈತಪ್ಪಿದ್ದರಿಂದ ಅವರ ಮೇಲಿದ್ದ ಒತ್ತಡವು ಕಮ್ಮಿ ಆಗಲಿದೆ. ಪ್ಲೇಯಿಂಗ್​​​​-11 ಆಯ್ಕೆ, ಫೀಲ್ಡ್​ ಸೆಟ್​​​, ಆಟಗಾರರಿಗೆ ಪದೇ ಪದೇ ಗೈಡಿಂಗ್​​​​, ಸೋಲಿನ ಜವಾಬ್ದಾರಿಗೆ ಹೊಣೆ ಇದ್ಯಾವರ ತಾಪತ್ರೆ ಇರಲ್ಲ. ಮೈಂಡ್ ಫ್ರೀ ಮಾಡ್ಕೊಂಡು ಆಡಬಹುದು.

ಇದರಿಂದ ಬ್ಯಾಟಿಂಗ್​ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಎದುರಾಳಿ ಬೌಲರ್​ಗಳ ತಂತ್ರವನ್ನ ತಲೆಕೆಳಗಾಗಿಸಿ ರನ್ ಗುಡ್ಡೆ ಹಾಕಬಹುದು. ಹೇಳಿ ಕೇಳಿ ರೋಹಿತ್​​ ಶರ್ಮಾ ಅನುಭವಿ ಕ್ರಿಕೆಟರ್​​. ಅವರಿಗೆ ಯಾವ ಬೌಲರ್​ನನ್ನ ಹೇಗೆ ಹ್ಯಾಂಡಲ್​​ ಮಾಡ್ಬೇಕು ಅನ್ನೋ ಚೆನ್ನಾಗಿ ಗೊತ್ತಿದೆ. ಹೀಗಾಗಿ 17ನೇ ಐಪಿಎಲ್​ನಲ್ಲಿ ರೋಹಿತ್ ರಣಾರ್ಭಟ ಪಕ್ಕಾ. ಫ್ಯಾನ್ಸ್​​ ಮನರಂಜನೆಯ ಫುಲ್ ಮೀಲ್ಸ್ ಸವಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆಗೋದೆಲ್ಲ ಒಳ್ಳೆಯದಕ್ಕೆ, ಬಿಡೋ ಮಾತೇ ಇಲ್ಲ’ ಅಂತಿದ್ದಾರೆ ಹಿಟ್​ಮ್ಯಾನ್ ರೋಹಿತ್..!

https://newsfirstlive.com/wp-content/uploads/2024/03/ROHIT.jpg

Load More