RCB ಗೆದ್ದರೇ ಜಿಲ್ಲೆಯ ಎಲ್ಲ ಇಂದಿರಾ ಕ್ಯಾಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ

author-image
Bheemappa
Updated On
RCB ಗೆದ್ದರೇ ಜಿಲ್ಲೆಯ ಎಲ್ಲ ಇಂದಿರಾ ಕ್ಯಾಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
Advertisment
  • ಸಾಂಕೇತಿಕವಾಗಿ ಉಚಿತ‌ ಹೋಳಿಗೆ ಊಟ ವಿತರಿಸಿದ ಅಭಿಮಾನಿ
  • ನಗರದ ಎಲ್ಲ 16 ಇಂದಿರಾ ಕ್ಯಾಂಟೀನ್​ಗಳಲ್ಲಿ ಹೋಳಿಗೆ ಊಟ
  • RCB ಫೈನಲ್ ಗೆದ್ದರೆ ಜಿಲ್ಲೆಯ ಎಲ್ಲ ಕ್ಯಾಂಟೀನ್​ಗಳಲ್ಲಿ ಹೋಳಿಗೆ

ಮೈಸೂರು: ಸತತ 18 ವರ್ಷಗಳ ಕನಸು ಈಡೇರಿಕೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೇವಲ ಒಂದೇ ಒಂದು ಹೆಜ್ಜೆ ಬಾಕಿ ಇದೆ. ನಾಳೆ ಅಂದರೆ ಜೂನ್ 1 ರಂದು ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್​ ನಡುವೆ ಫೈನಲ್​​ನಲ್ಲಿ ಬಿಗ್ ಫೈಟ್​ ನಡೆಯಲಿದೆ. ಆರ್​ಸಿಬಿ ಫೈನಲ್ ಪಂದ್ಯ ಗೆದ್ದರೇ ಉಚಿತ ಹೋಳಿಗೆ ಊಟ ಹಾಕಿಸಲಾಗುವುದು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ಮೈಸೂರಿನ ಆರ್​ಸಿಬಿಯ ಅಪ್ಪಟ ಅಭಿಮಾನಿ ಆಗಿರುವ ಬಸವರಾಜ ಬಸಪ್ಪ ಅವರು ತಂಡ ಕ್ವಾಲಿಫೈಯರ್​-1 ರಲ್ಲಿ ಗೆದ್ದು ಫೈನಲ್​ಗೆ ಹೋಗಿದ್ದಕ್ಕೆ ಈಗಾಗಲೇ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಹೋಳಿಗೆ ಊಟ ಹಾಕಿಸಿದ್ದಾರೆ. ಫೈನಲ್​ ಪಂದ್ಯಕ್ಕೂ ಒಂದು ದಿನ ಮೊದಲು ಸಾಂಕೇತಿಕವಾಗಿ ಇವತ್ತೇ ಉಚಿತ‌ ಹೋಳಿಗೆ ಊಟ ವಿತರಿಸಿದ್ದಾರೆ.

publive-image

ನಾಳೆ ಫೈನಲ್​ನಲ್ಲಿ ಆರ್​ಸಿಬಿ ಭರ್ಜರಿ ಗೆಲುವು ಪಡೆದು ಟ್ರೋಫಿ ಎತ್ತಿ ಹಿಡಿದರೆ ಮೈಸೂರಿನ ಎಲ್ಲಾ 16 ಇಂದಿರಾ ಕ್ಯಾಂಟೀನ್​ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ರಿಂಕು ಸಿಂಗ್, MP ಪ್ರಿಯಾ ಸರೋಜ್ ಮದುವೆ ಯಾವಾಗ.. ಇಬ್ಬರು ಪರಿಚಯ ಆಗಿದ್ದು ಹೇಗೆ?

publive-image

ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲೂ‌‌ ಇದೇ ರೀತಿ ಊಟ ಹಾಕಿಸಲಿ. ಗೆದ್ದ ಸಂಭ್ರಮದಲ್ಲಿ ಎಲ್ಲರೂ ಸಿಹಿ ಊಟ ಸವಿಯಲಿ. ಗೆಲುವಿನ ಸಂಭ್ರಮ ಹಂಚಿಕೊಳ್ಳಲಿ ಅಂತ ಬಸವರಾಜ ಬಸಪ್ಪ ಸೇರಿದಂತೆ ಆರ್​ಸಿಬಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment