/newsfirstlive-kannada/media/post_attachments/wp-content/uploads/2024/11/KUMAR_BANGARAPPA.jpg)
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನೀಟ್​, ಜೆಇಇ ಹಾಗೂ ಸಿಇಟಿ ತರಬೇತಿಗಾಗಿ ಉಚಿತ ಆನ್​ಲೈನ್ ಕೋಚಿಂಗ್​​ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನ್​ಲೈನ್ ಕೋಚಿಂಗ್ ತರಬೇತಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು. ಇದು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾಗಿದ್ದು ನೀಟ್​, ಜೆಇಇ ಹಾಗೂ ಸಿಇಟಿ ಕುರಿತು ಉಚಿತ ಕೋಚಿಂಗ್ ನಡೆಸಲಾಗುತ್ತದೆ. ಇದನ್ನೂ ವಿದ್ಯಾರ್ಥಿಗಳು ಪಾಠ ಕೇಳಿ ಅಧ್ಯಯನ ನಡೆಸಬಹುದು.
ಇದನ್ನೂ ಓದಿ: KPTCLನಿಂದ 2,975 ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೇವಲ 2 ದಿನ ಮಾತ್ರ ಉಳಿದಿದೆ, ತಕ್ಷಣವೇ ಅಪ್ಲೇ ಮಾಡಿ
/newsfirstlive-kannada/media/post_attachments/wp-content/uploads/2024/11/KUMAR_BANGARAPPA_1.jpg)
ಪದವಿ ಪೂರ್ವ ಕಾಲೇಜಿನ 20 ಸಾವಿರ ಹಾಗೂ ಆದರ್ಶ ಕಾಲೇಜಿನ 5 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ಇರುತ್ತದೆ. ಪರಿಣಿತ ಉಪನ್ಯಾಸಕರಿಂದ ಪ್ರತಿದಿನ ಈ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಸದುಪಯೋಗವಾಗಲಿದೆ. PACE ಸಂಸ್ಥೆ ಮುಖಾಂತರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಬೇತಿ ನೀಡಲಾಗುತ್ತದೆ.
ಇನ್ನು ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೂಡ ಇದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us