/newsfirstlive-kannada/media/post_attachments/wp-content/uploads/2025/06/RCB-Free-Chats-2.jpg)
ಒಂದಲ್ಲ, ಎರಡಲ್ಲ ಇದು 18 ವರ್ಷಗಳ ಕನಸು. ಈ ಸಲ ಕಪ್ ನಮ್ದೇ ಅನ್ನೋ RCB ಅಭಿಮಾನಿಗಳಿಗೆ ನಾಳೆ ಬಹಳ ಮುಖ್ಯವಾಗಿದೆ. ನಾಳಿನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆದ್ರೆ ಸಂಭ್ರಮಾಚರಣೆ ಮಾಡಲು RCB ಫ್ಯಾನ್ಸ್ ಸಜ್ಜಾಗಿದ್ದಾರೆ. ಬೆಂಗಳೂರಲ್ಲಿ RCB ಕಪ್ ಗೆದ್ರೆ ಭರ್ಜರಿಯಾಗಿ ಸೆಲಬ್ರೇಟ್ ಮಾಡಲು ಸಿದ್ಧತೆಗಳು ಜೋರಾಗಿದೆ.
ನಾಳಿನ IPL ಫೈನಲ್ ಪಂದ್ಯದಲ್ಲಿ RCB ಗೆದ್ದರೆ ಮಸಾಲಪುರಿ, ಪಾನಿಪುರಿ, ಬೇಲ್‌ಪುರಿಯನ್ನು ಫ್ರೀಯಾಗಿ ನೀಡಲಾಗುತ್ತಿದೆ. RCB ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ RCB ಅಭಿಮಾನಿಗಳು ಉಚಿತವಾಗಿ ಚಾಟ್ಸ್ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/RCB-Free-Chats-1.jpg)
ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ಈ ಸಲ ಕಪ್ ನಮ್ದು ಒನ್ ಡೇ ಪಾನಿಪುರಿ ನಿಮ್ದು ಅನ್ನೋ ಬೋರ್ಡ್ ಹಾಕಿ ಗಮನ ಸೆಳೆದಿದೆ. RCB ಅಭಿಮಾನಿಯೂ ಆಗಿರುವ ಅನಿಲ್ ಚಾಟ್ಸ್ ಸೆಂಟರ್ ಮಾಲೀಕರು, ನಾಳೆ RCB ಮ್ಯಾಚ್ ಗೆದ್ದರೆ ಉಚಿತ ಚಾಟ್ಸ್ ವಿತರಣೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: RCB ಗೆದ್ದರೇ ಜಿಲ್ಲೆಯ ಎಲ್ಲ ಇಂದಿರಾ ಕ್ಯಾಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
ನಾಳೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿದ್ದು, ಜೂನ್ 4 ಅಂದ್ರೆ ಬುಧವಾರ ಸಂಜೆ 5 ಗಂಟೆಗೆ ಮಹಾಲಕ್ಷ್ಮಿ ಅನಿಲ್ ಚಾಟ್ಸ್‌ನಲ್ಲಿ ಮಸಾಲಪುರಿ, ಪಾನಿಪುರಿ, ಬೇಲ್‌ಪುರಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us