/newsfirstlive-kannada/media/post_attachments/wp-content/uploads/2024/09/oNEPLUS-13.jpg)
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಹಾಗಾಗಿ ಒಂದಿಷ್ಟು ಬಳಕೆದಾರರು ಒನ್ ಪ್ಲಸ್ ಪ್ರೊಡಕ್ಟ್​ಗಾಗಿ ಕಾಯುತ್ತಲೇ ಇರುತ್ತಾರೆ. ಹೀಗಿರುವಾಗ ಒನ್ ​ಪ್ಲಸ್​​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಸಮಸ್ಯೆ ಒಂದು ಎದುರಾಗಿದೆ. ಈ ಸಮಸ್ಯೆ ಮತ್ಯಾವುದು ಅಲ್ಲ, ಗ್ರೀನ್​ ಲೈನ್​ ಸಮಸ್ಯೆ.
ಡಿಸ್​ಪ್ಲೇ ಮೇಲೆ ಮೂಡುವ ಈ ಸಮಸ್ಯೆಯಿಂದ ಗ್ರಾಹಕರು ಭಾರೀ ತಲೆಕೆಡಿಸಿಕೊಂಡಿದ್ದಾರೆ. ಸದ್ಯ ಒನ್​ ಪ್ಲಸ್​ ಕಂಪನಿ ಈ ಗ್ರೀನ್​ ಲೈನ್​ ಸಮಸ್ಯೆ ಎದುರಿಸುವ ಎಲ್ಲರಿಗೂ ಪರಿಹಾರ ಒದಗಿಸಲು ಮುಂದಾಗಿದೆ. ಡಿಸ್​ಪ್ಲೇಯನ್ನು ಬದಲಾಯಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.
ಏನಿದು ಸಮಸ್ಯೆ?
ಒನ್​ಪ್ಲಸ್​​ 8 ಮತ್ತು ಒನ್​ಪ್ಲಸ್​​ 9 ಸರಣಿ ಸ್ಮಾರ್ಟ್​ಫೋನ್​ ಬಳಕೆದಾರರು ಡಿಸ್​ಪ್ಲೇಯಲ್ಲಿ ಗ್ರೀನ್​ ಲೈನ್​ ​ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಮಾರ್ಟ್​ಫೋನ್​ ಅಪ್ಡೇಟ್​ ಮಾಡಿದಂತೆ ಗ್ರೀನ್​ ಲೈನ್​ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬೇಸತ್ತ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲೂ ವರದಿ ಮಾಡಿದ್ದಾರೆ.
ಅನೇಕ ಭಾರತೀಯರು ಗ್ರೀನ್​ ಲೈನ್​ ಸಮಸ್ಯೆಯಿಂದ ತಲೆಕೆಡಿಸಿಕೊಂಡಿದ್ದು, ಕೊನೆಗೆ ಕಂಪನಿ ಇದನ್ನು ಮದರ್​ಬೋರ್ಡ್​​ಗಳಿಗೆ ಸಂಬಂಧಿಸಿದ ಸಮಸ್ಯೆಯೆಂದು ಗುರುತಿಸಿತು. ಬಳಕೆದಾರರು ಎದುರಿಸುತ್ತಿರುವ ಡಿಸ್​​ಪ್ಲೇ ಸಮಸ್ಯೆಗಾಗಿ ಬದಲಿ ವ್ಯವಸ್ಥೆಯನ್ನು ಮಾಡಿದೆ.
ನೀವು ಮಾಡಬೇಕಾದ ಕೆಲಸವೇನು?
ಡಿಸ್​ಪ್ಲೇ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಕಂಪನಿ ಸೂಚಿಸಿದೆ. ಯಾವುದೇ ವೆಚ್ಚವಿಲ್ಲದೆ ಗ್ರೀನ್​ ಲೈನ್​ ಸಮಸ್ಯೆಯನ್ನು ಸರಿಪಡಿಸಿಕೊಡಲಾಗುತ್ತದೆ ಎಂದು ಹೇಳಿದೆ. ಕಂಪನಿಯು ಈಗಾಗಲೇ ಒನ್​ಪ್ಲಸ್​​ 9 ಮತ್ತು 10ನಲ್ಲಿನ ಮದರ್​ಬೋರ್ಡ್​​ ಸಮಸ್ಯೆಯನ್ನು ಪರಿಹರಿಸಿದೆ. ಇದರ ಜೊತೆ ಜೊತೆಗೆ ಕಂಪನಿ ಒನ್​ಪ್ಲಸ್​​ 13 ಸ್ಮಾರ್ಟ್​ಫೋನನ್ನ ಬಿಡುಗಡೆ ಮಾಡಲು ಮುಂದಾಗಿದೆ. ಅಧಿಕೃತ ದಿನಾಂಕವನ್ನು ಸಹ ಘೋಷಣೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ