/newsfirstlive-kannada/media/post_attachments/wp-content/uploads/2025/04/FREE-SPA-AND-SEX.jpg)
ಸಾಧಾರಣವಾಗಿ ಹೋಟೆಲ್ಗಳ ಆಚೆ ಬೈ ಒನ್ ಗೆಟ್ ಟು ಫ್ರೀ.. ಇವತ್ತೀನ ವಿಶೇಷ ಭೂಜನ. ಹೋಟೆಲ್ಗಳ ಆಚೆ ಈ ರೀತಿಯ ವಿಶೇಷ ಡಿಸ್ಪ್ಲೆ ಬೋರ್ಡ್ಗಳು ಕಾಣುವುದು ಸಾಮಾನ್ಯ, ಆದ್ರೆ ರಾಜಸ್ತಾನದ ಉದಯಪುರದ ಹೋಟಲ್ ಮೇಲೆ ರಾರಾಜಿಸಿದ ಡಿಸ್ಪ್ಲೇ ಬೋರ್ಡ್ ಅಲ್ಲಿಯ ಜನರನ್ನು ಶಾಕ್ಗೆ ತಳ್ಳಿದೆ. ಉದಯಪುರ ಪ್ರವೇಶದಲ್ಲಿಯೇ ಕಾಣಸಿಗುವ ಹೋಟೆಲ್ನಲ್ಲಿ ಉಚಿತ ಸ್ಪಾ ಮತ್ತು ಸೆಕ್ಸ್ ಎಂಬ ಬೋರ್ಡ್ ರಾರಾಜಿಸಿದ್ದು. ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಉದಯಪುರದ ಸ್ಥಳೀಯರ ಸುದ್ದಿ ಮಾಧ್ಯಮದ ವರದಿಗಾರ ಹೋಟೆಲ್ ಮಾಲೀಕನ ಹತ್ತಿರ ಬೋರ್ಡ್ ಬಗ್ಗೆ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ಇನ್ನು ವರದಿಗಾರನ ಪ್ರಶ್ನೆಗೆ ಶಾಕ್ ಆಗಿರುವ ಹೋಟೆಲ್ ಮಾಲೀಕ ಇದು ಹೇಗೆ ಆಯ್ತು ಎಂಬ ಬಗ್ಗೆ ನನಗೆ ನಿಜಕ್ಕೂ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ:ಪತ್ನಿಯಿಂದ ಮಾನಸಿಕ ಕಿರುಕುಳ.. ವಿಡಿಯೋ ಮಾಡಿದ ಪತಿ ಕೊನೆಗೆ ಮಾಡಿಕೊಂಡಿದ್ದೇನು? ಬೆಚ್ಚಿ ಬೀಳಿಸುವ ಸ್ಟೋರಿ!
ಆರಂಭದಲ್ಲಿ ಹೋಟೆಲ್ನ ಆಚೆ ಇರುವ ಡಿಸ್ಪ್ಲೇ ಬೋರ್ಡ್ ನಮ್ಮದೇ ಎಂದಿದ್ದ ಹೋಟೆಲ್ನ ಮಾಲೀಕ. ಅದರಲ್ಲಿ ಓಡುತ್ತಿರುವ ಅಕ್ಷರಗಳನ್ನು ನೋಡಿ ಸ್ವತಃ ತಾನೇ ಬೆಚ್ಚಿ ಬಿದ್ದಿದ್ದಾನೆ. ಅಯ್ಯೋ ಇದೇನಿದು. ಇದು ಹೇಗೆ ಬಂತು? ಎಂದು ಏನು ಗೊತ್ತಿಲ್ಲದವನ ರೀತಿಯಲ್ಲಿ ವರ್ತಿಸಿದ್ದಾನೆ. ಅದು ಅಲ್ಲದೇ ನಮ್ಮ ಹೋಟೆಲ್ ಒಳಗೆ ಬಂದು ಎಲ್ಲಾ ರೂಮ್ಗಳನ್ನು ಚೆಕ್ ಮಾಡಿ, ಅಲ್ಲಿ ಇಂತಹ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ ಎಂದಿದ್ದಾನೆ ಹೋಟೆಲ್ ಮಾಲೀಕ. ಸದ್ಯ ರಿಪೋರ್ಟ್ ಮತ್ತು ಹೋಟೆಲ್ ಮಾಲೀಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಇದುವರೆಗೂ ಕೂಡ ಡಿಸ್ಪ್ಲೇನಲ್ಲಿ ಮೂಡಿ ಬಂದ ಅಕ್ಷರಗಳನ್ನು ಹೋಟೆಲ್ ಮಾಲೀಕನೇ ಹೇಳಿ ಬರೆಸಿದ್ದಾ ಅಥವಾ ಕಣ್ತಪ್ಪಿನಿಂದ ಆಗಿದ್ದಾ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.
ಇದನ್ನೂ ಓದಿ:ಪಪ್ಪಾ.. ಪಪ್ಪಾ ಆ ಗಯೇ.. ಕಾಗೆ ಸ್ಪಷ್ಟವಾಗಿ ಮಾತನಾಡುತ್ತೆ! ಇದು ನಿಜನಾ? ಇಲ್ಲಿದೆ VIDEO ಅಸಲಿಯತ್ತು!
ಇನ್ನು ವರದಿಗಾರ, ಹೋಟೆಲ್ ಹೆಸರಿನಲ್ಲಿ ನೀವು ಸ್ಪಾ ನಡೆಸುತ್ತಿದ್ದೀರಾ? ಎಂದಿದ್ದಕ್ಕೆ, ಇದು ಸ್ಪಾ ಅಲ್ಲ, ಸ್ಪಾವನ್ನು ಬೇರೆಯವರಿಗೆ ಗುತ್ತಿಗೆಯನ್ನು ಕೊಡಲಾಗಿದೆ ಎಂದು ಹೇಳಿದ್ದಾನೆ, ಅಲ್ಲದೇ ಮತ್ತೊಮ್ಮೆ, ನೀವು ಹೋಟೆಲ್ ಒಳಗೆ ಬಂದು ಚೆಕ್ ಮಾಡಿ ಇಂತಹ ಚಟುವಟಿಕೆಗಳು ನಡೆಯುತ್ತಿವೆಯಾ ಅನ್ನೋದನ್ನ ನೀವೆ ಸ್ಪಷ್ಟಪಡಿಸಿಕೊಳ್ಳಿ ಎಂದು ಗೋಗರೆದಿದ್ದಾನೆ.
उदयपुर में होटल वाले गजब ही कर रहे हैं...!#Rajasthanpic.twitter.com/7Ipd6rQY5q
— Avdhesh Pareek (@Zinda_Avdhesh)
उदयपुर में होटल वाले गजब ही कर रहे हैं...!#Rajasthanpic.twitter.com/7Ipd6rQY5q
— Avdhesh Pareek (@Zinda_Avdhesh) April 4, 2025
">April 4, 2025
ಇದಕ್ಕೆ ಕೆರಳಿದ ವರದಿಗಾರ ನಿಮಗೆ ನಿಜಕ್ಕೂ ನಾಚಿಕೆ ಆಗಬೇಕು. ನಗರಕ್ಕೆ ಪ್ರವೇಶ ಪಡೆಯುವ ರಸ್ತೆಯಲ್ಲಿ ಕಾಣುವ ಮೊದಲ ಹೋಟೆಲ್ ಇದು. ಇಲ್ಲಿಯೇ ಇಂತಹ ಡಿಸ್ಪ್ಲೇ ಬೋರ್ಡ್ಗಳು ಕಂಡರೆ ನಗರದ ಮಾನ ಮಾರ್ಯಾದೆ ಏನಾಗಬೇಕು. ಹೇಳಿ ಕೇಳಿ ಉದಯಪುರ ಪ್ರವಾಸಿಗರ ತಾಣ. ಬರುವ ಪ್ರವಾಸಿಗರಿಗೆ ಇದು ಎಂತಹ ಮುಜುಗರ ಸೃಷ್ಟಿಸುತ್ತೆ ಗೊತ್ತಾ ನಿಮಗೆ ಎಂದು ದಬಾಯಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ