ಕ್ರೆಡಿಟ್ ಕಾರ್ಡ್​ ಕದ್ದ ಕಳ್ಳರಿಗೆ ಹೊಡೀತು ಜಾಕ್​ಪಾಟ್​! ಕೋರ್ಟ್​ ಮೆಟ್ಟಿಲೇರಿದ್ದೇಕೆ ಮಾಲೀಕ?

author-image
Gopal Kulkarni
Updated On
ಕ್ರೆಡಿಟ್ ಕಾರ್ಡ್​ ಕದ್ದ ಕಳ್ಳರಿಗೆ ಹೊಡೀತು ಜಾಕ್​ಪಾಟ್​! ಕೋರ್ಟ್​ ಮೆಟ್ಟಿಲೇರಿದ್ದೇಕೆ ಮಾಲೀಕ?
Advertisment
  • ಕಾರು ಒಡೆದು ಮಾಲೀಕನ ಕ್ರೆಡಿಟ್ ಕಾರ್ಡ್ ಕದ್ದ ಕಿಲಾಡಿ ಕಳ್ಳರು
  • ಆ ಕ್ರೆಡಿಟ್​ ಕಾರ್ಡ್​ನಿಂದ ಬಂತು ಕೋಟಿ ಕೋಟಿ ರೂಪಾಯಿ
  • ಆ ಕೋಟ್ಯಾಂತರ ರೂಪಾಯಿಯಲ್ಲಿ ಪಾಲು ಬೇಕೆಂದ ಮಾಲೀಕ

ಇದೊಂದು ವಿಚಿತ್ರ ಘಟನೆ, ಯಾರದೋ ದುಡ್ಡಿನಲ್ಲಿ ಲಾಟರಿ ಟಿಕೆಟ್ ಖರೀದಿಸಿ ಅದರಲ್ಲೇ ಜಾಕ್​ಪಾಟ್​ ಹೊಡೆದು. ಆ ದುಡ್ಡಿನ ಮಾಲೀಕ ನನಗೂ ಅದರಲ್ಲಿ ಪಾಲು ಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾನೆ ಇಂತಹದೊಂದು ಘಟನೆ ಫ್ರಾನ್ಸ್​​ನಲ್ಲಿ ನಡೆದಿದೆ.

ಫ್ರಾನ್ಸ್​ನಲ್ಲಿ  ವ್ಯಕ್ತಿಯೊಬ್ಬನ ಕಾರಿನ ಕಿಟಕಿ ಗ್ಲಾಸನ್ನು ಒಡೆದು ಆತನಿಂದ  ಕ್ರೆಡಿಟ್ ಕಾರ್ಡ್ ಕದ್ದಿದ್ದಾರೆ. ಅದರಿಂದ ಲಾಟರಿ ಟಿಕೆಟ್​ನ್ನು ಖರೀದಿಸಿದ್ದಾರೆ. ಕಳ್ಳರ ಅದೃಷ್ಟವೋ ಕ್ರೆಡಿಟ್ ಕಾರ್ಡ್​ ಮಾಲೀಕನ ದುರಾದೃಷ್ಟವೋ ಗೊತ್ತಿಲ್ಲ ಕಳ್ಳರು ಖರೀದಿಸಿದ ಲಾಟರಿಗೆ ಬಂಪರ್​ ಬಹುಮಾನ ಬಂದಿದೆ. ಸುಮಾರು 4 ಕೋಟಿ 57 ಲಕ್ಷ ರೂಪಾಯಿ ಲಾಟರಿ ಟಿಕೆಟ್​​ನಿಂದ ಬಂದಿದೆ. ಈಗ ಅದರಲ್ಲಿ ನನಗೂ ಪಾಲು ಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾನೆ ಫ್ರಾನ್ಸ್ ಪ್ರಜೆ ಜೀನ್​ ಡೇವಿಡ್​ ಎಸ್ಟೆಲೇ. ಇದಕ್ಕಾಗಿಯೇ ಈಗ ಕೋರ್ಟ್ ಮೆಟ್ಟಿಲೇರಿದ್ದಾನೆ.

ಎಸ್ಟೇಲೆ ಲಾಯರ್ ಪೈರೆ ಡೆಬುಷನ್ ಹೇಳುವ ಪ್ರಕಾರ, ಕಳ್ಳರು ನನ್ನ ಕ್ಲೈಂಟ್​​ನ ಕಾರನ್ನು ಫೆಬ್ರವರಿ 3 ರಂದು ಟೌಲೌಸ್​ ಬಳಿ ಮುರಿದಿದ್ದಾರೆ. ಅವರು ನನ್ನ ಕ್ಲೈಂಟ್​ನ ಕ್ರೆಡಿಟ್​ ಕಾರ್ಡ್​ನಿಂದ ಬಾರ್​ನಲ್ಲಿ ಅದೇ ದಿನ ಪೆಮೇಂಟ್ ಕೂಡ ಮಾಡಿದ್ದಾರೆ. ಅದರ ಜೊತೆಗೆ ಲಾಟರಿ ಟಿಕೆಟ್​ನ್ನು ಕೂಡ ಖರೀದಿಮಾಡಿದ್ದಾರೆ. ನನ್ನ ಕ್ಲೈಂಟ್​ ಕಾರ್ಡ್​ನಿಂದ ಖರೀದಿ ಮಾಡಿದ್ದ ಲಾಟರಿ ಟಿಕೆಟ್​ಗೆ ಬಹುಮಾನ ಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಅವರು ಅದರಲ್ಲಿ ಪಾಲು ಬೇಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:₹400 ಸುತ್ತಿಗೆ.. 5 ನಿಮಿಷದಲ್ಲಿ ₹42 ಕೋಟಿ ಚಿನ್ನ ಕದ್ದಿದ್ರು; ಕಳ್ಳರನ್ನ ಬಂಧಿಸಿ 6 ವರ್ಷವಾದ್ರೂ ಚಿನ್ನವೇ ಸಿಕ್ಕಿಲ್ಲ!

ಎಸ್ಟೆಲೇ ಕ್ರೆಡಿಟ್​ ಕಾರ್ಡ್ ಸಹಾಯವಿಲ್ಲದೇ ಕಳ್ಳರು ಲಾಟರಿ ಟಿಕೆಟ್​ನ್ನು ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ಎಸ್ಟೆಲೇ ಅವರ ವಿರುದ್ಧ ಯಾವುದೆ ಕೇಸ್ ಹಾಕುತ್ತಿಲ್ಲ ಆದರೆ ಕಳ್ಳರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಈ ಡೀಲ್ ಒಪ್ಪಿಕೊಳ್ಳಲಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಎಸ್ಟೆಲೇ ವಕೀಲ ಹೇಳಿದ್ದಾರೆ.
ಕಳ್ಳರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಆದ್ರೆ ಅವರಿಗೆ ಮನೆ ಮಠ ಯಾವುದೇ ಇಲ್ಲ ಎಂಬುದರ ಬಗ್ಗೆ ತಿಳಿದು ಬಂದಿದೆ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಈಗ ಕೊಂಚ ಕಷ್ಟವಾಗಿದೆ ಎಂದು ವಕೀಲ ಪೈರೆ ಡೆಬುಷನ್ ಹೇಳಿದ್ದಾರೆ. ಪೊಲೀಸರು ಇನ್ನೂ ಕಳ್ಳರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅವರ ಫಿಂಗರ್ ಪ್ರಿಂಟ್​ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯೂ ಬಂದಿದೆ.

ಇದನ್ನೂ ಓದಿ:43 ಕೋಟಿ ರೂಪಾಯಿ ಕೊಟ್ರೆ ಅಮೆರಿಕಾದ ಪೌರತ್ವ.. ಏನಿದು ಗೋಲ್ಡ್‌ ಕಾರ್ಡ್‌? ಕಂಪ್ಲೀಟ್‌ ಮಾಹಿತಿ ಇಲ್ಲಿದೆ!

ಎಸ್ಟೆಲೇ ಹಾಗೂ ಅವರ ಪತ್ನಿ ಇತ್ತೀಚೆಗಷ್ಟೇ ತಮ್ಮ ಷೇರು ಹಣದಿಂದ ಮನೆ ಕಟ್ಟಿಸಬೇಕು ಎಂದು ಪ್ಲ್ಯಾನ್ ಮಾಡಿದ್ದರಂತೆ. ಇದೇ ವೇಳೆ ಈಗ ಹೀಗಾಗಿದೆ. ಇನ್ನು ಈ ವಿಚಾರದ ಬಗ್ಗೆ ಅಲ್ಲಿನ ಪೊಲೀಸರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಮತ್ತೊಂದು ಕಡೆ ಫ್ರೆಂಚ್ ಲಾಟರಿ ಆರ್ಗನೈಸರ್ ಡೆಸ್​ ಜ್ಯುಕ್ಸ್​​​ನ ಲಾಟರಿ ಸಂಸ್ಥೆ ಹೇಳುವ ಪ್ರಕಾರ ನಾವಿನ್ನೂ ಯಾವುದೇ ಲಾಟರಿ ಟಿಕೆಟ್​​ನ ಬಹುಮಾನವನ್ನು ಘೋಷಣೆ ಮಾಡಿಲ್ಲ ಎಂದು ಹೇಳುತ್ತಿದೆ. ಒಟ್ಟಿನಲ್ಲಿ ಕ್ರೆಡಿಟ್ ಕಾರ್ಡ್ ಕಳೆದುಕೊಂಡ ಎಸ್ಟೆಲೇ ಮಾತ್ರ ನನ್ನ ಕಾರ್ಡ್​​​ನಿಂದಲೇ ಲಾಟರಿ ಟಿಕೆಟ್ ಖರೀದಿಯಾಗಿದೆ. ಅದಕ್ಕೆ ದೊಡ್ಡ ಮೊತ್ತದ ಬಹುಮಾನ ಕೂಡ ಬಂದಿದೆ. ಅದರಲ್ಲಿ ನನಗೂ ಪಾಲು ಬೇಕೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment