/newsfirstlive-kannada/media/post_attachments/wp-content/uploads/2025/05/emmanuel_macron_wife.jpg)
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖಕ್ಕೆ ಅವರ ಹೆಂಡತಿ ತಿವಿದಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಫ್ರಾನ್ಸ್ ಅಧ್ಯಕ್ಷ ಆಗಿರುವ ಇಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಹೆಂಡತಿ ಬ್ರಿಗಿಟ್ಟೆ ಮ್ಯಾಕ್ರನ್ ಜೊತೆ ಆಗ್ನೇಯ ಏಷ್ಯಾದ ದೇಶವಾಗಿರುವ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ. ಮ್ಯಾಕ್ರನ್ ಹಾಗೂ ಅವರ ಹೆಂಡತಿ ಬ್ರಿಗಿಟ್ಟೆ ಇರುವ ವಿಶೇಷ ವಿಮಾನವೂ ವಿಯೆಟ್ನಾಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುತ್ತದೆ. ಈ ವೇಳೆ ವಿಮಾನದ ಬಾಗಿಲು ಅನ್ನು ಸಿಬ್ಬಂದಿ ತೆರೆಯುತ್ತಿರುತ್ತಾರೆ.
ಇದೇ ಸಮಯಕ್ಕೆ ಬಾಗಿಲ ಬಳಿ ನಿಂತಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖಕ್ಕೆ ಹೆಂಡತಿ ಬ್ರಿಗಿಟ್ಟೆ ಅವರು ತಿವಿದಿದ್ದಾರೆ. ಡೋರ್ ಓಪನ್ ಆಗಿರುವುದರಿಂದ ತಕ್ಷಣ ಜಾಗೃತರಾದ ಅಧ್ಯಕ್ಷರು ವಿಮಾನದ ಕ್ಯಾಬಿನಿಂದಲೇ ಏನು ಆಗಿಲ್ಲ ಎನ್ನುವಂತೆ ನಕ್ಕು, ಕೈ ಬೀಸಿದಂತೆ ನಟನೆ ಮಾಡಿದರು. ಬಳಿಕ ಹೊರ ಬಂದು ಬಾಗಿಲಲ್ಲಿ ನಿಂತಿದ್ದ ಸಿಬ್ಬಂದಿಗೆ ಕೈಕುಲುಕಿ ಹೆಂಡತಿ ಬ್ರಿಗಿಟ್ಟೆ ಜೊತೆ ಕೆಳಗೆ ಇಳಿದಿದ್ದಾರೆ.
ಇದನ್ನೂ ಓದಿ:RCBಗೆ ಗುಡ್ನ್ಯೂಸ್; ವಾಪಸ್ ಬಂದ ಬಲಿಷ್ಠ ಪ್ಲೇಯರ್.. ತಂಡಕ್ಕೆ ಬಂತು ಆನೆಬಲ
ವಿಮಾನವೂ ವಿಯೆಟ್ನಾಂ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಇಮ್ಯಾನುಯೆಲ್ ಮ್ಯಾಕ್ರನ್ ದಂಪತಿಯನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಕ್ಯಾಮೆರಾಗಳನ್ನು ಆನ್ ಮಾಡಿ ಮ್ಯಾಕ್ರನ್ ದಂಪತಿ ಇಳಿಯುವುದನ್ನು ಸೆರೆ ಹಿಡಿಯಲಾಗುತ್ತಿತ್ತು. ಆದರೆ ವಿಮಾನದ ಡೋರ್ ಓಪನ್ ಆಗ್ತಿದ್ದಂತೆ ಕ್ಯಾಬಿನ್ ಒಳಗೆ ಮ್ಯಾಕ್ರನ್ ಮುಖಕ್ಕೆ ಹೆಂಡತಿ ತಿವಿದಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪಂಚ್ ಮಾಡುವಾಗ ಹೆಂಡತಿಯ ಕೈಯೊಂದೇ ಕಾಣಿಸಿದ್ದು ಕೈಗೆ ಕೆಂಪು ಬಣ್ಣದ ಬಟ್ಟೆ ಇರುವುದು ಕಂಡು ಬರುತ್ತದೆ. ಅದರಂತೆ ವಿಮಾನದಿಂದ ಕೆಳಗೆ ಇಳಿಯಬೇಕಾದರೆ ಬ್ರಿಗಿಟ್ಟೆ ಕೆಂಪು ಬಣ್ಣದ ಕೋಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ.
French President Macron appears to be slapped by his wife Brigitte Macron as they arrive in Vietnam pic.twitter.com/sXkBY7fAxB
— FearBuck (@FearedBuck)
French President Macron appears to be slapped by his wife Brigitte Macron as they arrive in Vietnam pic.twitter.com/sXkBY7fAxB
— FearBuck (@FearedBuck) May 26, 2025
">May 26, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ