newsfirstkannada.com

ಪ್ರಾಣ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಕುಚಿಕು ಗೆಳೆಯ; ಆಮೇಲೇನಾಯ್ತು?

Share :

Published February 3, 2024 at 7:56pm

  ಬುದ್ಧಿ ಮಾತು ಹೇಳಿದ್ರು ಹಳೆ ಚಾಳಿ ಮುಂದುವರಿಸಿದ್ದ ಗೆಳೆಯ

  ಪ್ರಾಣಕ್ಕಿಂತ ಹೆಚ್ಚಾಗಿದ್ದ ಮಡದಿಗೆ ಆಪ್ತ ಸ್ನೇಹಿತನಿಂದ ಕಿರುಕುಳ

  ಮೊಬೈಲ್ ಕಾಲ್ ಹಿಸ್ಟರಿ ಆಧಾರದ ಮೇಲೆ ಆರೋಪಿ ಅರೆಸ್ಟ್​

ಅವರಿಬ್ಬರೂ ಕುಚಿಕು ದೋಸ್ತಿಗಳು, ಒಂದೇ ಕಂಪನಿಯಲ್ಲಿ ಕೆಲಸ ಕೂಡ ಮಾಡ್ತಿದ್ರು. ಕಷ್ಟ ಅಂದಾಗ ಒಬ್ಬರಿಗೊಬ್ಬರು ಹೆಗಲಾಗಿದ್ರು. ಆದ್ರೆ, ಗೆಳೆಯನ ಹೆಂಡತಿಯನ್ನ ಅತ್ತಿಗೆಯಂತೆ ಕಾಣಬೇಕಿದ್ದವನು ಕಾಮದ ಕಣ್ಣು ಬೀರಿದ್ದ. ಗೆಳೆಯ ಅಂತ ಒಂದೆರಡು ಬಾರಿ ಬುದ್ಧಿ ಕೂಡ ಹೇಳಿದ್ದ. ಅವನು ಮಾತು ಕೇಳದೇ ಇದ್ದಾಗ ಮುಂದೆ ನಡೆದಿದ್ದು ಯಾರೂ ಊಹಿಸಲು ಆಗದಂತಹ ಘನಘೋರ ದುರಂತ.

ಸಂಬಂಧಿಗಳಿಗಿಂತ ಸ್ನೇಹಿತರು ಅಂದ್ರೆ ಅಲ್ಲೊಂದು ನಂಬಿಕೆ ಗಟ್ಟಿಯಾಗಿರುತ್ತೆ. ಯಾರನ್ನ ನಂಬದೇ ಇರೋರು ಸ್ನೇಹಿತರ ಮೇಲೆ ಅಪಾರವಾದ ನಂಬಿಕೆ ಇಟ್ಟಿರ್ತಾರೆ. ಇಂಥಾ ನಂಬಿಕೆಗೆ ಒಮ್ಮೆ ಪೆಟ್ಟು ಬಿದ್ರೆ ನಡೆಯಬಾರದ ದುರಂತ ನಡೆದುಬಿಡುತ್ತೆ. ಇವತ್ತಿನ ಸ್ಟೋರಿಯಲ್ಲೂ ಗೆಳೆಯನೊಬ್ಬನ ನಂಬಿಕೆ ದ್ರೋಹದ ಕೆಲಸ ನಡು ಬೀದಿಯಲ್ಲಿ ರಕ್ತ ಹರಿಸುವಂತೆ ಮಾಡಿದೆ.

ಹೆಂಡತಿ ಮೇಲೆ ಸ್ನೇಹಿತನ ಕಣ್ಣು.. ಕಥೆ ಮುಗಿಸಿದ ಕುಚಿಕು ಗೆಳೆಯ!

ಒಬ್ಬನ ಹೆಸರು ವಿಜಯ್ ಸುರೇಶ್​. ಇನ್ನೊಬ್ಬನ ಹೆಸರು ಸೈಯದ್ ಅಜರ್. ಇವರಿಬ್ಬರು ಅದೆಂಥಾ ಫ್ರೆಂಡ್ಸ್ ಅಂದ್ರೆ ಕಷ್ಟದಲ್ಲೂ ನೋವಿನಲ್ಲೂ ಒಟ್ಟಿಗೆ ಇರ್ತಿದ್ರು. ಧರ್ಮ ಬೇರೆಯಾದ್ರೂ ಮಾನವ ಧರ್ಮ ಒಂದೂ ಅಂತ ಗೆಳೆಯರಾಗಿದ್ರು. ಕುಚಿಕು ದೋಸ್ತಿಗಳು, ಒಂದೇ ಕಂಪನಿಯಲ್ಲಿ ಸಹೋದ್ಯೋಗಿಗಳು ಕೂಡ, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದ ಪ್ರಾಣ ಸ್ನೇಹಿತರು. ಆದ್ರೆ ಇಂಥಾ ಪ್ರಾಣ ಸ್ನೇಹಿತನ ಪ್ರಾಣವನ್ನೆ ಇನ್ನೊಬ್ಬ ಗೆಳೆಯ ಸೈಯದ್​ ಅಜರ್ ಬಲಿ ಪಡೆದಿದ್ದಾನೆ.

ಕುಚಿಕು ಗೆಳೆಯನ್ನ ಪ್ರಾಣವನ್ನೆ ಬಲಿ ಪಡೆದ ಸೈಯದ್​ ಅಜರ್

ವಿಜಯ್ ಹಾಗೂ ಸೈಯದ್ ಸ್ನೇಹಿತರಷ್ಟೆ ಅಲ್ಲ. ಒಂದೇ ಕಂಪನಿಯಲ್ಲಿ ಕೆಲಸ ಕೂಡ ಮಾಡ್ತಿದ್ರು. ಸ್ನೇಹದಲ್ಲಿ ಯಾರಿಗಾದರೂ ಕಷ್ಟ ಎಂದರೆ ಪರಸ್ಪರ ಸಹಾಯ ಮಾಡುವಷ್ಟು ಇವರ ಸ್ನೇಹ ಗಟ್ಟಿಯಾಗಿತ್ತು. ಆದ್ರೆ ಈ ಪರಿಚಯ ತುಂಬಾ ವಿಕೋಪಕ್ಕೆ ಹೋಗಿತ್ತು. ವಿಜಯ್​ ಕಣ್ಣು ಸೈಯದ್ ಅಜರ್ ಪತ್ನಿ ಮೇಲೆ ಬಿದ್ದಿದ್ದಂತೆ, ಅವಳಿಗೆ ಪದೇ ಪದೇ ಕಾಲ್ ಮಾಡೋದು ಕಿರುಕುಳ ಕೊಡೋದು ಮಾಡ್ತಿದ್ನಂತೆ. ಹೀಗಾಗಿ ಅಜರ್ ವಿಜಯ್​​ಗೆ ಕೂರಿಸಿ ಬುದ್ಧಿವಾದ ಕೂಡ ಹೇಳಿದ್ನಂತೆ. ಆದ್ರೆ ಅಜರ್ ಮಾತಿಗೆ ವಿಜಯ್ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಬುದ್ಧಿ ಹೇಳಿದ್ರು ಹಳೆ ಚಾಳಿಯನ್ನೆ ಮುಂದುವರಿಸಿದ್ದಾನೆ. ಇದ್ರಿಂದ ಬೇಸತ್ತಿದ್ದ ಸೈಯದ್ ಅಜರ್ ಗೆಳೆಯನ ಹತ್ಯೆಗೆ ಮುಹೂರ್ತ ಇಟ್ಟು ಬಿಟ್ಟಿದ್ದಾನೆ.

ಹೌದು, ಅದ್ಯಾವಾಗ ವಿಜಯ್, ಗೆಳೆಯ ಸಯ್ಯದ್ ಮಾತನ್ನ ಕೇಳ್ದ ಹಳೆ ಚಾಳಿ ಮುಂದುವರಿಸಿದ್ನೋ ಸೈಯದ್​, ವಿಜಯ್​ ಕೊಲೆಗೆ ಸ್ಕೆಚ್ ಹಾಕಿದ್ದ. ಅದ್ರಂತೆ ವಿಜಯ್​ನನ್ನ ಪಾರ್ಟಿ ಮಾಡೋಣ ಬಾ ಅಂತ ರೈಲ್ವೆ ಮೈದಾನಕ್ಕೆ ಕರ್ಕೊಂಡು ಹೋಗಿದ್ದ. ಪಾರ್ಟಿಯಲ್ಲೂ ಸೈಯದ್​ ವಿಜಯ್​​ನಿಗೆ ಬುದ್ಧಿ ಹೇಳಿದ್ದಾನೆ. ಇದೆನ್ನೆಲ್ಲ ಬಿಟ್ಟು ಬಿಡು ನನ್ನ ಹೆಂಡತಿಗೆ ಕಿರುಕುಳ ಕೊಡಬೇಡ ಅಂತ ತಿಳಿ ಹೇಳಿದ್ದಾನೆ. ಆದ್ರೆ, ವಿಜಯ್ ಮಾತ್ರ ಸೈಯದ್ ಮಾತು ಕೇಳಿಲ್ಲ. ಕೊನೆಗೆ ಸೈಯದ್ ಕೋಪವು ನೆತ್ತಿಗೇರಿದೆ. ಕುಡಿದ ಮತ್ತಿನಲ್ಲಿದ್ದ ಸೈಯದ್,​ ವಿಜಯ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬಳಿಕ ಪೆಟ್ರೋಲ್ ಸುರಿದು ಹತ್ಯೆ ಮಾಡಿಬಿಟ್ಟಿದ್ದಾನೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು 24 ಗಂಟೆಯಲ್ಲೇ ಆರೋಪಿಯನ್ನ ಪತ್ತೆ ಹಚ್ಚಿದ್ರು. ಕೇವಲ 24 ಗಂಟೆಯಲ್ಲೇ ಆತನ‌ ಮೊಬೈಲ್ ಕಾಲ್ ಹಿಸ್ಟರಿ ಆಧಾರದ ಮೇಲೆ ವಿಶೇಷ ತಂಡ ರಚಿಸಿ ಸೈಯದ್ ಅಜರ್ ನನ್ನ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆಯಲ್ಲಿ ತಾನೇ ವಿಜಯ್ ಕೊಲೆ ಮಾಡಿರೋದಾಗಿ ಸೈಯದ್ ತಪ್ಪಪ್ಪಿಕೊಂಡಿದ್ದಾನೆ. ಹೆಂಡತಿಗೆ ಕಿರುಕುಳ ಕೊಟ್ಟಿದಕ್ಕಾಗಿ ಹತ್ಯೆ ಮಾಡಿದ್ದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿದ್ದ ಸ್ನೇಹಿತನ ಮಡದಿಗೆ ಕಿರುಕುಳ ನೀಡಿದ್ದು ಇದೀಗ ಆ ಸ್ನೇಹಿತನ ಪ್ರಾಣಕ್ಕೆ ಕುತ್ತು ತಂದಿದೆ. ಒಂದೇ ಜೀವ ಎರಡು ದೇಹದಂತಿದ್ದ ಗೆಳೆಯನನ್ನೇ ಬೀದಿ ಹೆಣವಾಗುವಂತೆ ಮಾಡಿದ್ದು ನಿಜಕ್ಕೂ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಾಣ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಕುಚಿಕು ಗೆಳೆಯ; ಆಮೇಲೇನಾಯ್ತು?

https://newsfirstlive.com/wp-content/uploads/2024/02/death-2024-02-03T182327.000.jpg

Load More