ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..

author-image
Ganesh
Updated On
ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..
Advertisment
  • ಪಾರ್ಟಿ ಮಾಡಲು ಕರೆದು ಪರಲೋಕಕ್ಕೆ ಸ್ನೇಹಿತನ ಪಾರ್ಸಲ್
  • ದರ್ಶನ್ ಮತ್ತು ವೇಣುಗೋಪಾಲ್ ಒಂದೇ ಯುವತಿ ಹಿಂದೆ ಬಿದ್ದಿದ್ದರು
  • ಈ ಹಿಂದೆ ಅದೇ ಯುವತಿಯನ್ನ ವೇಣುಗೋಪಾಲ್​ ಪ್ರೀತಿ ಮಾಡುತ್ತಿದ್ದ

ಲಾರಿ ಹಿಂದೆ ಹೋದ್ರೆ ಧೂಳು, ಹುಡುಗಿ ಹಿಂದೆ ಹೋದ್ರೆ ಗೋಳು ಅನ್ನೋ ಮಾತಿದೆ. ಅದ್ರಲ್ಲೂ ಒಂದೇ ಹುಡುಗಿ ಹಿಂದೆ ಇಬ್ರಿಬ್ರು ಹೋದ್ರೆ ಏನಾಗ್ಬೋದು ಹೇಳಿ? ಇಲ್ಲೂ ಅಂತಹದ್ದೇ ಒಂದು ಕತೆ ಆಗಿದೆ. ಪ್ರೀತ್ಸೆ ಪ್ರೀತ್ಸೆ ಅಂತ ಒಂದೇ ಹುಡುಗಿ ಹಿಂದೆ ಬಿದ್ದ ಇಬ್ಬರಲ್ಲಿ ಒಬ್ಬ ಪರಲೋಕ ಸೇರಿದ್ರೆ ಇನ್ನೊಬ್ಬ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.

ಈ ಲವ್​ ಸ್ಟೋರಿಯ ದುರಂತ ನಾಯಕನ ಹೆಸರು ದರ್ಶನ್. ಈ ಲವ್​ ಸ್ಟೋರಿಗೆ ವಿಲನ್ ಆಗಿರೋನ ಹೆಸರು ವೇಣುಗೋಪಾಲ್. ಈ ದರ್ಶನ್ ಹಾಗೂ ವೇಣುಗೋಪಾಲ್ ಬೆಂಗಳೂರಿನ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮದವರು. ಎಲ್ಲರಿಗೂ ಆಗೋ ಹಾಗೆ ಇವರಿಬ್ಬರಿಗೂ ಹದಿಹರೆಯದ ವಯಸ್ಸಲ್ಲಿ ಲವ್ ಆಗಿತ್ತು. ಆದ್ರೆ ಒಂದೇ ಹುಡುಗಿ ಮೇಲೆ ಇಬ್ಬರಿಗೂ ಲವ್ ಆಗಿ ಯಡವಟ್ಟಾಗಿ ಹೋಗಿತ್ತು..

ಇದನ್ನೂ ಓದಿ: ಬಡವರ ಡಾಕ್ಟರ್‌, 10 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ರಥಿನಂ ಪಿಳ್ಳೈ ಇನ್ನಿಲ್ಲ

publive-image

ಪಾರ್ಟಿ to ಪರಲೋಕ

ಈ ದರ್ಶನ್ ಮತ್ತು ವೇಣುಗೋಪಾಲ್ ಒಂದೇ ಯುವತಿಯ ಹಿಂದೆ ಬಿದ್ದಿದ್ದರು. ಈ ಹಿಂದೆ ಅದೇ ಯುವತಿಯನ್ನ ವೇಣುಗೋಪಾಲ್​ ಪ್ರೀತಿ ಮಾಡುತ್ತಿದ್ದ. 5 ವರ್ಷಗಳ ಯುವತಿ ಮತ್ತು ವೇಣುಗೋಪಾಲ್​ನ ಪ್ರೀತಿ 1 ವರ್ಷದ ಹಿಂದೆಯೇ ಮುರಿದು ಬಿದ್ದಿತ್ತು. 4 ತಿಂಗಳಿಂದ ಅದೇ ಯುವತಿ ಹಾಗೂ ದರ್ಶನ್ ನಡುವೆ ಪ್ರೀತಿ ಶುರುವಾಗಿತ್ತು. ಆದ್ರೂ ದರ್ಶನ್ ಹಾಗೂ ವೇಣುಗೋಪಾಲ್ ಸ್ನೇಹಿತರಾಗಿಯೇ ಇದ್ದರು. ನಿನ್ನೆ ಸಂಜೆ 7.30ರ ವೇಳೆಗೆ ಮನೆಯಲ್ಲಿದ್ದ ದರ್ಶನ್​ಗೆ ವೇಣು ಕರೆಮಾಡಿದ್ದ.

ವೇಣುವಿನಿಂದ ಕರೆ ಬರ್ತಿದ್ದಂತೆ ಮನೆಯಿಂದ ಹೊರಗೆ ಹೋಗಿದ್ದ ದರ್ಶನ್​.. ದರ್ಶನ್​ನನ್ನ ಪಾರ್ಟಿ ಮಾಡೋಣ ಬಾ ಅಂತ ಕರೆದಿದ್ದ. ಪಾರ್ಟಿಗೆ ಹೋಗುವಾಗ ದರ್ಶನ್ ಪ್ರೇಯಸಿಗೆ ಕರೆ ಮಾಡಿ ವೇಣು ಕರೆಯುತ್ತಿದ್ದಾನೆ ಹೋಗಿ ಬರ್ತೀನಿ ಎಂದಿದ್ದ. ಆದ್ರೆ ಪಾರ್ಟಿ ಮಾಡಿ ಕುಡಿಸಿ ದರ್ಶನ್​ನನ್ನ ಮನಸೋ ಇಚ್ಛೆ ಚುಚ್ಚಿ ವೇಣು ಹತ್ಯೆಮಾಡಿದ್ದ. ನಂತರ ದರ್ಶನ್ ಕೊಲೆಯಾಗಿರುವ ಬಗ್ಗೆ ಆತನ ತಂದೆಗೆ ಯುವತಿಯಿಂದ ಮಾಹಿತಿ ಸಿಕ್ಕಿತ್ತು. ದರ್ಶನ್ ತಂದೆ ದೂರು ಆಧರಿಸಿ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿ ವೇಣುಗೋಪಾಲ್​ನನ್ನ ಬಂಧಿಸಿದ್ರು.

ಒಟ್ನಲ್ಲಿ ಹದಿಹರೆಯದ ವಯಸ್ಸಲ್ಲಿ ಹುಟ್ಟಿದ ಪ್ರೀತಿ, ಪಜೀತಿ ಸೃಷ್ಟಿಸಿ ಒಬ್ಬನನ್ನ ಸಾವಿನ ಮನೆ ಸೇರಿಸಿದ್ರೆ ಮತ್ತೊಬ್ಬನನ್ನ ಸೆರೆವಾಸಕ್ಕೆ ಕಳುಹಿಸಿದೆ. ಇದ್ದೊಬ್ಬ ಮಗನ ಕಳೆದುಕೊಂಡ ದರ್ಶನ್​ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಇದನ್ನೂ ಓದಿ: ಗೋಯೆಂಕ ಮತ್ತೆ ಗರಂ.. ಪಂತ್ ಒಬ್ಬರೇ ಅಲ್ಲ LSGಯಲ್ಲಿ ಮೂವರ ತಲೆದಂಡ ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment