ರಕ್ತ ಹರಿಸಿದ ಚಿಕನ್ ಪೀಸ್.. ಬ್ಯಾಚುಲರ್ ಪಾರ್ಟಿಯಲ್ಲಿ ಇಬ್ಬರು ಸ್ನೇಹಿತರ ಮಧ್ಯೆ ಆಗಿದ್ದೇನು..?

author-image
Ganesh
Updated On
ರಕ್ತ ಹರಿಸಿದ ಚಿಕನ್ ಪೀಸ್.. ಬ್ಯಾಚುಲರ್ ಪಾರ್ಟಿಯಲ್ಲಿ ಇಬ್ಬರು ಸ್ನೇಹಿತರ ಮಧ್ಯೆ ಆಗಿದ್ದೇನು..?
Advertisment
  • ನನ್ನ ಮದುವೆ ಅಂತಾ ಬ್ಯಾಚುಲರ್ ಪಾರ್ಟಿ ಕರೆದ ಅವನು
  • ಜಾಸ್ತಿ ಚಿಕನ್ ಕೇಳಿದ್ದಕ್ಕೆ ಅಂತಾ ಚಾಕು ಚುಚ್ಚೇಬಿಟ್ಟ ಇವನು
  • ಕಳೆದ 2 ತಿಂಗಳ ಹಿಂದೆ ಅಭಿಷೇಕ ಕೊಪ್ಪದ ಎಂಬಾತನ ಮದುವೆ

ನಾನ್ ವೆಜ್​ ಪ್ರಿಯರ ಮುಂದೆ ಒಮ್ಮೆ ಚಿಕನ್ ಅಂತಾ ಹೇಳಿದ್ರೆ ಸಾಕು.. ಹಂಗೆ ಬಾಯಲ್ಲಿ ನೀರೂರುತ್ತೆ. ಆದ್ರೆ ಇದೇ ಚಿಕನ್ ರಕ್ತನೂ ಸುರಿಸುತ್ತೆ.. ಚಿಕನ್ ಪೀಸ್​ಗೋಸ್ಕರ ಒಂದು ಜೀವವನ್ನೇ ತೆಗೆಯಲಾಗಿದೆ.

ನನ್ನ ಮದ್ವೆ ಅಂತಾ ಬ್ಯಾಚುಲರ್ ಪಾರ್ಟಿ ಕರೆದ ಅವನು

ಹೆಸರು ವಿಠ್ಠಲ್ ಹಾರೋಗೊಪ್ಪ.. ಚಿಕನ್ ಪೀಸ್ ಜಾಸ್ತಿ ಹಾಕು ಎಂದಿದ್ದಕ್ಕೆ 30 ವರ್ಷದ ವಿನೋದ್ ಮಲಶಟ್ಟಿಯನ್ನ ಚಾಕುವಿನಲ್ಲಿ ಇರಿದಿರುವ ಆರೋಪ ಕೇಳಿಬಂದಿದೆ. ಅದು ಕೂಡ ಚಿಕನ್ ಕತ್ತರಿಸಲು ತಂದಿದ್ದ ಚಾಕುವಿನಿಂದಲೇ. ಅಂದ್ಹಾಗೆ ನಾನ್​ವೆಜ್​ ಕ್ರೈಂ ಸ್ಟೋರಿ ಶುರುವಾಗೋದು ಮದುವೆ ಪಾರ್ಟಿಯಿಂದ!

ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!

[caption id="attachment_131303" align="aligncenter" width="800"]ವಿನೋದ್​​ ವಿನೋದ್​​[/caption]

‘ಚಿಕನ್’ ಸ್ಟೋರಿ..!

  • ಕಳೆದ 2 ತಿಂಗಳ ಹಿಂದೆ ಅಭಿಷೇಕ ಕೊಪ್ಪದ ಎಂಬಾತನ ಮದುವೆ
  • ಫ್ರೆಂಡ್ಸ್​ಗೆ ಬ್ಯಾಚುಲರ್ ಪಾರ್ಟಿ ಕೊಡದೇ ಮುಂದೂಡ್ತಾ ಬಂದಿದ್ದ
  •  ಭಾನುವಾರ ಆಗಿದ್ದ ಕಾರಣ ಸಂಜೆ ಪಾರ್ಟಿ ಕೊಟ್ಟಿದ್ದ ಅಭಿಷೇಕ
  •  ಒಟ್ಟು 30 ಸ್ನೇಹಿತರಿಗೆ ಆಹ್ವಾನ ಕೊಟ್ಟಿದ್ದ.. ಪಾರ್ಟಿಯೂ ಆರಂಭ
  •  ಸರಿಯಾಗಿ ಕುಡಿದು, ಚಿಕನ್ ತಿಂದು ಗೆಳಯರಿಂದ ಭರ್ಜರಿ ಪಾರ್ಟಿ
  •  ಚಿಕನ್ ಪೀಸ್ ಜಾಸ್ತಿ ಹಾಕಲಿಲ್ಲ ಅಂತಾ ಜಗಳ ತೆಗೆದಿದ್ದ ವಿನೋದ್
  •  ವಿನೋದ್ ಹಾಗೂ ವಿಠ್ಠಲ್ ನಡುವೆ ದೊಡ್ಡ ಮಟ್ಟದಲ್ಲಿ ಗಲಾಟೆ
  •  ಅಡುಗೆಗೆ ಬಳಸಿದ್ದ ಚಾಕುವಿವಿನಲ್ಲಿ ವಿನೋದ್​​ಗೆ ಇರಿದ ವಿಠ್ಠಲ್
  •  ಸ್ಥಳದಲ್ಲಿ ತೀವ್ರ ರಕ್ತಸ್ರಾವದಿಂದ ವಿನೋದ್ ಮಲಶಟ್ಟಿ ಜೀವ ಕಳೆದುಕೊಂಡಿದ್ದಾನೆ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಸೊಪಡ್ಲ ಗ್ರಾಮದ ಹೊರ ವಲಯದಲ್ಲಿ ಈ ನಾನ್​ವೆಜ್ ಮರ್ಡರ್ ನಡೆದಿದ್ದು, ಚಿಕನ್​ ಪೀಸ್​ ವಿಚಾರಕ್ಕೆ ವಿಠ್ಠಲ್, ವಿನೋದ್​ನನ್ನೇ ಪೀಸ್ ಪೀಸ್ ಮಾಡ್ಬಿಟ್ಟಿದ್ದಾನೆ. ಪ್ರಕರಣದ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿನೋದ್​​

ಪ್ರಕರಣ ಹಲವು ಅನುಮಾನಕ್ಕೂ ಕಾರಣವಾಗಿದೆ. ಘಟನೆ ನಡೆದ ತಕ್ಷಣ ಮುರಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ವೇಳೆ ತೋಟದ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ವಸ್ತುಗಳು ಕಂಡು ಬಂದಿವೆ. ಚಿಕನ್​ಗಾಗಿ ನಡೆದ ಜಗಳ ಜೀವ ತೆಗೆಯುವ ಹಂತಕ್ಕೆ ಹೋಗಿದೆ ಅನ್ನೋದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಸದ್ಯ ಚಾಕು ಇರಿದಿದ್ದ ವಿಠ್ಠಲ್ ಹಾರುಗೊಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಾರ್ಕಳ ಪರಶುರಾಮ ಮೂರ್ತಿಯ ಅಸಲಿ ರಹಸ್ಯ ರಿವೀಲ್.. ಪೊಲೀಸರಿಂದ ಚಾರ್ಜ್​ಶೀಟ್ ಸಲ್ಲಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment