Advertisment

VIDEO: ‘ಚಂದನ್, ನಿವೇದಿತಾ ಬಗ್ಗೆ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು’- ಹೊಸ ಟ್ವಿಸ್ಟ್‌ ಕೊಟ್ಟ ಆಪ್ತರು

author-image
admin
Updated On
ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
Advertisment
  • ನಿನ್ನೆ ಮಧ್ಯಾಹ್ನದವರೆಗೂ ನಾನು ಚಂದನ್ ಜೊತೆಯಲ್ಲೇ ಇದ್ದೆ
  • ಚಂದನ್‌ಗೆ ಕಾಲ್ ಮಾಡುತ್ತಿದ್ದೇನೆ ಆದ್ರೆ ಫೋನ್‌ ಸ್ವಿಚ್ ಆಫ್!
  • ನಿವೇದಿತಾ ತುಂಬಾ ಒಳ್ಳೆ ಹುಡುಗಿ ಆದರೆ ಇಬ್ಬರ ಮಧ್ಯೆ ಏನಾಯ್ತು?

ಬೆಂಗಳೂರು: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಡಿವೋರ್ಸ್‌ಗೆ ಮುಂದಾಗಿದ್ದಾರೆ. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ಕ್ಯೂಟ್ ಕಪಲ್‌ ದಿಢೀರ್ ಅಂತ ಬ್ರೇಕ್ ಹಾಕಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಚಂದನ್ ಹಾಗೂ ನಿವೇದಿತಾ ಇಬ್ಬರು ನಮ್ಮಿಬ್ಬರ ಮಧ್ಯೆ ಗಲಾಟೆ ಇಲ್ಲ. ಪರಸ್ಪರ ಒಪ್ಪಿ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಮನವಿ ಮಾಡಿದ್ದಾರೆ.

Advertisment

publive-image

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೋರ್ಟ್ ಮೆಟ್ಟಿಲೇರಿದ ಮೇಲೆ ಈ ಜೋಡಿಯ ಡಿವೋರ್ಸ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಚಂದನ್ ಆಪ್ತರಾದ ನವರಸನ್ ಅವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ:ಪಕ್ಕಾ ಚಾಕಲೇಟ್​ ಗರ್ಲ್​​ ಎಂದಿದ್ದ ಚಂದನ್​ ಶೆಟ್ಟಿ! ನಿವೇದಿತಾ ಜೊತೆಗಿನ ಸಂಸಾರಕ್ಕೆ ಬ್ರೇಕ್ ನೀಡಲು​ ಇದೇನಾ ಕಾರಣ? 

ಚಂದನ್ ಫೋನ್ ಸ್ವಿಚ್ ಆಫ್‌!
ಚಂದನ್, ನಿವೇದಿತಾ ಮಧ್ಯೆ ಗಲಾಟೆ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು ಎಂದು ಚಂದನ್ ಆಪ್ತ ಗೆಳೆಯ ನವರಸನ್ ಅವರು ಸ್ಪಷ್ಟಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೂ ನಾನು ಚಂದನ್ ಜೊತೆಯಲ್ಲೇ ಇದ್ದೆ. ನಮಗೂ ಕೂಡ ಇದು ಶಾಕಿಂಗ್ ನ್ಯೂಸ್. ಚಂದನ್‌ಗೆ ಕಾಲ್ ಮಾಡುತ್ತಿದ್ದೇನೆ. ಆದರೆ ನಂಬರ್ ಸ್ವಿಚ್ ಆಫ್ ಬರ್ತಿದೆ ಎಂದು ನವರಸನ್ ತಿಳಿಸಿದ್ದಾರೆ.

Advertisment

ನಮ್ಮ ಸಿನಿಮಾದಲ್ಲಿ ಚಂದನ್ ನಟಿಸಿದ್ದರು. ಯಾಕೆ ಈ ತರಹ ನಿರ್ಧಾರ ತೆಗೆದುಕೊಂಡ್ರು ಅಂತ ಗೊತ್ತಾಗ್ತಿಲ್ಲ. ನಿವೇದಿತಾ ತುಂಬಾ ಒಳ್ಳೆ ಹುಡುಗಿ. ನಿವೇದಿತಾ ಹಾಗೂ ಚಂದನ್ ಕೆರಿಯರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ಸುತ್ತೆ. ಇಬ್ಬರೂ ಅನ್ನೋನ್ಯವಾಗಿ ಇದ್ದರು. ಯಾವ ಗಲಾಟೆಯೂ ಇಲ್ಲ. ಪರಸ್ಪರ ಒಪ್ಪಿ ಈ ನಿರ್ಧಾರ ತೆಗೆದುಕೊಂಡಿರಬಹುದು. ನಿವೇದಿತಾ ಕನಸುಗಳಿಗೆ ಚಂದನ್ ಸಾಥ್ ಕೊಟ್ಟಿದ್ದಾರೆ. ಚಂದನ್ ಕನಸುಗಳಿಗೆ ನಿವೇದಿತಾ ಸಪೋರ್ಟ್ ಮಾಡುತ್ತಿದ್ದರು. ನಿವೇದಿತಾ ನಾಯಕಿಯಾಗಿ ಸಿನಿಮಾ ಮಾಡ್ತಿದ್ರು. ಇದೇ ವಿಚಾರ ವಿಚ್ಛೇದನಕ್ಕೆ ಕಾರಣ ಆಯ್ತಾ ಅನ್ನಿಸುತ್ತೆ.

publive-image

ಮಕ್ಕಳಾಗುವ ವಿಚಾರದಲ್ಲಿ ಚಂದನ್, ನಿವೇದಿತಾ ಮಧ್ಯೆ ಭಿನ್ನಾಭಿಪ್ರಾಯವಿತ್ತು ಅಂತ ಹೇಳುತ್ತಿರೋದು ಶುದ್ಧ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ಈ ತರಹ ಯಾರ ಬಗ್ಗೆಯೂ ಅವಹೇಳನ ಮಾಡೋದು ತಪ್ಪು. ಅದು ಅವರ ಪರ್ಸನಲ್‌ ಜೀವನ. ಅವರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನವರಸನ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment