Advertisment

ಕುಚಿಕು ಸ್ನೇಹಿತೆಗಾಗಿ ಹೈಡ್ರಾಮಾ.. 10 ಲಕ್ಷದ ಬಂಗಾರ ಕದ್ದಿದ್ದಾರೆಂದು ಕಥೆ ಕಟ್ಟಿದ ಪುಣ್ಯಾತಗಿತ್ತಿಯರು ಕೊನೆಗೂ ಸಿಕ್ಕಿಬಿದ್ರು!

author-image
AS Harshith
Updated On
ಕುಚಿಕು ಸ್ನೇಹಿತೆಗಾಗಿ ಹೈಡ್ರಾಮಾ.. 10 ಲಕ್ಷದ ಬಂಗಾರ ಕದ್ದಿದ್ದಾರೆಂದು ಕಥೆ ಕಟ್ಟಿದ ಪುಣ್ಯಾತಗಿತ್ತಿಯರು ಕೊನೆಗೂ ಸಿಕ್ಕಿಬಿದ್ರು!
Advertisment
  • ಅವಳಿಗಾಗಿ ಕಳ್ಳತನದ ಕಥೆ ಕಟ್ಟಿದ ಇವಳು.. ಸಿಕ್ಕಿಬಿದ್ರು ಕಳ್ಳಿಯರು
  • ಗಂಡನ ದುಡ್ಡು, ಸ್ನೇಹಿತೆಗೆ ಸಹಾಯ ಮಾಡಲು ಹೆಂಡತಿಯ ಮಹಾಡ್ರಾಮಾ
  • 10 ಲಕ್ಷ ಸಾಲ.. ಸ್ನೇಹಿತೆಗೆ ಸಹಾಯ ಮಾಡಲು ಗೆಳತಿ ಕಟ್ಟಿದ ಕಳ್ಳಾಟ ಬಯಲು

ರಾಯಚೂರು: ಸಾಲದ ಸುಳಿಯಲ್ಲಿ ಸಿಲುಕಿದ್ದ ಸ್ನೇಹಿತೆಗೆ ಸಹಾಯ ಮಾಡಲು ಕಳ್ಳತನದ ಕಥೆ ಕಟ್ಟಿ ಸಿಕ್ಕಿಬಿದ್ದ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಜಲಾಲ್ ನಗರದ ನಿವಾಸಿಗಳಾದ ರಾಜೇಶ್ವರಿ ಮತ್ತು ರೇಣುಕಾ ಹೈಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

Advertisment

ಸಾಲದ ಸುಳಿಯಲ್ಲಿ ಸಿಲುಕಿದ್ದ ಗೆಳತಿ ಜೊತೆ ಆತ್ಮೀಯ ಗೆಳತಿ ಸೇರಿಕೊಂಡು ಕಳ್ಳತನದ ಕಥೆ ಕಟ್ಟಿದ್ದಾರೆ. ಗೆಳತಿಗಾಗಿ ಮೈಮೇಲಿದ್ದ ಬಂಗಾರವನ್ನ ಬಚ್ಚಿಟ್ಟು ಕಳ್ಳತನದ ಹೈಡ್ರಾಮಾ ಸೃಷ್ಟಿಸಿದ್ದಾರೆ. ಆದರೆ ಕೊನೆಗೆ ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಟಾ ಬಯಲಾಗಿದೆ.

ಇದೇ 23ರಂದು ಮನ್ಸಲಾಪುರ ಹೂವಿನ ಅಂಜನೇಯ ದೇವಸ್ಥಾನಕ್ಕೆ ಬಳಿ ಇಬ್ಬರು ತೆರಳಿದ್ದರು. ಈ ವೇಳೆ ಬಯಲು ಶೌಚಾಲಯಕ್ಕೆ ತೆರಳಿದ್ದಾಗ ಕಳ್ಳರು ಬಂದಿದ್ದರೆಂಬ ಕಥೆ ಸೃಷ್ಟಿಸಿದ್ದರು. ಬಟನ್ ಚಾಕು ತೋರಿಸಿ 10 ತೊಲೆ ಬಂಗಾರ ಕದ್ದಿದ್ದಾರೆಂದು ಹೇಳಿದ್ದರು. ಇದೇ ವಿಚಾರವಾಗಿ ರಾಯಚೂರು ಗ್ರಾಮೀಣ ಠಾಣೆಗೆ ತೆರಳಿ ರಾಜೇಶ್ವರಿ ದೂರು ನೀಡಿದ್ದರು.

publive-image

ಆದರೆ ಪೊಲೀಸರ ತನಿಖೆಯಲ್ಲಿ ಮಹಿಳೆಯರಿಬ್ಬರ ಹೈಡ್ರಾಮ್ ರಿವೀಲ್ ಆಗಿದೆ. ರೇಣುಕಾಗೆ ರಾಜೇಶ್ವರಿ ಗಂಡ 10 ಲಕ್ಷ ಸಾಲ ಕೊಟ್ಟಿದ್ದನು. ಸಾಲ ತೀರಿಸಲು ಆಗದೆ ರೇಣುಕಾ ಸಂಕಷ್ಟಕ್ಕೆ ಸಿಲುಕಿದ್ದಳು. ಈ ವೇಳೆ ಗೆಳತಿ ರೇಣುಕಾಳನ್ನ ಪಾರು ಮಾಡಲು ರಾಜೇಶ್ವರಿಗೆ ಚಿನ್ನಾಭರಣ ಕೊಟ್ಟಿದ್ದಾಳೆ. ಬಳಿಕ ರೇಣುಕಾ ತನ್ನ ಮಗ ಜನಾರ್ಧನನಿಗೆ ಪೋನ್ ಕರೆ ಮಾಡಿ ಕರೆಸಿಕೊಂಡಿದ್ದಾಳೆ.

Advertisment

ಇದನ್ನೂ ಓದಿ: ಅಯ್ಯೋ.. ಇದೆಂಥಾ ಜಾತ್ರೆ! ಬಡಿಗೆಯಿಂದ ಹೊಡೆದು ಕೊಳ್ತಾರೆ ಜನರು! ಶತಮಾನದ ಇತಿಹಾಸ ಇದಕ್ಕಿದೆ

ಅತ್ತ ಪೊಲೀಸರು ಮಹಿಳೆಯ ದೂರನ್ನು ಆಲಿಸಿ ತನಿಖೆ ನಡೆಸಿದ್ದಾರೆ. ಆರೋಪಿ ಜನಾರ್ಧನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಕಟು ಸತ್ಯ ಬಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment