newsfirstkannada.com

×

ವಯಸ್ಸಿಗೆ ಮೀರಿದ ಸ್ನೇಹ ಬಾಂಧವ್ಯ; ರತನ್ ಟಾಟಾ ಹಾಗೂ ಶಾಂತನು ನಡುವೆ ದೋಸ್ತಿ ಬೆಳೆದಿದ್ದು ಹೇಗೆ?

Share :

Published October 11, 2024 at 9:02pm

Update October 11, 2024 at 9:07pm

    ಶಾಂತನು ನಾಯ್ಡು, ರತನ್ ಟಾಟಾರ ನಡುವೆ ಆ ಅತ್ಯಾಪ್ತ ಸ್ನೇಹ ಬೆಳೆದಿದ್ದು ಹೇಗೆ ?

    ವಯಸ್ಸು, ಅಂತಸ್ತು, ವರ್ಚಸ್ಸು ಎಲ್ಲವನ್ನೂ ಮೀರಿ ಗಟ್ಟಿಯಾಗಿ ಗೆಳೆತನ ಬೆಸೆದಿತ್ತು

    ಆ ಒಂದೇ ಒಂದು ಪತ್ರ ರತನ್ ಟಾಟಾ -ಶಾಂತನು ನಾಯ್ಡುರನ್ನು ಸೇರಿಸಿದ್ದು ಹೇಗೆ?

ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ತೆರಳಿರೋ ದೇಶದ ಖ್ಯಾತ ಉದ್ಯಮಿ, ಪರಮ ದೇಶಭಕ್ತ, ಪರೋಪಕಾರಿ ರತನ್ ಟಾಟಾ ಅವರಿಗೂ ಅವರ ಜೀವನದಲ್ಲಿ ಒಬ್ಬ ಸ್ನೇಹಿತನಿದ್ದ. ಆ ಸ್ನೇಹಿತ ಅವರ ವಯಸ್ಸಿನವನವಲ್ಲ. ಆಕ್ಕ ಪಕ್ಕ ಕೂಡ ಸುಳಿಯೋದಕ್ಕಾಗಲ್ಲ. ತಮ್ಮ ಮೊಮ್ಮಗನ ವಯಸ್ಸಿನ ಹುಡುಗನ ಜೊತೆ ಇದೇ ರೀತಿಯ ಫ್ರೆಂಡ್ ಶಿಪ್ ಮಾಡ್ಕೊಂಡಿದ್ರು, ಅಂದ್ರೆ ನೀವು ನಂಬಲೇಬೇಕು.

ಜೊತೆಯಲ್ಲೇ ಊಟ, ಒಟ್ಟೊಟ್ಟಿಗೆ ಪ್ರಯಾಣ, ಒಂದು ಕ್ಷಣ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಬಾಂಧವ್ಯ, ವಯಸ್ಸಲ್ಲಿ ತಾತ-ಮೊಮ್ಮಗನಷ್ಟು ಅಂತರ. ಆದರೂ, ಚಡ್ಡಿ ದೋಸ್ತಿಗಳನ್ನೂ ಮೀರಿಸುವಂತಾ ಪರಸ್ಪರ ಕಾಳಜಿ. ಹೋಗೋ. ಬಾರೋ ಅನ್ನೋದು ಹೊರತುಪಡಿಸಿದರೆ. ಇಬ್ಬರು ಕ್ಲೋಸ್ ಫ್ರೆಂಡ್ಸ್ ಹೇಗಿರುತ್ತಾರೋ ಅದೇ ರೀತಿಯಲ್ಲೇ ರತನ್ ಟಾಟಾ ಮತ್ತು ಈ ಯುವಕನ ನಡುವೆ ನಿಷ್ಕಲ್ಮಶ ಫ್ರೆಂಡ್‌ಶಿಪ್ ಇತ್ತು. ರತನ್ ಟಾಟಾರ ಕಡೆಯ ದಿನಗಳಲ್ಲಿ ಜೀವಕ್ಕೆ ಜೀವವಾಗಿ ಇದ್ದ ಈ ಯುವಕ, ಅವರ ಒಂಟಿತನ ಕಾಡದಂತೆ ಜೊತೆಯಾಗಿ ನಿಂತಿದ್ದ. ಆದರೀಗ. ತನಗಿಂತ 56 ವರ್ಷ ಹಿರಿಯ ವಯಸ್ಸಿನ ಸ್ನೇಹಿತನನ್ನು ಕಳೆದುಕೊಂಡಿರೋ ಈತನ ನೋವು ಹೇಳತೀರದಾಗಿದೆ.

ಸ್ನೇಹಿತನನ್ನು ಕಳೆದುಕೊಂಡ ದುಖಃವನ್ನೆಲ್ಲೂ ತೋರಿಸಿಕೊಳ್ಳದೇ ರತನ್ ಟಾಟಾರನ್ನು ಬಾರದ ಲೋಕಕ್ಕೆ ಬೀಳ್ಕೊಟ್ಟಿದ್ದಾನೆ. ಅಂತಿಮಯಾತ್ರೆ ವೇಳೆ ರತನ್ ಟಾಟಾ ಮೃತದೇಹ ಸಾಗಿದ್ದ ವಾಹನದ ಜೊತೆ ಜೊತೆಯಾಗಿ ಸಾಗಿದ್ದಾನೆ. ರತನ್ ಟಾಟಾ ಅಗಲಿಕೆ ದುಖಃದಲ್ಲಿದ್ದ ಇಡೀ ದೇಶ. ಈತನ ಅಂತರಾಳದ ಯಾತನೆಯನ್ನು ಕಲ್ಪಿಸಿಕೊಂಡೇ ಕಣ್ಣೀರಾಗಿದೆ. ಏಕೆಂದರೆ ಜೀವಕ್ಕೆ ಜೀವ ಕೊಡುವಂತಿದ್ದ ಗೆಳೆಯ ಬಿಟ್ಟು ಹೋಗಿಬಿಟ್ಟರು ಅನ್ನೋದು ಎಂಥವರಿಗೂ ಬರಸಿಡಿಲು ಬಡಿದಂತೆ. ಈಗ ರತನ್ ಟಾಟಾರ ಕಿರಿಯ ವಯಸ್ಸಿನ ಈ ಸ್ನೇಹಿತನಿಗೆ ಆಗಿರೋ ನೋವು, ಆಘಾತ ಕಲ್ಪನೆಗೂ ನಿಲುಕದ್ದಾಗಿದೆ!

ಹಾಗಾದ್ರೆ, ಇಳಿವಯಸ್ಸಲ್ಲಿದ್ದ ರತನ್ ಟಾಟಾ ಜೊತೆ ಸ್ನೇಹ ಸಂಪಾದಿಸಿದ. ಕುಟುಂಬಸ್ಥರಿಗಿಂತಲೂ ಹೆಚ್ಚಾಗಿ ರತನ್ ಟಾಟಾರಿಗೆ ಆಪ್ತನಾದ, ರತನ್ ಟಾಟಾರನ್ನು ಲೈಟ್ ಹೌಸ್ ಎಂದು ಕರೆಯುತ್ತಿದ್ದ ಈ ಯುವಕ ಯಾರು? ನೀವು ಸೂರ್ಯವಂಶ ಸಿನಿಮಾ ನೋಡಿರಬಹುದು, ಅದರಲ್ಲಿ ಮೊಮ್ಮಗ-ತಾತನ ನಡುವಿನ ಸ್ನೇಹಕ್ಕೆ ಬುನಾದಿ ಹಾಕಿದ ಒಂದು ಘಟನೆಯಿದೆ. ವಯಸ್ಸನ್ನೂ ಮೀರಿದ ನಡವಳಿಕೆ, ಮೆಚ್ಯುರಿಟಿ ತೋರಿಸಿದ ಬಾಲಕನನ್ನ ಕಂಡ ವಿಷ್ಣುವರ್ಧನ್‌ಗೆ ಅಚ್ಚರಿ ಮತ್ತು ಸಂತಸವಾಗುತ್ತೆ. ನಂತರ, ಆ ಪುಟ್ಟ ಹುಡುಗ ತನ್ನದೇ ವಂಶದ ಕೂಸು ಅನ್ನೋದು ಗೊತ್ತಾದ ಮೇಲೆ ಸ್ನೇಹ ಬೆಳೆಸೋ ಆಸೆಯಾಗುತ್ತೆ. ಇಲ್ಲಿ ರಿಯಲ್‌ಲೈಫ್‌ನಲ್ಲಿ ರತನ್ ಟಾಟಾ ಮತ್ತು ಈ ಯುವಕನ ನಡುವಿನ ವಯಸ್ಸು ಮೀರಿದ ಸ್ನೇಹ, ಬಾಂಧವ್ಯಕ್ಕೆ ಇಂಥಾದ್ದೇ ಒಂದು ಘಟನೆ ಕಾರಣವಾಗಿತ್ತು.

ರತನ್​​ ಟಾಟಾರ ಆ ಸ್ನೇಹ “ಸೂರ್ಯವಂಶ” ನೆನಪಿಸಿದ್ದೇಕೆ?
ಈ ಯುವಕನ ಹೆಸರು ಶಾಂತನು ನಾಯ್ಡು. ರತನ್ ಟಾಟಾರಂತೆ ಈತನೂ ಮಹಾ ಮೇಧಾವಿ. ಚಿಕ್ಕ ವಯಸ್ಸಿನಲ್ಲೇ ವಯಸ್ಸಿಗೂ ಮೀರಿದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವಾತ. ವಯಸ್ಸು ಕೇವಲ 30 ವರ್ಷ. ಮೂಲತಃ ತೆಲುಗು ಭಾಷೆ ಮಾತನಾಡೋ ಕುಟುಂಬದ ಶಾಂತನ ನಾಯ್ಡು ಹುಟ್ಟಿದ್ದು ಬೆಳೆದಿದ್ದು ಮಹಾರಾಷ್ಟ್ರದಲ್ಲಿ. ರತನ್‌ ಟಾಟಾ ಕುಟುಂಬಕ್ಕೂ.. ಈ ಶಾಂತನ ನಾಯ್ಡುಗೂ ಯಾವುದೇ ರಕ್ತಸಂಬಂಧವಿಲ್ಲ. ಆದ್ರೆ, ಟಾಟಾ ಮತ್ತು ಶಾಂತನು ನಡುವೆ ರಕ್ತ ಸಂಬಂಧವನ್ನೂ ಮೀರಿದ ಸ್ನೇಹ ಬೆಳೆಯುವಂತೆ ಮಾಡಿದ್ದು ನಾಯಿ ಪ್ರೀತಿ!

ನಾಯಿ ಪ್ರೀತಿಯಿಂದ ರತನ್ ಟಾಟಾ ಮತ್ತು ಶಾಂತನು ನಾಯ್ಡು ನಡುವೆ ದೋಸ್ತಿ ಬೆಳೆದಿತ್ತು. ಇಬ್ಬರು ಪರಸ್ಪರ ಭೇಟಿಯಾದಾಗ ರತನ್ ಟಾಟಾರಿಗೆ 76 ರ ಹರೆಯ. ಈ ಶಾಂತನುಗೆ ಕೇವಲ 19 ವರ್ಷ. ಎಲ್ಲಿಯ ಶಾಂತನು? ಎಲ್ಲಿಯ ಟಾಟಾ? ಇಬ್ಬರ ನಡುವಿನ ಸ್ನೇಹಕ್ಕೆ ಆ ಭಗವಂತನೇ ಸಂಪರ್ಕ ಸೇತುವೆ ಬೆಸೆದ ಅನ್ಸತ್ತೆ. 2015 ರ ಅದೊಂದು ದಿನ ತನ್ನ ತಂದೆಯ ಸಲಹೆ ಮೇರೆಗೆ ಶಾಂತನು ನಾಯ್ಡು ರತನ್ ಟಾಟಾರಿಗೆ ಒಂದು ಪತ್ರ ಬರೀತಾನೆ. 2 ತಿಂಗಳ ಕಾಲ ಶಾಂತನುಗೆ ಯಾವುದೇ ಪ್ರತಿಕ್ರಿಯೆ ಬರೋದಿಲ್ಲ. ಆದ್ರೆ, ಪ್ರತಿಕ್ರಿಯೆಯ ನಿರೀಕ್ಷೆಯಲ್ಲೇ ಶಬರಿಯಂತೆ ಕಾಯ್ತಿದ್ದ ಯುವಕ ಶಾಂತನುಗೆ ನಿರಾಸೆ ಆಗಲಿಲ್ಲ. ಯಾವುದೇ ಹುಡುಗ ಪತ್ರ ಬರೆದಿದ್ದಾನೆ ಏನಿದೆ ನೋಡೇ ಬಿಡೋಣ ಅಂತಾ ಆ ಪತ್ರ ತೆರೆದು ಓದಿದ್ದ ಟಾಟಾ ನಿಜಕ್ಕೂ ಮಂತ್ರಮುಗ್ಧರಾಗಿದ್ರು. ತಕ್ಷಣವೇ ಖುದ್ದು ರತನ್ ಟಾಟಾ ಅವರೇ ಶಾಂತನುಗೆ ಪತ್ರ ಬರೆದು ಬೇಗನೆ ಬಾರಪ್ಪಾ ಮಾತಾನಾಡಬೇಕು ಅಂತಾ ಆಹ್ವಾನ ಕೊಟ್ರು. ಅದು ಟಾಟಾ ಮತ್ತು ಶಾಂತನು ನಡುವಿನ ದೋಸ್ತಿಯ ಮೊದಲ ಬುನಾದಿಯಾಯ್ತು.
ಅಷ್ಟಕ್ಕೂ, ಅಂದು ರತನ್ ಟಾಟಾಗೆ ಶಾಂತನು ನಾಯ್ಡು ಬರೆದಿದ್ದ ಪತ್ರದಲ್ಲಿ ಇದ್ದದ್ದೇನು ಗೊತ್ತಾ?

ಬೀದಿ ನಾಯಿಗಳ ಮೇಲಿನ ಕಾಳಜಿ. ಇಂಜಿನಿಯರಿಂಗ್ ಮುಗಿಸಿದ್ದ ಶಾಂತನು ನಾಯ್ಡು ಬೀದಿ ನಾಯಿಗಳಿಗಾಗಿ ಒಂದು ಕೊರಳಿನ ಪಟ್ಟಿ ಆವಿಷ್ಕರಿಸಿದ್ದ. ರಾತ್ರಿ ಹೊತ್ತಲ್ಲಿ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾಯೋದನ್ನು ತಪ್ಪಿಸಲು ವಿಶೇಷವಾದ ಮೋಟೋಪಾಸ್ ಹೆಸರಿನ ಕೊರಳ ಪಟ್ಟಿ ತಯಾರಿಸಿದ್ದ. ಈ ಮೋಟೋಪಾಸ್ ಅನ್ನು ಬೀದಿನಾಯಿಗಳ ಕೊರಳಿಗೆ ಕಟ್ಟಿದ್ರೆ ರಾತ್ರಿಹೊತ್ತಲ್ಲಿ ವಾಹನಗಳ ಬೆಳಕು ಪ್ರತಿಫಲಿಸುತ್ತೆ. ರಸ್ತೆ ಮೇಲೆ ನಾಯಿಗಳು ನಿಂತಿರೋದು, ನಡೆದು ಬರುತ್ತಿರೋದು ವಾಹನ ಸವಾರರಿಗೆ ಕಾಣಿಸುತ್ತೆ. ಈ ಮೂಲಕ ಬೀದಿನಾಯಿಗಳ ದಾರುಣ ಸಾವನ್ನು ತಡೆಯಬಹುದು ಎಂಬ ಪ್ಲಾನ್ ಬಗ್ಗೆ ಆ ಪತ್ರದಲ್ಲಿ ಶಾಂತನು ವಿವರಿಸಿದ್ದ. ಅದನ್ನು ನೋಡಿದ ರತನ್ ಟಾಟಾ ತುಂಬ ಇಂಪ್ರೆಸ್ ಆಗಿದ್ರು. ಯಾಕಂದ್ರೆ, ರತನ್ ಟಾಟಾ ಕೂಡ ಮಹಾನ್ ಶ್ವಾನಪ್ರಿಯ!

ವಿದೇಶದಲ್ಲಿ ವ್ಯಾಸಂಗ ಮುಗಿಸಿ ರತನ್ ಟಾಟಾ ಬಳಿ ಬಂದ ಶಾಂತನು!
ಶ್ವಾನಗಳ ಮೇಲಿನ ಕಾಳಜಿ, ಪ್ರೀತಿ 20 ವರ್ಷದ ಶಾಂತನು ಮತ್ತು 76 ವರ್ಷದ ರತನ್ ಟಾಟಾ ನಡುವೆ ಸ್ನೇಹ ಬೆಸೆದಿತ್ತು. ಯಾರನ್ನೂ ಅಷ್ಟು ಸುಲಭವಾಗಿ ಹತ್ತಿರಕ್ಕೆ ಸೇರಿಸದ, ಯಾರ ಜೊತೆಯೂ ಹೆಚ್ಚಿನ ಒಡನಾಟ ಇಟ್ಟುಕೊಳ್ಳದ ರತನ್ ಟಾಟಾ ಈ ಹುಡುಗ ನನ್ನ ಜೊತೆಯಲ್ಲೇ ಇರಲಿ ಅಂತಾ ನಿರ್ಧರಿಸಿಬಿಟ್ಟಿದ್ರು. ಆದ್ರೆ, ಶಾಂತನು ಉನ್ನತ ವ್ಯಾಸಂಗಕ್ಕೆ ಅಮೆರಿಕ ದೇಶಕ್ಕೆ ಹೋಗಲೇಬೇಕಾಗಿತ್ತು. ಹೋಗುವಾಗ ಶಾಂತನು ರತನ್ ಟಾಟಾರಿಗೆ ಒಂದು ಪ್ರಾಮಿಸ್ ಕೊಟ್ಟು ಹೋಗಿದ್ದ. ಅಮೆರಿಕದಿಂದ ವಾಪಸ್ ಆಗ್ತಿದ್ದಂತೆ ನಿಮ್ಮ ಜೊತೆ ಬಂದು ಕೆಲಸ ಮಾಡ್ತೀನಿ ಎಂದು ಮಾತುಕೊಟ್ಟಿದ್ದ. ಅದೇ ರೀತಿ ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ವಾಪಸ್ ಬಂದವನೇ ಟಾಟಾ ಟ್ರಸ್ಟ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ. ಅತ್ಯಂತ ಚಿಕ್ಕ ವಯಸ್ಸಲ್ಲೇ ಟಾಟಾ ಟ್ರಸ್ಟ್‌ನ ಉನ್ನದ ಹುದ್ದೆ ಶಾಂತನುಗೆ ಅರಸಿ ಬಂದಿತ್ತು. ಆದ್ರೆ, ಶಾಂತನು ಪಾಲಿಗೆ ಬಂದ ಬೆಲೆಕಟ್ಟಲಾಗದ ಸುವರ್ಣ ಅವಕಾಶ ಅಂದ್ರೆ ರತನ್ ಟಾಟಾರ ಆಪ್ತಸಹಾಯಕನಾಗಿ ಸೇವೆ ಸಲ್ಲಿಸೋ ಭಾಗ್ಯ!

ತನ್ನಂತೆಯೇ ಮಹತ್ವಾಕಾಂಕ್ಷಿ ಕಂಗಳು. ತನ್ನಂತೆಯೇ ಪ್ರಾಣಿ ಪ್ರೀತಿ. ತನ್ನಂತೆಯೇ ಕನಸು ಕಂಡು ಅದನ್ನು ಸಾಧಿಸೋ ಛಲ. ಎಲ್ಲವನ್ನೂ ಈ ಹುಡುಗನಲ್ಲಿ ಕಂಡ ರತನ್ ಟಾಟಾ. ಈತನಿಗೆ ಒಂದು ಬಿಗ್ ಆಫರ್ ಕೊಟ್ರು. ತನ್ನ ಆಪ್ತ ಸಹಾಯಕನಾಗಿ ನೇಮಿಸಿಕೊಂಡ್ರು. ತನ್ನ ಪಾಲಿನ ಭಾಗ್ಯ ಎಂಬಂತೆ ಶಾಂತನು ಅದನ್ನು ಒಪ್ಪಿಕೊಂಡ. ಆದ್ರೆ, ಆಪ್ತಸಹಾಯಕನಾಗಿ ರತನ್ ಟಾಟಾ ಮನೆಗೆ ಕಾಲಿಟ್ಟ ಶಾಂತನು ನಾಯ್ಡು ಟಾಟಾರ ಖಾಸಾ ಸ್ನೇಹಿತನಾಗಿಬಿಟ್ಟ. ರತನ್ ಟಾಟಾ ತಮ್ಮೆಲ್ಲಾ ದಿನಚರಿಯಲ್ಲೂ ಶಾಂತನು ನಾಯ್ಡುರ ಸಹಾಯ ಪಡ್ಕೊಳ್ತಿದ್ರು. ತಮ್ಮ ಭಾವನೆಗಳನ್ನು ಶೇರ್ ಮಾಡಿಕೊಳ್ತಿದ್ರು.
ವಿಧಿಗೆ ಈ ಸ್ನೇಹದ ಮೇಲೆ ಹೊಟ್ಟೆಕಿಚ್ಚು ಹುಟ್ಟಿತು ಅನ್ಸತ್ತೆ. ವಯಸ್ಸು ಮೀರಿದ ನಿಷ್ಕಲ್ಮಶ ಸ್ನೇಹವನ್ನೇ ಮುರಿದುಬಿಟ್ಟಿದೆ. ಗುರುವಿನ ರೂಪದ ಸ್ನೇಹಿತ ರತನ್ ಟಾಟಾ ಅಗಲಿಕೆ 30 ರ ಹರೆಯದ ಕನಸುಗಾರ ಶಾಂತನು ನಾಯ್ಡುಗೆ ತೀರದ ನೋವು ತಂದಿದೆ. ಆ ನೋವಿನಲ್ಲಿ ಸ್ನೇಹಿತನಿಗೆ ಭಾವುಕ ಪತ್ರದ ಮೂಲಕ ವಿದಾಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯಸ್ಸಿಗೆ ಮೀರಿದ ಸ್ನೇಹ ಬಾಂಧವ್ಯ; ರತನ್ ಟಾಟಾ ಹಾಗೂ ಶಾಂತನು ನಡುವೆ ದೋಸ್ತಿ ಬೆಳೆದಿದ್ದು ಹೇಗೆ?

https://newsfirstlive.com/wp-content/uploads/2024/10/SHANTANU-RATAN-TATA-2.jpg

Load More