newsfirstkannada.com

×

ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್​ ಭೀತಿ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು?

Share :

Published August 16, 2024 at 4:26pm

    ಜಾಗತಿಕವಾಗಿ ಆತಂಕ ಸೃಷ್ಟಿಸಿದ ಮತ್ತೊಂದು ಸೋಂಕು ಮಂಕಿಫಾಕ್ಸ್

    ಆಫ್ರಿಕಾದ ಬಳಿಕ ಈಗ ನೆರೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡ ಮಹಾಮಾರಿ

    ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇಕೆ? ಹೇಳಿದ್ದೇನು?

ನವದೆಹಲಿ: ಇಡೀ ವಿಶ್ವ ಒಂದು ಬಾರಿಯಲ್ಲ ಎರಡೆರಡು ಬಾರಿ ಕೊರೊನಾ ಎಂಬ ಹೆಮ್ಮಾರಿಯಿಂದ ತತ್ತರಿಸಿ ಹೋಗಿದ್ದು ಈ ಶತಮಾನದ ಕರಾಳ ಇತಿಹಾಸ. ಇಡೀ ಜಗತ್ತೇ ನಿಷ್ಕ್ರೀಯವಾಗಿ, ಸ್ತಬ್ಧಗೊಂಡಿತ್ತು ಆ ಸಮಯದಲ್ಲಿ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದರು. ಈಗ ಮತ್ತೊಂದು ಭೀಕರ ಹೆಮ್ಮಾರಿ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಈ ಬೆಂಗಳೂರಿಗೆ ಏನಾಗಿದೆ..? ಒಂದು ದಿನ ರಣ ಮಳೆ, ಮತ್ತೊಂದು ದಿನ ಬಿರು ಬಿಸಿಲು! ವೈದ್ಯರಿಂದ ಎಚ್ಚರಿಕೆ..!

ಎಮ್ ಫಾಕ್ಸ್ ಅಥವಾ ಮಂಕಿ ಫಾಕ್ಸ್ ಸೋಂಕು ಈಗ ಆಫ್ರಿಕಾದ ಬಳಿಕ ಪಾಕಿಸ್ತಾನದಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಮೂವರಲ್ಲಿ ಮಂಕಿಫಾಕ್ಸ್​ ಸೋಂಕು ದೃಢವಾಗಿದೆ. ಯುಎಇ ಯಿಂದ ಪಾಕಿಸ್ತಾನಕ್ಕೆ ಬಂದ ಮೂವರಲ್ಲಿ ಮಂಕಿ ಫಾಕ್ಸ್ ದೃಢಗೊಂಡಿದ್ದು. ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ ಆತಂಕವಂತೂ ಉದ್ಭವಿಸಿದೆ.

ಮೊದಲಿಗೆ ಆಫ್ರಿಕಾದಲ್ಲಿ ಕಂಡು ಬಂದ ಮಂಕಿಫಾಕ್ಸ್​ 504 ಜನರನ್ನು ಈಗಾಗಲೇ ಬಲಿ ಪಡೆದಿದೆ.ಆಫ್ರಿಕಾ, ಸ್ವೀಡನ್ ಬಳಿಕ ಈಗ ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿರುವ ಮಂಕಿಫಾಕ್ಸ್​ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಈ ಮಂಕಿ ಫಾಕ್ಸ್​ನ್ನು ವರ್ಲ್ಡ್ ಹೆಲ್ತ್​ ಎಮರ್ಜೆನ್ಸಿ ಎಂದು ಘೋಷಿಸಿದೆ. ಈಗಾಗಲೇ ಈ ಕಾಯಿಲೆ 117ಕ್ಕೂ ಹೆಚ್ಚು ದೇಶಗಳಿಗೆ ಈ ಕಾಯಿಲೆ ಹರಡಿದ್ದು ದೊಡ್ಡ ಚಿಂತೆಗೆ ಕಾರಣವಾಗಿದೆ.

ಏನಿದು ಮಂಕಿ ಫಾಕ್ಸ್?
ಮಂಕಿ ಫಾಕ್ಸ್ ಅಂದ್ರೆ ಅದು ಕೂಡ ಒಂದು ವೈರಲ್ ಇನ್​ಫೆಕ್ಷನ್​. ಇದು ಸಾಮಾನ್ಯವಾಗಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಾಣ ಸಿಗುತ್ತದೆ. ಇದು ಸ್ಮಾಲ್​ ಫಾಕ್ಸ್​​ನ ಮತ್ತೊಂದು ತಳಿ ಇದ್ದಂತೆ. ಈಗಾಗಲೇ ಸ್ಮಾಲ್ ಫಾಕ್ಸ್​ನ್ನು ನಿರ್ಮೂಲನೆ ಮಾಡಲಾಗಿದೆ. ಅದರ ತಳಿಯಾಗಿರುವ ಈ ಮಂಕಿ ಫಾಕ್ಸ್ ಈಗ ಆತಂಕ ಸೃಷ್ಟಿಸಿದೆ. ಮಂಕಿ ಫಾಕ್ಸ್ ಅನ್ನೋದು ಚರ್ಮಕ್ಕೆ ಸಂಬಂಧಿಸಿದ ಸೋಂಕು. ಚರ್ಮದ ಮೇಲೆ ಗುಳ್ಳೆಗಳು ಏಳಲು ಶುರುವಾಗುತ್ತವೆ. ನಂತರ ಇಡೀ ಮೈಗೆ ವ್ಯಾಪಿಸಿಕೊಂಡು ಮೊಡವೆಗಳಲ್ಲಿ ಕೀವು ತುಂಬಿ ಇಲ್ಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ:ಮದುವೆ ಆದ ಹೊಸ ಜೋಡಿ ತಿನ್ನಲೇಬೇಕು ಈ ಪಾನ್​​.. ಅಬ್ಬಬ್ಬಾ! ಇದರ ಬೆಲೆ 1 ಲಕ್ಷ ರೂ!

ಇದು ಮೊದಲ ಬಾರಿ 1958ರಲ್ಲಿ ಕಂಡು ಹಿಡಿಯಲಾಗಿತ್ತು. ಕೋತಿಗಳ ಮೇಲೆ ನಡೆದ ಅನೇಕ ಸಂಶೋಧನೆಗಳು ಇಂಥಹದೊಂದು ರೋಗ ಇದೆ ಅನ್ನೋದನ್ನು ತಿಳಿಸಿತ್ತು. 1970ರಲ್ಲಿ ಕಾಂಗೋದಲ್ಲಿ 9 ತಿಂಗಳ ಮಗುವಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು.

ಪ್ರಾಣಿಗಳ ಕಡಿತದಿಂದ, ಅವುಗಳ ಉಗುರಿನಿಂದ ಪರಚುವುದರಿಂದ, ಇಲ್ಲವೇ ಸೋಂಕು ಕಾಣಿಸಿಕೊಂಡವರೊಂದಿಗಿನ ಸಂಪರ್ಕದಿಂದ ಈ ಸೋಂಕು ತಗಲುತ್ತದೆ. ಸ್ನಾಯುಗಳಲ್ಲಿ ವಿಪರೀತ ನೋವು. ಮುಖ, ಕೈ, ಕಾಲುಗಳಲ್ಲಿ ಸೇರಿ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳು ಏಳುತ್ತವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿ ಕುಟುಂಬದವರೊಂದಿಗೆ ಸಂಪರ್ಕದಿಂದ ದೂರವಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಜಗತ್ತಿಗೆ ಕೊರೊನಾ ಆಯ್ತು ಈಗ ಮಂಕಿ ಫಾಕ್ಸ್​ ಭೀತಿ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು? ಇದರ ಲಕ್ಷಣವೇನು?

https://newsfirstlive.com/wp-content/uploads/2024/08/MONKEY-POX.jpg

Load More