ಡೆಲಿವರಿ ಬಾಯ್​ನಿಂದ ಸಿವಿಲ್ ಜಡ್ಜ್ ಆಗುವ ತನಕ ; ಹೇಗಿತ್ತು 29 ವರ್ಷದ ಯುವಕನ ಸಾಧನೆಯ ಹಾದಿ?

author-image
Gopal Kulkarni
Updated On
ಡೆಲಿವರಿ ಬಾಯ್​ನಿಂದ ಸಿವಿಲ್ ಜಡ್ಜ್ ಆಗುವ ತನಕ ; ಹೇಗಿತ್ತು 29 ವರ್ಷದ ಯುವಕನ ಸಾಧನೆಯ ಹಾದಿ?
Advertisment
  • ಡೆಲಿವರಿ ಬಾಯ್ ಆಗಿದ್ದ ವ್ಯಕ್ತಿ ಈಗ ಸಿವಿಲ್ ಜಡ್ಜ್
  • ದೇಶದ ಗಮನವನ್ನು ಸೆಳೆದ 29 ವರ್ಷದ ಕೇರಳ ಯುವಕ
  • ಸಾಧನೆಗೆ ಸಮಸ್ಯೆಗಳು ಅಡ್ಡಿಯಲ್ಲ ಎಂದು ಸಾರಿದ ಹುಡುಗ

ಮಾಡಬೇಕು, ಸಾಧಿಸಬೇಕು ಅನ್ನೋ ಛಲ ಅನ್ನೋದು ಒಂದಿದ್ದರೇ ಸಾಧಿಸಬಹುದಾ ಅನ್ನೋದು ಕೆಲವರ ಪ್ರಶ್ನೆ. ಆದ್ರೇ.. ಮಾಡ್ತೀನಿ.. ಆಗುತ್ತೆ ಅನ್ನೋ ಸಣ್ಣ ಹೋಪ್ ನಮ್ಮನ್ನ ಎಲ್ಲೋ ಕರೆದುಕೊಂಡು ಹೋಗುತ್ತೆ. ಅದೇ ರೀತಿ 2024ರ ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಎರಡನೇಯವರಾಗಿ ಪಾಸ್ ಆಗಿ, ಸಿವಿಲ್ ನ್ಯಾಯಾಧೀಶರಾಗುವ ಅರ್ಹತೆ ಪಡೆದಿರೋ ವಕೀಲ ಯಾಸೀನ್ ಶಾನ್ ಮುಹಮ್ಮದ್ ಅವರ ಲೈಫ್​​ ಸ್ಟೋರಿ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

ಯಾಸೀನ್ ಅವರು, ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾಗಿದ್ದಾರೆ. ಅವರ ತಾಯಿ ಆರನೇ ತರಗತಿಗೇ ಶಾಲೆ ಬಿಟ್ಟು, 14ನೇ ವರ್ಷದಲ್ಲಿ ಮದುವೆಯಾಗ್ತಾರೆ. ಅವರ ತಾಯಿ, 15 ವರ್ಷದ ಬಾಲಕಿಯಾಗಿದ್ದಾಗ, ತಮ್ಮ ಮೊದಲ ಮಗನಾಗಿ ಯಾಸೀನ್ ಹುಟ್ತಾರೆ. ಇದಾದ್ಮೇಲೆ 19ನೇ ವರ್ಷಕ್ಕೆನೇ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದು, ಡಿವೋರ್ಸ್​ ಕೂಡ ಆಗುತ್ತೆ. ಯಾಸೀನ್ ಅವರಿಗೂ, ಅವರ ತಂದೆಗೂ ಅಷ್ಟೊಂದು ಕಾಂಟ್ಯಾಕ್ಟ್ ಇರೋದಿಲ್ಲ. ಇಬ್ಬರು ಮಕ್ಕಳು ಹಾಗೂ ಅಜ್ಜಿಯ ಯೋಗಕ್ಷೇಮವನ್ನು ಅವರ ತಾಯಿಯೇ ನೋಡಿಕೊಳ್ಳಬೇಕಿತ್ತು. ದಿನಗೂಲಿ ಕೆಲಸ ಮಾಡಿದ್ರು. ಆಮೇಲೆ, ಆಶಾ ಕಾರ್ಯಕರ್ತೆಯಾಗಿ ತಮ್ಮ ವೃತ್ತಿ ಜೀವನ ಮುಂದುವರಿಸಿದ್ದರು.

ಬಡವರಿಗಾಗಿ ಕೊಡೋ ವಸತಿ ಯೋಜನೆಯಿಂದ ಸಿಕ್ಕ ಮನೆಯಲ್ಲಿ, ದಿನಾ ಬಳಸ್ತಿದ್ದ ಬಟ್ಟೆಗಳನ್ನೇ ಯಾಸೀನ್ ಯೂಸ್ ಮಾಡ್ತಿದ್ದರು. ಒಂದು ಬುಕ್ ಖರೀದಿ ಮಾಡೋಕೆ ದುಡ್ಡಿರಲಿಲ್ಲ. ಮನೆಯ ಕಷ್ಟದ ನಡುವೆ ಡೈಲಿ ನ್ಯೂಸ್​ ಪೇಪರ್ ಹಾಗೂ ಹಾಲಿನ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾ, ತಾನು ಸಂಪಾದಿಸ್ತಿದ್ದ ದುಡ್ಡಿನಿಂದ ಕುಟುಂಬಕ್ಕೆ ಹೆಲ್ಪ್ ಮಾಡ್ತಿದ್ರು. ಆದ್ರೇ ಆ ಚಿಕ್ಕ ವಯಸ್ಸಲ್ಲಿ ಇಂಟ್ರೆಸ್ಟಿಂಗ್ ಅಂತಂದ್ರೇ ಓದಬೇಕು ಅನ್ನೋ ಶ್ರದ್ಧೆ ಇತ್ತು. ಇದ್ರ ನಡುವೆ ಮನೆ ಕಟ್ತಿರೋವಾಗ ಕೇಳಿ, ಕೆಲಸ ಮಾಡ್ತಾ ದಿನಗೂಲಿಯಾಗಿ ಕೆಲಸ ಮಾಡಿದ್ರು.

ಮನೆಗೆ ಅನೀವಾರ್ಯವಾದ ದುಡ್ಡು ಒಂದು ಕಡೆ ಆದ್ರೇ, ಓದಬೇಕು ಅನ್ನೋ ಛಲದ ನಡುವೆ ಓದೋಕೆ ಸಮಯ ಸಿಗ್ತಾ ಇರಲಿಲ್ಲ. ಅದ್ರಿಂದ ಎಕ್ಸಾಂನಲ್ಲಿ ಕಡಿಮೆ ಅಂಕಗಳು ಬರ್ತಿದ್ವು. ತಮ್ಮ 12ನೇ ತರಗತಿ ಓದು ಕಂಪ್ಲೀಟ್ ಆದಾಗ, ಯಾಸೀನ್ ಅವರು, ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿ ಮಾಡಿದ್ರು. ಡಿಪ್ಲೊಮಾ ಪದವಿ ಕೌಶಲ್ಯಾಧಾರಿತ ಶಿಕ್ಷಣ ಆಗಿದ್ರಿಂದ, ಜಾಬ್ ಹುಡುಕೋಕೆ ಅವಕಾಶ ಸಿಗ್ತಿತ್ತು. ಒಂದು ವರ್ಷ ಗುಜರಾತ್​ನಲ್ಲಿ ಜಾಬ್ ಮಾಡಿ, ಮತ್ತೆ ಕೇರಳಗೆ ವಾಪಸ್ ಆಗಿ ಪಬ್ಲಿಕ್ ಅಡ್ಮಿಮಿಸ್ಟ್ರೇಷನ್​​ನಲ್ಲಿ ಪದವಿ ಪಡೆದ್ರು. ಇದಾದ್ಮೇಲೆ ಕಾನೂನು ಶಿಕ್ಷಣ ಕಂಟಿನ್ಯೂ ಮಾಡಿದ್ರು.

ರಾಜ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ 46ನೇ ಯಾಂಕ್ ಪಡೆದು, ಎರ್ನಾಕುಲಂನ ಪ್ರತಿಷ್ಠಿತ ಸರ್ಕಾರಿ ಲಾ ಕಾಲೇಜಿನಲ್ಲಿ ಪ್ರವೇಶ ಪಡೆದ್ರು. ಇದ್ರ ಜೊತೆಗೆ ಮನೆಯಲ್ಲೇ ಮಕ್ಕಳಿಗೆ ಮನೆಪಾಠ ಮಾಡ್ತಿದ್ರು. ಈ ಲಾ ಎಜುಕೇಷನ್ ಪಡೀತಾ ಇರೋವಾಗಲೇ, ಝಮ್ಯಾಟೊಗೆ ಸೇರಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ರು. ಆದ್ರೇ ಇದ್ರಲ್ಲಿ ದುಡ್ಡು ಮಾಡೋಣ ಅಂತ ಬಂದ್ರೇ ಭಯಂಕರ ಕೊವಿಡ್ ದಿನಗಳು ಶುರುವಾಗಿ, ಇನ್ಕಂಗೆ ಬ್ರೇಕ್ ಕೊಟ್ಟಿತ್ತು.

ಇದನ್ನೂ ಓದಿ:ಕೆನಡಾ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ; ದಿಢೀರ್ ರಾಜೀನಾಮೆ ನೀಡಿದ ಪ್ರಧಾನಿ ಜಸ್ಟಿನ್ ಟ್ರುಡೊ

2023ರ ಮಾರ್ಚ್​ನಲ್ಲಿ ಲಾಯರ್ ಆಗಿ, ನೋಂದಾಯಿಸಿಕೊಂಡು, ಪಟ್ಟಾಂಬಿ ಮುನ್ಸಿಫ್-ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಕೆಲಸ ಮಾಡೋಕೆ ಶುರು ಮಾಡಿದ್ರು. ವಕೀಲರಾಗಿದ್ದ ಶಾಹುಲ್ ಹಮೀದ್ ಅವರ ಹತ್ರಾ, ಜ್ಯೂನಿಯರ್ ಲಾಯರ್ ಆಗಿ ವೃತ್ತಿ ಜೀವನ ಶುರು ಮಾಡಿದ್ರು.
ಇಂಟ್ರೆಸ್ಟಿಂಗ್ ವಿಚಾರ ಅಂತಂದ್ರೇ, ಅದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಎನ್.ವಿ. ಶಾಹೀನಾ ಹಾಗೂ ಎಂ.ಆ‌ರ್. ರೇಷ್ಮಾ ಅನ್ನೋರು ಕೂಡಾ ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಪಾಸ್ ಆಗಿದ್ರು. ಈ ಇಬ್ಬರು, ಪರೀಕ್ಷೆಯ ಪ್ರಿಪರೇಷನ್​​ಗೆ ಸಪೋರ್ಟ್​ ಮಾಡಿದ್ರು. ದಿನ ಹೆಚ್ಚಿನ ಕೆಲಸ ಇದ್ರೂ, ಹಿರಿಯ ವಕೀಲರಾದ ಶಾಹುಲ್ ಹಮೀದ್ ಅವರ ಮಾರ್ಗದರ್ಶನ ಹಾಗೂ ಅವಕಾಶ ನೀಡೋ ಮೂಲಕ ನನಗೆ ನೆರವು ಕೊಟ್ಟರು ಅಂತ ಯಾಸೀನ್ ಅವರು ಹೇಳಿಕೊಳ್ತಾರೆ.

ಇದನ್ನೂ ಓದಿ: ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು?

ಕೇವಲ 29 ವರ್ಷದ ಯಾಸೀನ್ ಅವರು ಹೇಳೋ ಹಾಗೇ, ಅವಕಾಶ ಸಿಕ್ರೇ ಸ್ನಾತಕೋತ್ತರ ಕಾನೂನು ಪದವಿ ವ್ಯಾಸಂಗ ಮಾಡಬೇಕು ಅನ್ನೋದು ಗುರಿ ಇದೆ. ನಾವು ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡೋಕೆ ಬಯಸ್ತೀನಿ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆ, ನಿಷ್ಠೆ ಹಾಗೂ ನನ್ನ ಆತ್ಮಸಾಕ್ಷಿಯಿಂದ ಮಾಡ್ತೀನಿ ಅಂತ ನ್ಯಾಯಾಧೀಶರ ಪಾತ್ರವನ್ನು ಜನರಿಗೆ ನೆರವು ನೀಡುವ ಮತ್ತು ನ್ಯಾಯ ದೊರಕಿಸಿಕೊಡುವ ಅವಕಾಶವನ್ನಾಗಿ ಯಾಸೀರ್ ಪರಿಗಣಿಸಿದ್ದಾರೆ.

ತಮ್ಮ ಬಾಲ್ಯದ ಕಷ್ಟಗಳನ್ನು ಮೆಟ್ಟಿ ನಿಂತಿರುವ ಯಾಸೀನ್ ಬಳಿ ವಿಶ್ವಕ್ಕೆ ತಮ್ಮ ಕಷ್ಟದ ದಿನಗಳು ಹಾಗೂ ಕಠಿಣ ಪರಿಶ್ರಮದ ಕುರಿತು ಹೇಳಿಕೊಳ್ಳುವಂತಹ ಜೀವನಗಾಥೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment