ಡಿಸ್ಲೆಕ್ಸಿಯಾದಿಂದ ADHDವರೆಗೆ; ಬಾಲಿವುಡ್​ನ ಹಲವು ನಟ ನಟಿಯರು ಅನುಭವಿಸಿದ್ದಾರೆ ಇಂತಹ ಸಮಸ್ಯೆ

author-image
Gopal Kulkarni
Updated On
ಡಿಸ್ಲೆಕ್ಸಿಯಾದಿಂದ ADHDವರೆಗೆ; ಬಾಲಿವುಡ್​ನ ಹಲವು ನಟ ನಟಿಯರು ಅನುಭವಿಸಿದ್ದಾರೆ ಇಂತಹ ಸಮಸ್ಯೆ
Advertisment
  • ಬಾಲಿವುಡ್ ಅನೇಕ ನಟರು ಡಿಸ್ಲೆಕ್ಸಿಯಾ ಕಾಯಿಲೆಯಿಂದ ಬಳಲಿದ್ದಾರೆ
  • ಹೃತಿಕ್, ಅಭಿಷೇಕ್, ಆಲಿಯಾ ಇವರು ಅನುಭವಿಸಿದ ಸಮಸ್ಯೆಗಳಾವುವು?
  • ಹೃತಿಕ್ ಅನೇಕ ಬಾರಿ ಶಾಲೆಯಿಂದ ಅಳುತ್ತಲೇ ಮನೆಗೆ ಬರುತ್ತಿದ್ದ್ದು ಏಕೆ?

ಡಿಸ್ಲೆಕ್ಸಿಯಾ, ಒದು ಬರಹಕ್ಕೆ ಅತಿದೊಡ್ಡ ತೊಂದರೆಯುಂಟು ಮಾಡುವ ಕಾಯಿಲೆ. ಓದು, ಬರಹದಲ್ಲಿ ಕಾಗುಣಿತಗಳನ್ನು ಕಂಡು ಹಿಡಿಯುವಾಗ ಅನೇಕ ತೊಂದರೆಗಳನ್ನುಂಟು ಮಾಡುತ್ತದೆ. ಈ ಒಂದು ಸಮಸ್ಯೆಯ ಬಗ್ಗೆ ಬಾಲಿವಡ್​ನ ನಟ ಹಾಗೂ ನಟಿಯರು ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಾರಣ ಬಾಲ್ಯದಲ್ಲಿಯೂ ಕೂಡ ಅವರು ಡಿಸ್ಲೆಕ್ಸಿಯಾ, ಚಂಚಲತೆ ಹಾಗೂ ಅತಿಚಟುವಟಿಕೆ ಎಂದು ಗುರುತಿಸಲ್ಪಡುವ ಎಡಿಹೆಚ್​ಡಿ ಸಮಸ್ಯೆಯಿಂದಲೂ ಕೂಡ ಬಳಲುತ್ತಿದ್ದವರು. ಈ ಎರಡು ಸಮಸ್ಯೆಗಳನ್ನು ಎದುರಿಸಿ ಅದನ್ನು ಗೆದ್ದು ಬಂದ ಅನೇಕ ಬಾಲಿವುಡ್ ನಟ ನಟಿಯರು ಅವುಗಳ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ. ಆ ಸಮಸ್ಯೆಗಳಿಂದ ಬಳಲುತ್ತಿರುವವರ ಬದುಕಲ್ಲಿ ಒಂದು ಆಶಾಕಿರಣ ಮೂಡುವಂತೆ ಮಾಡಿದ್ದಾರೆ. ಹಾಗಿದ್ರೆ ಈ ಸಮಸ್ಯೆಗಳಿಂದ ಬಳಲಿ ಅದರಿಂದ ಹೊರಗೆ ಬಂದ ಬಾಲಿವುಡ್ ಸ್ಟಾರ್​ಗಳು ಯಾರು ಯಾರು ಅಂತ ನೋಡುವುದಾದ್ರೆ.

publive-image

ಅಭಿಷೇಕ್ ಬಚ್ಚನ್
ಬಾಲಿವುಡ್​ನ ಶಹನ್ ಷಾ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ತಮ್ಮ ಶಾಲಾ ದಿನಗಳಲ್ಲಿ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಓದುವುದರಲ್ಲಿ, ಬರೆಯುವುದರಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಆರಂಭದಲ್ಲಿ ಅವರ ಶೈಕ್ಷಣಿಕ ವರ್ಷಗಳಲ್ಲಿ ಅವರು ಅನೇಕ ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ. ಅಭಿಷೇಕ್​ ಬಚ್ಚನ್​ರನ್ನು ನಿರಂತರವಾಗಿ ಟ್ರೇನ್ ಮಾಡಿದ ಅವರ ಶಿಕ್ಷಕರು ಹಾಗೂ ಪಡೆದ ಚಿಕಿತ್ಸೆ ಅವರನ್ನು ಈ ಸಮಸ್ಯೆಯಿಂದ ಹೊರತಂದಿತು. ಮುಂದೆ ಬಾಲಿವುಡ್​ನಲ್ಲಿ ಅವರು ಅನೇಕ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

publive-image

ಬೊಮನ್ ಇರಾನಿ
ಬೊಮನ್ ಇರಾನಿ ಅಂದ್ರೆ ಅಷ್ಟು ಬೇಗ ಯಾರಿಗೂ ಗೊತ್ತಾಗುವುದಿಲ್ಲ. 3 ಇಡಿಯಟ್ಸ್​ ಸಿನಿಮಾದ ವೈರಸ್ ಅಂದ ತಕ್ಷಣ. ಇಲ್ಲವೇ ಮುನ್ನಾಭಾಯ್ ಎಂಬಿಬಿಎಸ್​ ಸಿನಿಮಾ ಡೀನ್ ಅಂದತಕ್ಷಣ ನಮಗೆ ನೆನಪಗುವುವರೇ ಬೊಮನ್ ಇರಾನಿ. ಬೊಮನ್ ಇರಾನಿಯವರು ಕೂಡ ಬಾಲ್ಯದಲ್ಲಿ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಾತನಾಡುವಾಗ ವಿಪರೀತವಾಗಿ ತೊದಲುತ್ತಿದ್ದರು. ಅದನ್ನು ಕಂಡು ಅವರ ಸಹಪಾಠಿಗಳು ಗೇಲಿ ಮಾಡಿ ನಗುತ್ತಿದ್ದರು.ಬೊಮನ್ ಇರಾನಿ ತಮ್ಮ ಮಾತನ್ನು ಸುಧಾರಿಸಿಕೊಳ್ಳಲು ಹಾಡಲು ಶುರು ಮಾಡಿದರು. ಆ ಒಂದು ಪ್ರಯೋಗ ಅವರ ಜೀವನದಲ್ಲಿ ಬಹಳದ ದೊಡ್ಡ ಪಾತ್ರವಹಿಸಿತು. ನಿರಂತರವಾಗಿ ಹಾಡುತ್ತಾ ಹಾಡುತ್ತಾ ಬಂದ ಬೊಮನ್ ಇರಾನಿ ತಮ್ಮ ತೊದಲು ಮಾತುಗಳಿಂದ ಮುಕ್ತರಾದರು

publive-image

ಹೃತಿಕ್ ರೋಷನ್
ಬಾಲಿವುಡ್ ಸ್ಟಾರ್​ ಕಂಡ ಅತ್ಯಂತ ಹ್ಯಾಂಡ್​ಸಮ್ ನಟ. ಬಾಲ್ಯದಲ್ಲಿ ಹೃತಿಕ್ ರೋಷನ್​ಗೂ ಕೂಡ ಮಾತಿನ ತೊಂದರೆಯಿಂದ ಬಳಲುತ್ತಿದ್ದರು. ಅವರು ಸ್ಪೀಚ್ ಥೇರಪಿ ಕ್ಲಾಸ್​ಗಳಿಗೆ ಹೋಗಿ ತಮ್ಮ ಸಮಸ್ಯೆಯನ್ನು ಸರಿ ಮಾಡಿಕೊಂಡರು. ಅನೇಕ ಬಾರಿ ಹೃತಿಕ್ ಈ ಬಗ್ಗೆ ಮಾತನಾಡಿದ್ದಾರೆ. ನಾನು ನನ್ನ ಶಾಲಾ ದಿನಗಳಲ್ಲಿ ಸ್ನೇಹಿತರೊಂದಿಗೆ ಮಾತೇ ಆಡುತ್ತಿರಲಿಲ್ಲ. ಸ್ನೇಹಿತರನ್ನು ಹೆಚ್ಚು ಮಾಡಿಕೊಂಡಿರಲಿಲ್ಲ. ನನಗೆ ಆಗ ಜೀವನವೇ ಸರಿಯಿಲ್ಲ ಎಂದೆನಿಸುತ್ತಿತ್ತು. ಅನೇಕ ಬಾರಿ ಶಾಲೆಯಿಂದ ಅಳುತ್ತ ಮನೆಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಅಂತಹ ಹೃತಿಕ್ ಇಂದು ಬಾಲಿವುಡ್​ನ ಬಹುಬೇಡಿಕೆಯ ನಟ.

publive-image

ಆಲಿಯಾ ಭಟ್​
ಆಲಿಯಾಭಟ್​ಗೆ ಎಡಿಹೆಚ್​ಡಿ ಅಂದ್ರೆ ಚಂಚಲತೆ ಹಾಗೂ ಅತಿ ಚಟುವಟಿಕೆಯ ಕಾಯಿಲೆಯಿತ್ತು. ಈ ತರದ ಜನರು ಒಂದು ಕಡೆ ನಿರಂತರವಾಗಿ ಕುಳಿತುಕೊಳ್ಳಲು ಒದ್ದಾಡುತ್ತಾರೆ. ತುಂಬಾ ಆ್ಯಕ್ಟಿವ್ ಆಗಿರುವಂತೆ ಕಂಡರೂ ಕೂಡ ಅವರು ಕುಂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ. ಸದಾ ಚಂಚಲೆತೆಯನ್ನೇ ತುಂಬಿಕೊಂಡಿರುತ್ತಾರೆ. ಈ ಸಮಸ್ಯೆಯನ್ನು ಹೊಂದಿದ್ದ ಆಲಿಯಾ ಭಟ್, ಮನರೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಆ ಸಮಸ್ಯೆಯಿಂದ ಆಚೆ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment