ಹರಿಯಾಣದಿಂದ ನಾಸಾದವರೆಗೆ.. ಸುನೀತಾ ಭೂಮಿಗೆ ವಾಪಸ್ಸಾಗುವಾಗ ನೆನಪಾದರು ಕಲ್ಪನಾ ಚಾವ್ಲಾ

author-image
Gopal Kulkarni
Updated On
ಹರಿಯಾಣದಿಂದ ನಾಸಾದವರೆಗೆ.. ಸುನೀತಾ ಭೂಮಿಗೆ ವಾಪಸ್ಸಾಗುವಾಗ ನೆನಪಾದರು ಕಲ್ಪನಾ ಚಾವ್ಲಾ
Advertisment
  • ಸುನೀತಾ ಭೂಮಿಗೆ ಮರಳುವ ವೇಳೆ ಕಲ್ಪನಾ ನೆನಪಾಗಿದ್ದು ಏಕೆ?
  • ಬಾಹ್ಯಾಕಾಶ ಕ್ಷೇತ್ರದಲ್ಲೇ ಇತಿಹಾಸ ಬರೆದ ಮೊದಲ ಭಾರತೀಯ ಮಹಿಳೆ
  • ಕಲ್ಪನಾ ಚಾವ್ಲಾ ಅವರ ದುರಂತ ಅಂತ್ಯವಾಗಿದ್ದು ಹೇಗೆ ಗೊತ್ತಾ?

ಭಾರತದ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಭೂಮಿಗೆ ವಾಸ್ಸಾಗುವ ಹಾದಿಯಲ್ಲಿದ್ದಾರೆ. ನಿರಂತರ 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದಿರುವ ಸುನೀತಾ 9 ತಿಂಗಳ ಬಾಹ್ಯಾಕಾಶ ವನವಾಸ ಮುಗಿಸಿ ಭೂಮಿಗೆ ವಾಪಸ್ಸಾಗುವ ಪ್ರಕ್ರಿಯೆಲ್ಲಿದ್ದಾರೆ. ಇದೇ ಹೊತ್ತಿನಲ್ಲಿ ಕೇವಲ ಸುನೀತಾ ವಿಲಿಯಮ್ಸ್​ಗೆ ಮಾತ್ರವಲ್ಲ ಜಾಗತಿಕವಾಗಿ ಬಾಹ್ಯಾಕಾಶದ ಕ್ಷೇತ್ರದಲ್ಲಿ ಅನೇಕರಿಗೆ ಪ್ರೇರಣೆಯಾದ ಕಲ್ಪನಾ ಚಾವ್ಲಾ ಈಗ ಎಲ್ಲರಿಗೂ ನೆನಪಾಗುತ್ತಿದ್ದಾರೆ.

ಕಲ್ಪನಾ ಚಾವ್ಲಾ ಇಂದಿಗೆ ಬದುಕಿದ್ದರೆ 62 ವರ್ಷ ತುಂಬಿರುತ್ತಿತ್ತು. ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಮೊದಲ ಭಾರತದ ಮಹಿಳೆ ಕಲ್ಪನಾ ಚಾವ್ಲಾ. ಮಾರ್ಚ್​ 17,1962ರಲ್ಲಿ ಹರಿಯಾಣದ ಕರ್ನಲ್​ನಲ್ಲಿ ಜನಿಸಿದ್ದ ಕಲ್ಪನಾ ಚಾವ್ಲಾಗೆ ಚಿಕ್ಕ ವಯಸ್ಸಿನಲ್ಲಿಯೇ ವಿಮಾನ ಹಾಗೂ ಬಾಹ್ಯಾಕಾಶದ ಬಗ್ಗೆ ವಿಪರೀತ ಆಕರ್ಷಣೆಯಿತ್ತು. ಅವಳ ಆಸಕ್ತಿಯನ್ನು ಕಂಡ ಅವರ ಪೋಷಕರ ಬೆಂಬಲದಿಂದ ಕಲ್ಪನಾ ಚಾವ್ಲಾ ಪಂಜಾಬ್​ನ ಇಂಜನೀಯರಿಂಗ್ ಕಾಲೇಜ್​ನಿಂದ ಏರೋನಾಟಿಕಲ್ ಇಂಜಿನೀಯರಿಂಗ್​ ಪದವಿಯನ್ನು ಪಡೆದು ಅಮೆರಿಕಾದತ್ತ ಹಾರಿದರು. ಅಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್​ನಲ್ಲಿ ಟೆಕ್ಸಾಸ್​ ವಿಶ್ವವಿದ್ಯಾಲಯದಿಂದ 1984ರಲ್ಲಿ ಮಾಸ್ಟರ್ ಡಿಗ್ರಿ ಪಡೆದರು. ಮುಂದೆ ಕೊಲೊರಾಡೋ ವಿಶ್ವವಿದ್ಯಾಲಯದಲ್ಲಿ, ಇದೇ ವಿಷಯವಾಗಿ 1988ರಲ್ಲಿ ಪಿಹೆಚ್​​ಡಿಯನ್ನು ಕೂಡ ಮುಗಿಸಿದ್ದರು

publive-image

ಅವರ ಶೈಕ್ಷಣಿಕ ಯಶಸ್ಸು ಹಾಗೂ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಇರುವ ಶ್ರದ್ಧೆಯನ್ನು ಗಮನಿಸಿದ ನಾಸಾ, ಅವರನ್ನು 1994ರಲ್ಲಿ ತನ್ನ ಸಂಸ್ಥೆಗೆ ಸೇರಿಸಿಕೊಂಡಿತು. 1997ರಲ್ಲಿ ಮೊದಲ ಬಾರಿಗೆ ಯಾವ ಭಾರತೀಯ ನಾರಿಯೂ ಮಾಡದ ಒಂದು ಮಹಸಾಹಸವನ್ನು ಕಲ್ಪನಾ ಚಾವ್ಲಾ ಮಾಡಿದರು. ಅವರು ಆ ಸಮಯದಲ್ಲಿಯೇ ಒಬ್ಬ ಗಗನಯಾತ್ರಿಯಾಗಿ ಗುರುತಿಸಿಕೊಂಡರು
ಕಲ್ಪನಾ ಚಾವ್ಲಾ ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ಸ್ಪೇಸ್​ ಮಿಷನ್​ನಲ್ಲಿ ಭಾಗಿಯಾಗಿ ಇತಿಹಾಸ ಬರೆದರು. ಮೊದಲ ಬಾರಿ ಅಂದ್ರೆ 1997ರಲ್ಲಿ ಎಸ್​ಟಿಎಸ್​-87 ಎಂಬ ಸ್ಪೇಸ್ ಶಟ್ಲ್​ ಕೊಲಂಬೀಯಾದಿಂದ ಬಾಹ್ಯಾಕಾಶಕ್ಕೆ ನೆಗೆಯಿತು. ಇಲ್ಲಿ ಅವರು ರೋಬೋಟಿಕ್​​ ಆರ್ಮ್ ಆಪರೇಟರ್​ ತಜ್ಞೆಯಾಗಿ ಕಾರ್ಯ ನಿರ್ವಹಿಸಿದರು. ಇದು ಇತಿಹಾಸದಲ್ಲಿ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಕಲ್ಪನಾ ಚಾವ್ಲಾ ಹೆಸರಲ್ಲಿ ಬರೆಯಿತು.

ಇದನ್ನೂ ಓದಿ: ಸಮುದ್ರ ಪಾದಸ್ಪರ್ಶಕ್ಕಿಂತ ಮುಂಚೆ ಏನೆಲ್ಲಾ ತಯಾರಿ ನಡೆದಿರುತ್ತೆ ಗೊತ್ತಾ? ನೀವೆಂದೂ ಕೇಳಿರದ ಸ್ಟೋರಿ!

ಇದೇ ವೇಳೆ ಅಂದಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದ್ರಕುಮಾರ್ ಗುಜ್ರಾಲ್​, ಕಲ್ಪನಾ ಚಾವ್ಲಾ ಅವರು ಬಾಹ್ಯಾಕಾಶದಲ್ಲಿದ್ದಾಗಲೇ ಮಾತನಾಡಿದ್ದರು. ಕಲ್ಪನಾ, ನಾವು ನಿಮ್ಮನ್ನು ನಿಜಕ್ಕೂ ಹೆಮ್ಮೆಯಿಂದ ನೋಡುತ್ತೇವೆ. ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಕೂಡ ನಿಮ್ಮಂತಹ ವ್ಯಕ್ತಿಯನ್ನು ಈಗ ಗೌರವದಿಂದ ಹಾಗೂ ಹೆಮ್ಮೆಯಿಂದ ನೋಡುತ್ತಿದ್ದಾರೆ. ನಿಜಕ್ಕೂ ಇದು ಇನ್ನೊಬ್ಬರಿಗೆ ಮಾರ್ಗದರ್ಶನವಾಗುವ ಸಾಹಸ. ಅದರಲ್ಲೂ ಪ್ರಮುಖವಾಗಿ ಭಾರತೀಯ ಯುವತಿಯರಿಗೆ ನೀವೊಂದು ದೊಡ್ಡ ಪ್ರೇರಣೆ ಎಂದು ಹಾಡಿ ಹೊಗಳಿದ್ದರು.

ಇದನ್ನೂ ಓದಿ:ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿರೋ ಸುನಿತಾ ವಿಲಿಯಮ್ಸ್​​ಗೆ ಇರೋ ಹತ್ತಾರು ಸವಾಲುಗಳೇನು?

ಕಲ್ಪನಾ ಚಾವ್ಲಾ ಬಾಹ್ಯಾಕಾಶವನ್ನು ಆಕಾಶದ ಕತ್ತಲೆಯ ಗುಮ್ಮಟ ಎಂದು ಬಣ್ಣಿಸಿದ್ದರು. ಸುತ್ತಲೂ ಕೇವಲ ತಾರೆಗಳೇ ಗೋಚರಿಸುತ್ತವೆ. ಕಥೆಗಳ ಪುಸ್ತಕಗಳಲ್ಲಿಗಿಂತ ಅವು ಇಲ್ಲಿ ಅದ್ಭುತವಾಗಿ ಕಾಣುತ್ತವೆ ಎಂದು ಹೇಳಿದ್ದರು. ಅದು ಅಲ್ಲದೇ ಅವರು ಇಂದ್ರಕುಮಾರ್ ಗುಜ್ರಾಲ್ ಅವರಿಗೆ ನಾವು ಕೆಲವು ದಿನಗಳ ಹಿಂದಷ್ಟೇ ಆರ್ಬಿಟರ್​​ನಿಂದ ಹಿಮಾಲಯವನ್ನು ಕಂಡೆವು, ನಮ್ಮೆಲ್ಲರಿಗೂ ಸೇರಿರುವ ಆ ಹಿಮಾಲಯ ಪರ್ವತದ ಚಿತ್ರಣ ನಿಜಕ್ಕೂ ಅದ್ಭುತವಾಗಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.


ಕಲ್ಪನಾ ಚಾವ್ಲಾ ಅವರ ಎರಡನೇ ಮಿಷನ್ ಎಸ್​ಟಿಎಸ್​-107 2003ರಲ್ಲಿ ನಡೆಯಿತು. ಬಾಹ್ಯಾಕಾಶದಲ್ಲಿ ಮಹತ್ವವಾದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಈ ಒಂದು ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ ಇದು. ಫೆಬ್ರವರಿ 1 ರಂದು ದುರಂತ ಅಂತ್ಯದೊಂದಿಗೆ ಕೊನೆಯಾಯಿತು. ಕಲ್ಪನಾ ಚಾವ್ಲಾ ಸೇರಿ 7 ಜನರು ವಾಪಸ್ ಬರುತ್ತಿದ್ದ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆಯೇ ಒಡೆದು ಹೋಯಿತು. ಭೂಮಿಯ ಸ್ಪರ್ಶಕ್ಕೂ ಕೇವಲ 16 ನಿಮಿಷದ ಮುಂಚೆಯೇ ಈ ದುರಂತ ನಡೆದು ಹೋಯಿತು. ಬಾಹ್ಯಾಕಾಶ ನೌಕೆಯಲ್ಲಿದ್ದ ಕಲ್ಪನಾ ಚಾವ್ಲಾ ಸೇರಿ 7 ಜನರು ದುರಂತವಾಗಿ ಅಂತ್ಯಗೊಂಡರು.

ಕಲ್ಪನಾ ಚಾವ್ಲಾ ಅವರ ಹೆಸರು ಬಾಹ್ಯಾಕಾಶದ ಇತಿಹಾಸದಲ್ಲಿ ಅಮರವಾಗಿ ಉಳಿಯಿತು. ಮಾರ್ಚ್​ 17 ರಂದು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲ್ಪನಾ ಚಾವ್ಲಾ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿ ಭಾರತದ ಹೆಮ್ಮೆಯ ನಾರಿಯನ್ನು ಮತ್ತೊಮ್ಮೆ ಅವರ ಹುಟ್ಟಿದ ದಿನದಂದು ನೆನೆಪಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment