/newsfirstlive-kannada/media/post_attachments/wp-content/uploads/2025/04/Honey-Shridevi.jpg)
ಇದು ಹನಿ ಹನಿ ಟ್ರ್ಯಾಪ್ ಕಹಾನಿ.. ಮಾಯಾಜಾಲವೋ, ಜೇನಿನ ಜಾಲವೋ ಗೊತ್ತಿಲ್ಲ. ಅದರಲ್ಲಿ ಸಿಲುಕಿ ಬೀಳುವವರು ಅಮಾಯಕರೋ, ಮುಗ್ಧರೋ ಅಂತ ಅಂದಾಜಿಸಲು ಆಗುವುದಿಲ್ಲ. ಕ್ಷಣಿಕ ಸುಖಕ್ಕೆ ಸೋಲದೆ ಇದ್ದರೆ ಮೋಹಕೂ ಅಪಮಾನ ಅಂತ ಕವಿಗಳು ಹೇಳುತ್ತಾರೆ. ಆ ಕ್ಷಣಿಕ ಸುಖಕ್ಕೆ ಸೋಲುವ ಹಾಗೂ ಆ ಅವರ ಸೋಲೆ ಎದುರಿಗಿರುವ ಚೆಲುವೆಯರ ಖಜಾನೆ ತುಂಬಿಸುವ ಅಸ್ತ್ರವಾಗುವ ಕ್ಷಣ ಅದು. ಹೀಗೆ ಕ್ಷಣಿಕ ವ್ಯಾಮೋಹಕ್ಕೆ ಒಂದೇ ಒಂದ ಅಧರಗಳ ಬೆಸುಗೆಗೆ ಮರುಳಾದ ಬೆಂಗಳೂರಿನ ಉದ್ಯಮಿಯೊಬ್ಬರು ಲಕ್ಷ, ಲಕ್ಷ ರೂಪಾಯಿ ದೋಚಿದ ಬಗ್ಗೆ ಈಗಾಗಲೇ ಒಂದು ಸ್ಟೋರಿಯಲ್ಲಿ ಹೇಳಿದ್ದೇವೆ. ಈ ಎಲ್ಲಾ ಕಪಟ ನಾಟಕಗಳಿಗೂ ಶ್ರೀದೇವಿ ರೂಡಗಿ ಎಂಬ ಶಿಕ್ಷಕಿ ಸೂತ್ರಧಾರಿ ಎನ್ನಲಾಗಿದೆ.
ಆಕೆಯ ಸೂತ್ರಕ್ಕೆ ಸಿಲುಕಿದ ಗಾಳಿಪಟದಂತೆ ಹಾರಾಡಿದ್ದು ಉದ್ಯಮಿ. ಕೊನೆಗೆ ಸೂತ್ರ ಹರಿದಾಗ ತನ್ನನ್ನು ತಾನು ಉಳಿಸಿಕೊಳ್ಳಲು ಸಿಸಿಬಿ ಪೊಲೀಸರ ಮೊರೆ ಹೋಗಬೇಕಾಯ್ತು. ಸದ್ಯ ಸಿಸಿಬಿ ಪೊಲೀಸರು ಶಿಕ್ಷಕಿ ಶ್ರೀದೇವಿಯನ್ನು ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯನ್ನು ಅರಂಭಿಸಿದ್ದಾರೆ. ವಿಚಾರಣೆಯಲ್ಲಿ ಈ ಗ್ಯಾಂಗ್ ನಡೆಸುತ್ತಿದ್ದ ಒಂದೊಂದು ಮಧುಬಲೆಯ ಕಹಾನಿಗಳು ಹೊರಬಿದ್ದಿವೆ. ಒಂದೊಂದಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಿತ್ತು ಈ ಗ್ಯಾಂಗ್.
ಇದನ್ನೂ ಓದಿ: ಪವಿತ್ರ ರಂಜಾನ್ ವೇಳೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ.. ಕೊಪ್ಪಳ, ಹುಬ್ಬಳ್ಳಿಯಲ್ಲಿ ಕಿರಿಕ್..!
ಇದನ್ನೂ ಓದಿ: ಇದು ಒಂದು ‘ಮುತ್ತಿ‘ನ ಕಥೆ! ಚುಂಬನದ ಬಲೆಗೆ ಬಿದ್ದವನು ಕಳೆದುಕೊಂಡಿದ್ದು ಲಕ್ಷ ಲಕ್ಷ ರೂಪಾಯಿ!
ಇವರು ಬೀಸಿದ ಬಲೆಗೆ ಬೀಳುವ ಗಂಡನ್ನು ಒಂದು ಮುತ್ತಿನಿಂದ ಹಿಡಿದು ವಿಡಿಯೋ ಡಿಲೀಟ್ ಮಾಡುವವರೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು. ಒಂದು ಬಾರಿ ತುಟಿಗೆ ತುಟಿ ಬೆಸೆದು ಚುಂಬಿಸಿದರೆ ಅದಕ್ಕೆ 50 ಸಾವಿರ ರೂಪಾಯಿ. ಬಲೆಗೆ ಬೀಳಿಸಿಕೊಂಡ ಮಿಕದೊಂದಿಗೆ ಎಲ್ಲ ಬಗೆಯ ಅಶ್ಲೀಲ ಚಾಟ್ಗಳನ್ನು ಈ ಶ್ರೀದೇವಿ ಮಾಡಿರುತ್ತಾಳೆ ಮತ್ತು ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಈ ಎಲ್ಲಾ ವಿಡಿಯೋಗಳನ್ನು, ಚಾಟ್ಗಳನ್ನು ತೋರಿಸಿ, ಇದನ್ನು ಡಿಲೀಟ್ ಮಾಡಬೇಕು. ನಿಮ್ಮ ಮನೆಯವರಿಗೆ ಹೆಂಡತಿಗೆ ತೋರಿಸಬಾರದು ಅಂತ ಇದ್ರೆ ಕೂಡಲೇ 20 ಲಕ್ಷ ರೂಪಾಯಿ ಕೊಡು ಎಂಬ ಬ್ಲ್ಯಾಕ್ಮೇಲ್ಗಳು ಟೀಚರಮ್ಮನ ಬಲೆಗೆ ಬಿದ್ದವರಿಗೆ ಹೋಗುತ್ತಿದ್ದವಂತೆ.
ಇದು ಸದ್ಯ ಟೀಚರಮ್ಮನ ಕಥೆಯೊಂದೇ. ಇನ್ನು ಯಾವೆಲ್ಲಾ ಜೇನುಗಳು ಯಾವೆಲ್ಲಾ ದುಡ್ಡಿನ ಖಜಾನೆಗೆ ಮುತ್ತಿಕ್ಕುತ್ತಿವೆಯೋ? ತೆರೆಯಮರೆಯಲ್ಲಿ ಹಣ ಕಳೆದುಕೊಂಡು ಪಶ್ಚಾತಾಪಪಟ್ಟ ಗಂಡು ಜನ್ಮಗಳೆಷ್ಟೋ? ಎಂಬ ಸಂಶಯ ಮೂಡದೇ ಇರುವುದಿಲ್ಲ. ಯಾವುದಕ್ಕೂ ಯಾರನ್ನಾದರೂ ಆತ್ಮೀಯವಾಗಿ ಜೀವನದೊಳಗೆ ಬರೋದಕ್ಕೆ ಬಿಡುವ ಮೊದಲು ನೀವು ನಿಮ್ಮ ಎಚ್ಚರಿಕೆಯಲ್ಲಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ