/newsfirstlive-kannada/media/post_attachments/wp-content/uploads/2024/06/ROHIT_SHARMA_USA.jpg)
ಒಂದು ಮಾತಿನಿಂದ ಅದೆಷ್ಟೋ ಕ್ರಿಕೆಟಿಗರ ಲೈಫ್ ಬದಲಾದ ಉದಾಹರಣೆಗಳಿವೆ. ಅಂತೆಯೇ ಡಬಲ್ ಸೆಂಚುರಿಮ್ಯಾನ್ ರೋಹಿತ್ ಶರ್ಮಾ ಕರಿಯರ್ ಚೇಂಜ್ ಆಗಿದ್ದು ಒಂದೇ ಜಾಹೀರಾತಿನಿಂದ. ಆ ಒಂದು ಆ್ಯಡ್ನಲ್ಲಿ ಸ್ಥಾನಕ್ಕಾಗಿ ಪರದಾಡ್ತಿದ್ದ ರೋಹಿತ್ಗೆ ಹೊಸ ದಾರಿ ತೋರಿಸ್ತು.
ಡಬಲ್ ಸೆಂಚುರಿ ಸರದಾರನ ಅನ್ಟೋಲ್ಡ್ ಸ್ಟೋರಿ
ರೋಹಿತ್ ಶರ್ಮಾ.. ಭಾರತೀಯ ಕ್ರಿಕೆಟ್ನ ರತ್ನ. ಈ ರೋಹಿತ್ ಗಳಿಸಿದ ಖ್ಯಾತಿ, ಹೊಡೆದ ರನ್, ಪುಡಿಗಟ್ಟಿದ ದಾಖಲೆ, ದಿಗ್ಗಜ ಆಟಗಾರನಾಗಿ ಬೆಳೆದ ಬಗೆ ನಿಜಕ್ಕೂ UNBELIEVABLE. ಇಂತಹ ಸೂಪರ್ ಸ್ಟಾರ್ ಕರಿಯರ್ನಲ್ಲಿ ಎರಡು ಭಾಗವಿದೆ. ಒಂದು ಹಂತದಲ್ಲಿ ಬರೀ ಸ್ಟ್ರಗಲ್ಸ್ ತುಂಬಿಕೊಂಡಿದ್ರೆ ಇನ್ನೊಂದು ಹಂತ ಯಶಸ್ಸಿನ ಯಶೋಗಾಥೆಯಿಂದ ತುಂಬಿಕೊಂಡಿದೆ.
ಇದನ್ನೂ ಓದಿ:ಶವ ಬೀಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಟಾಟ.. ಎಣ್ಣೆ ಪಾರ್ಟಿ..!
2007 TO 2011 ಅಭದ್ರತೆ.. ಸ್ಥಾನಕ್ಕಾಗಿ ಪರದಾಟ
ರೋಹಿತ್ ಇಂದು ವಿಶ್ವಕ್ರಿಕೆಟ್ನ ಸ್ಟಾರ್ ಕ್ರಿಕೆಟರ್ ಅನ್ನಿಸಿಕೊಂಡಿರಬಹುದು. ಅವರ ಆರಂಭಿಕ ಜರ್ನಿ ಬರೀ ಕಲ್ಲು ಮುಳ್ಳಿನಿಂದಲೇ ಕೂಡಿತ್ತು. 2007 ರಲ್ಲಿ ತಂಡಕ್ಕೆ ಡೆಬ್ಯು ಮಾಡಿದ್ರೂ ಹೆಚ್ಚು ಅವಕಾಶ ಸಿಗ್ಲಿಲ್ಲ. ಖಾಯಂ ಸ್ಲಾಟ್ಗಾಗಿ ಪರದಾಡಿದ್ರು. ಆಗೊಂದು ಈಗೊಂದು ಅವಕಾಶ. ಸಿಕ್ಕ ಚಾನ್ಸ್ ಅಲ್ಲಿ ನ್ಯಾಯ ಒದಗಿಸಿದ್ರೂ, 2011ರ ಏಕದಿನ ವಿಶ್ವಕಪ್ನಲ್ಲಿ ಅವಕಾಶ ವಂಚಿತರಾದ್ರು. ಇದರಿಂದ ಹಿಟ್ಮ್ಯಾನ್ ಕರಿಯರ್ ಡೋಲಾಮಾನವಾಗಿತ್ತು.
2013ರ ಬಳಿಕ ರೋಹಿತ್ ಮುಟ್ಟಿದ್ದೆಲ್ಲಾ ಚಿನ್ನ
2013ನೇ ಇಸವಿ, ರೋಹಿತ್ಗೆ ಹೊಸ ಪುನರ್ಜನ್ಮ ನೀಡ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಆರಂಭಿಕನಾಗಿ ಆರ್ಭಟಿಸಿದ್ರು. ಕ್ಯಾಪ್ಟನ್ ಧೋನಿ ಮನಗೆದ್ರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಸಾವಿರಗಟ್ಟಲೇ ರನ್, ಲೆಕ್ಕವಿಲ್ಲದಷ್ಟು ದಾಖಲೆ, ವಿಶ್ವ ದಾಖಲೆಯ 3 ದ್ವಿಶತಕ, ಐದು ಬಾರಿ ಮುಂಬೈ ಇಂಡಿಯನ್ಸ್ಗೆ ಐಪಿಎಲ್ ಟ್ರೋಫಿ, ಭಾರತ ತಂಡವನ್ನ ಮುನ್ನಡೆಸುವ ಸೌಭಾಗ್ಯ.! ಕಳೆದ 11 ವರ್ಷದಲ್ಲಿ ರೋಹಿತ್ ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ.
ಇದನ್ನೂ ಓದಿ:ಸೂಪರ್ 8ರಲ್ಲಿ ಮೂವರು ಫಿಕ್ಸ್.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?
ರೋಹಿತ್ ಕರಿಯರ್ ಬದಲಿಸ್ತು ಆ ಒಂದು ಜಾಹೀರಾತು
2012 ರ ಸ್ಥಾನಕ್ಕಾಗಿ ಪರದಾಡಿದ್ದ ರೋಹಿತ್ ಲೆಕ್ಕವಿಲ್ಲದಷ್ಟು ಟೀಕೆ, ಅವಮಾನ ಎದುರಿಸಿದ್ರು. ಇಂತಹ ಹಿಟ್ಮ್ಯಾನ್ 2013ರ ಬಳಿಕ ಫಿನಿಕ್ಸ್ನಂತೆ ಎದ್ದು ನಿಂತ್ರು. ಕಳೆದು ಹೋಗ್ತಿದ್ದ ಹಿಟ್ಮ್ಯಾನ್ ವಿಶ್ವಮೆಚ್ಚಿದ ವಿಕ್ರಮನಾದ್ರು. ಈ ಪರಿರ್ತನೆಗೆ ಕಾರಣ ಆ ಒಂದು ಜಾಹೀರಾತು.
2011 ರ ವಿಶ್ವಕಪ್‌ಗೆ ರೋಹಿತ್ ಅವರನ್ನು ಆಯ್ಕೆ ಮಾಡದಿದ್ದಾಗ, ನಾನು ಅವನಿಗೆ ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡೋಣ ಎಂದು ಹೇಳುತ್ತಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಟಿವಿಯಲ್ಲಿ ಒಂದು ಜಾಹೀರಾತು ದೃಶ್ಯ ಪ್ರಸಾರವಾಯಿತು. ರೋಹಿತ್ ಮತ್ತು ಯುವರಾಜ್ ನಿಂತುಕೊಂಡಿದ್ರು. ರೋಹಿತ್‌ನ ಹೊಟ್ಟೆಯ ಸುತ್ತಲು ಬಾಣದ ಗುರುತು ಹಾಕಲಾಗಿತ್ತು. ನಾನು ಅದನ್ನು ಎಂದಿಗೂ ಮರೆಯುವುದಿಲ್ಲ. ಇದನ್ನ ನೋಡಿದ ರೋಹಿತ್ ಶರ್ಮಾ ಆ ಗ್ರಹಿಕೆ ಬದಲಿಸಬೇಕೆಂದು ಎಂದರು-ಅಭಿಷೇಕ್ ನಾಯರ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!
ಮ್ಯಾಗಿಮ್ಯಾನ್ ಅಂದೋರಿಗೆ ತಕ್ಕ ಉತ್ತರ
ರೋಹಿತ್ರನ್ನ ಆರಂಭಿಕ ದಿನಗಳಲ್ಲಿ ಎರಡು ನಿಮಿಷಗಳ ಮ್ಯಾಗಿಮ್ಯಾನ್ ಅಂತೆಲ್ಲಾ ಟೀಕಿಸ್ತಿದ್ರು. ಇದನ್ನ ಗಂಭೀರವಾಗಿ ತೆಗೆದುಕೊಂಡ ಹಿಟ್ಮ್ಯಾನ್, ಅಭಿಷೇಕ್ ನಾಯರ್ ಬಳಿ ಅವರ ಬಾಯಿಯನ್ನ ಮುಚ್ಚಿಸುತ್ತೇನೆ ಎಂದು ಮಾತುಕೊಟ್ಟಿದ್ರಂತೆ.
ಜನರು ಅವನ (ರೋಹಿತ್) ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಿದ್ದರು. ಎರಡು ನಿಮಿಷಗಳ ಮ್ಯಾಗಿ-ಮ್ಯಾನ್ ಅಂತೆಲ್ಲಾ ಕರೆಯುತ್ತಿದ್ರು. ಅದು ಎಲ್ಲವನ್ನೂ ಬದಲಾಯಿಸಿತು. ರೋಹಿತ್, ನನ್ನ ಬಳಿ ಬಂದು 'ನೀವು ಏನು ಹೇಳುತ್ತೀರೋ ಅದನ್ನು ನಾನು ಮಾಡುತ್ತೇನೆ. ಐಪಿಎಲ್ ಮುಗಿದ ನಂತರ ಜನರು ಅವನು ಆ ರೋಹಿತ್ ಶರ್ಮಾ ಅಲ್ಲ ಎಂದು ಹೇಳಬೇಕು ಎಂದಿದ್ರು-ಅಭಿಷೇಕ್ ನಾಯರ್, ಮಾಜಿ ಕ್ರಿಕೆಟಿಗ
ಆ ಬಳಿಕ ಸಖತ್ ಹಾರ್ಡ್ವರ್ಕ್ ಮಾಡಿದ ರೋಹಿತ್ ಶರ್ಮಾ ಫಿಟ್ನೆಸ್ಗೆ ಹೆಚ್ಚಿನ ಮಹತ್ವ ನೀಡಿದ್ರು. ಬ್ಯಾಟಿಂಗ್ ಟೆಕ್ನಿಕ್ ಮೇಲೆ ವರ್ಕೌಟ್ ಮಾಡಿದ್ರು. ಅಭ್ಯಾಸದ ಕಣದಲ್ಲಿ ಬೆವರುಹರಿಸಿದ ಪರಿಣಾಮ ಯಶಸ್ಸಿನ ರುಚಿ ನೋಡಿದ್ರು. ಆ ಬಳಿಕ ಹಿಟ್ಮ್ಯಾನ್ ರೋಹಿತ್ ಹಿಂತಿರುಗಿ ನೋಡಿದ್ದೇ ಇಲ್ಲ.
ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!
ಒಟ್ಟಿನಲ್ಲಿ ಒಂದು ಟೈಮ್ನಲ್ಲಿ ಹಿಟ್ಮ್ಯಾನ್ಗೆ ತಂಡದಲ್ಲಿ ಖಾಯಂ ಸ್ಥಾನ ಅನ್ನೋದೆ ಇರ್ಲಿಲ್ಲ. ಇದೀಗ ಅದೇ ರೋಹಿತ್ ವಿಶ್ವದ ಸ್ಟಾರ್ ಓಪನರ್. ಭಾರತ ತಂಡ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ತಾಳ್ಮೆ, ಪರಿಶ್ರಮವೊಂದಿದ್ರೆ ಏನು ಬೇಕಾದ್ರು ಸಾಧಿಸಬಹುದು ಅನ್ನೋದಕ್ಕೆ ಹಿಟ್ಮ್ಯಾನ್ ಉತ್ತಮ ನಿದರ್ಶನ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್