ಮಾತಾಹರಿಯಿಂದ ಮಾಧುರಿ ಗುಪ್ತಾವರೆಗೂ.. ಜಗತ್ತಿನಲ್ಲಿ ಹನಿಟ್ರ್ಯಾಪ್​ಗೆ ಫೇಮಸ್​ ಆದ ಮೋಹಿನಿಯರು ಇವರೇ!

author-image
Gopal Kulkarni
Updated On
ಮಾತಾಹರಿಯಿಂದ ಮಾಧುರಿ ಗುಪ್ತಾವರೆಗೂ.. ಜಗತ್ತಿನಲ್ಲಿ ಹನಿಟ್ರ್ಯಾಪ್​ಗೆ ಫೇಮಸ್​ ಆದ ಮೋಹಿನಿಯರು ಇವರೇ!
Advertisment
  • ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಹನಿಟ್ರ್ಯಾಪ್ ಕೇಸ್​ನಲ್ಲಿ ಸಿಕ್ಕ ಸುಂದರಿ ಯಾರು
  • ಭಾರತದಲ್ಲಿಯೂ ಪಾಕ್​ನ ಹ್ಯಾಂಡ್ಲರ್ ಪರವಾಗಿ ಕೆಲಸ ಮಾಡಿದ್ದಳು ಚೆಲುವೆ
  • ರಷ್ಯಾದ ನೀಲಿ ಕಂಗಳ ಲಲನೆ ಬ್ರಿಟನ್ ಎಂಪಿಯನ್ನೇ ಮದುವೆಯಾಗಿ ಮಾಡಿದ್ದೇನು?

ಶ್​.. ಇದು ಹನಿಟ್ರ್ಯಾಪ್​, ಆಳ ಅಗಲಗಳನ್ನು ಅಳೆಯುತ್ತಾ ಹೋದರೆ ಅಳತೆಗೆ ಸಿಗದ ಒಂದು ಜಾಲ. ಇಲ್ಲಿ ಸುಂದರ ಯುವತಿಯರೇ ಗುಪ್ತಚರ ಇಲಾಖೆಗಳ ದೊಡ್ಡ ಅಸ್ತ್ರ. ಅವರ ಮೈಮಾಟವೇ ಶತ್ರುದೇಶದ ಅಧಿಕಾರಿಗಳ ಬಲಹೀನತೆಯಾಗಿ ಅವರ ತೋಳಿನ ತೆಕ್ಕೆಯಲ್ಲಿ ಸೋತು, ಮೈಮರೆತು ದೇಶದ ಹಲವು ಗೌಪ್ಯ ವಿಷಯಗಳನ್ನೇ ಬಾಯಿಬಿಡಿಸುವಷ್ಟು ಮಧುರ ಅಮಲನ್ನು ಏರಿಸುವ ಒಂದು ಕಾರ್ಯವಿದು.

ಈ ರೀತಿಯ ಗುಪ್ತಚರ ಇಲಾಖೆಯ ಮಾಯಾಂಗಿನಿಯರು ಗೂಢಚಾರಿಕೆ ಮಾಡಲು ಬಂದು ಸಿಲುಕಿ ಶಿಕ್ಷೆ ಅನುಭವಿಸಿದ ಅನೇಕ ಉದಾಹರಣೆಗಳು ಇವೆ. ಜರ್ಮನಿಯ ಮಾತಾಹರಿಯಿಂದ ಹಿಡಿದು ಭಾರತದ ಮಾಧುರಿ ಗುಪ್ತಾವ ಸೇರಿ ಈ ಹನಿಟ್ರ್ಯಾಪ್ ಎಂಬ ಮೋಹಜಾಲದ ಜಗತ್ತಿನಲ್ಲಿ ಹೆಸರು ಕೇಳಿ ಬಂದಿವೆ. ಮೊಟ್ಟ ಮೊದಲ ಬಾರಿಗೆ ಒಬ್ಬ ಗೂಢಚಾರಿ ಲಲನೆ, ಜಗತ್ತಿಗೆ ಪರಿಚಯವಾಗಿ ಹೆಸರು  ಅಂದ್ರೆ ಅದು ಮಾತಾಹರಿ

publive-image

ಮೊದಲನೇ ಮಹಾಯುದ್ಧದಲ್ಲಿ ಈ ಡಚ್​ ಡ್ಯಾನ್ಸರ್​ಳನ್ನು ಜರ್ಮನಿ ತನ್ನ ಗೂಢಚಾರಿಣಿಯಾಗಿ ಬಳಿಸಿಕೊಂಡಿತ್ತು. ಫ್ರಾನ್ಸ್​​ನ ಸೇನೆಯ ಮಾಹಿತಿಗಳನ್ನು ತನಗೆ ನೀಡುವಂತೆ ಆಕೆಯನ್ನು ಗೂಢಚಾರಿಕೆಗೆ ಮುಂದೆ ಬಟ್ಟಿತ್ತು ಎಂಬ ಆರೋಪ ಆಕೆಯ ಮೇಲೆ ಬಂದಿತ್ತು. ಒಂದು ಹಂತದಲ್ಲಿ ಫ್ರಾನ್ಸ್​ನ ಅನೇಕ ಸೇನಾಧಿಕಾರಿಗಳು ತಾವು ಬಲಿಪಶುವಾಗುವ ಸಂದರ್ಭ ಬಂದಿದ್ದರಿಂದ ಆಕೆ ಸ್ಪೈ ಅಲ್ಲ ಮುಗ್ದೆ ಎಂಬ ಹೇಳಿಕೆಯನ್ನು ಕೂಡ ನೀಡಿದ್ದರು.

ಇದನ್ನೂ ಓದಿ:ಹನಿಟ್ರ್ಯಾಪ್‌ ರಹಸ್ಯ ಸ್ಫೋಟ.. ಕೊನೆಗೂ ತನಿಖೆಗೆ ಮುಂದಾದ ರಾಜ್ಯ ಸರ್ಕಾರ; ಗೃಹ ಸಚಿವರು ಏನಂದ್ರು?

ಇನ್ನು ಭಾರತದಲ್ಲಿ ಮೊದಲ ಬಾರಿಗೆ ಹನಿಟ್ರ್ಯಾಪ್ ಸದ್ದು ಮಾಡಿದ್ದು ಜವಾಹರಲಾಲ್ ನೆಹರು ಅವರು ಪ್ರಧಾನ ಮಂತ್ರಿಯಾದ ಕಾಲದಲ್ಲಿ. ಭಾರತದ ರಾಯಭಾರಿಯನ್ನು ಮಾಸ್ಕೋದಲ್ಲಿ ಯುವತಿಯೊಬ್ಬಳು ತನ್ನ ಮೋಹದ ಜಾಲದಲ್ಲಿ ಸಿಲುಕಿಸಿರುವ ಫೋಟೋಗಳನ್ನು ರಷ್ಯಾದ ಕೆಜಿಬಿ ನೆಹರು ಅವರಿಗೆ ಕಳುಹಿಸಿತ್ತು. ಈ ಫೋಟೋಗಳನ್ನು ನೋಡಿ ಸುಮ್ಮನೆ ನಕ್ಕ ನೆಹರು ಅವರು ಆ ಅಧಿಕಾರಿಗೆ ಮುಂದಿನ ಬಾರಿ ಜಾಗೃತೆಯಿಂದ ಇರುವಂತೆ ಸೂಚನೆ ನೀಡಿದ್ದರು.

publive-image

ಇನ್ನು 2008ರಲ್ಲಿ ಮೋಹನ್ ಶರ್ಮಾ ಎಂಬ ಭಾರತದ ಗುಪ್ತಚರ ಇಲಾಖೆಯಾದ RAW ಅಧಿಕಾರಿಯನ್ನು ಚೀನಾದಿಂದ ದೆಹಲಿಗೆ ಕರೆಸಿಕೊಂಡು ಚೀನಿ ಮಹಿಳೆಯ ಸೌಂದರ್ಯಕ್ಕೆ ಮರುಳಾಗಿ ಹನಿಟ್ರ್ಯಾಪ್​ನಲ್ಲಿ ಬಿದ್ದಿದ್ದೀಯಾ ಎಂದು ಹೇಳಲಾಗಿತ್ತು. ಶರ್ಮಾ, ಚೀನಿ ಭಾಷೆ ಕಲಿಸುವ ಒಂದು ಯುವತಿಯೊಂದಿಗೆ ಸಂಬಂಧ ಹೊಂದಿದ್ದರು. ಅವಳು ಚೀನಾ ಸರ್ಕಾರಕ್ಕೆ ಮಾಹಿತಿ ತಲುಪಿಸುವ ಗೂಢಚಾರಿಣಿ ಎಂದು ರಾ ಆರೋಪಿಸಿತ್ತು. ಮತ್ತೊಬ್ಬ ರಾ ಆಫೀಸರ್ ರವಿ ನಾಯರ್ ಮೇಲೆ ಕೂಡ ಇದೇ ಆರೋಪ ಬಂದಿತ್ತು. ಕೆ.ವಿ ಉನ್ನಿಕೃಷ್ಣನ್ ಎಂಬ ರಾ ಅಧಿಕಾರಿಯೊಬ್ಬರು ಕೂಡ ಯುವತಿಯ ಪ್ರೇಮದ ಬಲೆಯಲ್ಲಿ ಬಿದ್ದ ಆರೋಪ ಎದುರಿಸಿ ಬಂದಿದ್ದರು.

ಇದನ್ನೂ ಓದಿ:ವಿಶ್ವದಲ್ಲಿ ಮೊದಲ ಹನಿಟ್ರ್ಯಾಪ್ ನಡೆದಿದ್ದು ಯಾವಾಗ? ‘ಮೊಜ್ನೋ ಗರ್ಲ್ಸ್’​ ಮಾಯಾಜಾಲದ ಬಗ್ಗೆ ನಿಮಗೆ ಗೊತ್ತಾ?

publive-image

ಇನ್ನು ಭಾರತದಲ್ಲಿ ಅತಿಹೆಚ್ಚು ಸುದ್ದಿ ಮಾಡಿದ ಹನಿಟ್ರ್ಯಾಪ್ ಪ್ರಕರಣ ಅಂದ್ರೆ ಅದು ಮಾಧುರಿ ಗುಪ್ತಾಳದ್ದು. ಭಾರತದ ಮಾಜಿ ರಾಯಭಾರಿ ಮಾಧುರಿ ಗುಪ್ತಾ ಪಾಕಿಸ್ತಾನಿ ಹ್ಯಾಂಡ್ಲರ್​ನ ಬಲೆಗೆ ಬಿದ್ದು ಪಾಕ್ ಪರವಾಗಿ ಗೂಢಚಾರಿಕೆ ಮಾಡಿದ ಆರೋಪವನ್ನು ಎದುರಿಸಿದ್ದಾರೆ. ಪಾಕಿಸ್ತಾನದ ಹ್ಯಾಂಡ್ಲರ್​ಗೆ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಆಕೆ ಶೇರ್ ಮಾಡಿದ್ದಳು ಎಂಬ ಆರೋಪವು ಕೇಳಿ ಬಂದಿತ್ತು. ಮಾಧುರಿ ಗುಪ್ತಾಗೆ 2018ರಲ್ಲಿ ಮೂರು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಕೊನೆಗೆ ಹೆಚ್ಚುವರಿ ಸೆಷನ್ ನ್ಯಾಯಾಲಯ ಆಕೆಗೆ ಜಾಮೀನು ನೀಡಿತ್ತು.

ಇದನ್ನೂ ಓದಿ:ಹನಿಟ್ರ್ಯಾಪ್ ಮಧ್ಯೆ ಡಿ.ಕೆ ಶಿವಕುಮಾರ್ ಮೇಲೆ ಶಾಸಕ ಮುನಿರತ್ನ ಹೊಸ ಬಾಂಬ್‌; ಹೇಳಿದ್ದೇನು?

ಇನ್ನು 1960ರಲ್ಲಿ ಸೋವಿಯತ್​​ನ ಯೆವ್ಗೆನಿ ಇವನೊವ್, ತನ್ನ ಹೆಸರನ್ನು ಕ್ರಿಸ್ಟೇನ್ ಕ್ಲೀಯೆರ್ ಎಂದು ಬದಲಾಯಿಸಿಕೊಂಡು ಬ್ರಿಟಿಷ್ ಎಂಪಿಯನ್ನೇ ಮದುವೆಯಾಗಿ ಅಲ್ಲಿನ ಎಲ್ಲ ಗುಟ್ಟನ್ನು ತನ್ನ ದೇಶಕ್ಕೆ ಮಟ್ಟಿಸುವಲ್ಲಿ ಕಾರ್ಯನಿರತಳಾಗಿದ್ದಳು. ಅವಳು ಗೂಢಚಾರಿಣಿ ಎಂಬುದು ತಿಳಿದ ಕೂಡಲೇ ಮಾಸ್ಕೋ ಅವಳನ್ನು ವಾಪಸ್ ಕರೆಸಿಕಂಡು ರಕ್ಷಿಸಿತ್ತು. ಹನಿಟ್ರ್ಯಾಪ್​ನಲ್ಲಿ ಕೇಳಿ ಬಂದ ಮತ್ತೊಂದು ದೊಡ್ಡ ಹೆಸರು ಅಂದ್ರೆ ಅದು ರಷ್ಯಾದ ಯೆವ್ಗೆನಿ ಇವನೋವ್​

publive-image

ಇನ್ನು ಯುಎಸ್​ನ ಇರಾನಿಯನ್ ಮೂಲದ ಪತ್ರಕರ್ತೆ ರೊಕ್ಷಾನ್ ಸಬೇರಿ ಯುಎಸ್​ ಪರವಾಗಿ ಇರಾನ್​ನಲ್ಲಿ ಗೂಢಚಾರಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ರಷ್ಯಾದ ನೀಲಿ ಕಂಗಳ ಚೆಲುವೆ ಕಾತ್ಯಾ ಹೆಸರು ಕೂಡ ಗೂಢಚಾರಿಕೆಯ ಲಲನೆಯರ ಲಿಲಸ್ಟ್​ನಲ್ಲಿದೆ. ಹೀಗೆ ಮಾತಾಹರಿಯಿಂದ ಹಿಡಿದು ಮಾಧುರಿ ಗುಪ್ತಾವರೆಗೆ ಅನೇಕ ಲಲನೆಯರು ಗೂಢಚಾರಿಕೆ ಮಾಡಿದ ಆರೋಪದಲ್ಲಿ ಜಗತ್ತಿನ ಕಣ್ಮುಂದೆ ಬಂದಿದ್ದಾರೆ. ಇನ್ನು ಜಗತ್ತಿಗೆ ಕಾಣದ ಅದೆಷ್ಟೂ ಗೂಢಚಾರಿಣಿಯರು ಯಾವ ದೇಶದ, ಯಾವ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ತಮ್ಮ ಬೆಚ್ಚನೆ ಬಾಹುಗಳಲ್ಲಿ ಬಂಧಿಸಿ ತಮ್ಮ ದೇಶಕ್ಕೆ ಬೇಕಾಗಿರುವ ಯಾವೆಲ್ಲಾ, ಏನೆಲ್ಲಾ ಮಾಹಿತಿ ಕದ್ದಿದ್ದಾರೋ ಆ ಗುಪ್ತಚರ ಜಗತ್ತಿಗಷ್ಟೇ ಗೊತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment