/newsfirstlive-kannada/media/post_attachments/wp-content/uploads/2025/03/April-01-Price-hike.jpg)
ಯುಗಾದಿ ಹಬ್ಬ ಮುಗಿಸಿರುವ ರಾಜ್ಯದ ಜನರಿಗೆ ಇಂದಿನಿಂದ ಬೆಲೆ ಏರಿಕೆಯ ಬರೆ ಕಾದಿದೆ. ಗ್ಯಾಪ್ ಸಿಕ್ಕಿದಾಗ್ಲೆಲ್ಲಾ ಮೆಟ್ರೋ ದರ, ಬಸ್ ದರ ಅಷ್ಟೇ ಯಾಕೆ ಎಣ್ಣೆ ರೇಟ್​​ ಕೂಡ ಹೈಕ್ ಮಾಡಿ ಕಿಕ್​ ಇಳಿಸಿತ್ತು ರಾಜ್ಯ ಸರ್ಕಾರ. ಇಂದಿನಿಂದ ದುಬಾರಿ ದುನಿಯಾದ ಅಸಲಿ ದರ್ಶನ ಆಗಲಿದೆ. ಮಿಡಲ್ ಕ್ಲಾಸ್ ಮಂದಿಯ ಜೇಬಿಗೆ ಇಂದಿನಿಂದ ಕತ್ತರಿ ಬೀಳೋದು ಗ್ಯಾರಂಟಿ.
ಕೇಳ್ರಪ್ಪೋ ಕೇಳಿ.. ಇಂದಿನಿಂದ ದುಬಾರಿ, ದುಬಾರಿ, ದುಬಾರಿ!
ಯುಗಾದಿ ಹಬ್ಬ ಮುಗಿಸಿ ಹೊಸದಡಕಿನ ಗುಂಗಲ್ಲಿರೋ ಜನಕ್ಕೆ ಇಂದಿನಿಂದ ಬಾಡೂಟದ ಜೊತೆಗೆ ಬೆಲೆ ಏರಿಕೆಯ ಗಿಫ್ಟ್ ಕೂಡ ಸಿಗ್ತಿದೆ. ಈಗಾಗಲೇ ಬಸ್ಸು.. ಮೆಟ್ರೋ ಎಲ್ಲದರ ರೇಟ್ ಹೈಕ್ ಮಾಡಿದ್ದಾಗಿದೆ. ಇಂದಿನಿಂದ ಹಾಲು, ಕರೆಂಟೂ ದುಬಾರಿಯಾಗುತ್ತಿದೆ.
/newsfirstlive-kannada/media/post_attachments/wp-content/uploads/2025/03/nandini-milk-and-current-rate-hike.jpg)
ಏಪ್ರಿಲ್ 01ರಿಂದ ಈ ಐದು ‘ದುಬಾರಿ’ ..!
01. ಹಾಲಿನ ದರದಲ್ಲಿ ನಾಲ್ಕು ರೂಪಾಯಿ ಏರಿಕೆ
02. ಇಂದಿನಿಂದ ಮೊಸರಿನ ದರದಲ್ಲೂ ಏರಿಕೆ
03. ವಿದ್ಯುತ್ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ
2026-27ರಲ್ಲಿ 35 ಪೈಸೆ, 2027-28ರಲ್ಲಿ 34 ಪೈಸೆ
ಮುಂದಿನ 3 ವರ್ಷದಲ್ಲಿ 8519 ಕೋಟಿ ವಸೂಲಿ
04. ಕಸದ ಸೆಸ್ ಪ್ರತಿ ಕೆ.ಜಿಗೆ 12 ರೂ. ವಿಧಿಸಿದ ಪಾಲಿಕೆ
05. ವಾಹನ ಮೇಲಿನ ಟ್ಯಾಕ್ಸ್​
10 ಲಕ್ಷದೊಳಗಿನ ವಾಹನಗಳಿಗೆ ಲೈಫ್​ ಟೈಮ್ ಟ್ಯಾಕ್ಸ್​
25 ಲಕ್ಷದ ಮೇಲಿನ ಎಲೆಕ್ಟ್ರಿಕ್ ಕಾರಿಗೆ 10% ರಷ್ಟು ಟ್ಯಾಕ್ಸ್
ಇದನ್ನೂ ಓದಿ: 15 ಕಿ.ಮೀ ಚೇಸಿಂಗ್.. ಜೀವ ಪಣಕ್ಕಿಟ್ಟು ಟ್ರಕ್ ಚಾಲಕನ ಪ್ರಾಣ ಉಳಿಸಿದ ಲೇಡಿ ಸಿಂಗಂ; ವಿಡಿಯೋ ಇಲ್ಲಿದೆ!
ಇದರ ಜೊತೆಗೆ ಇವತ್ತಿನಿಂದ ಎಲ್ಲವೂ ಬದಲಾಗಲಿದೆ. ಯಾಕಂದ್ರೆ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಯುಗಾದಿ ಕಳೆಯುತ್ತಿದ್ದಂತೆ ಜನರಿಗೆ ಕೆಲವೊಂದು ಲಾಭ-ನಷ್ಟದ ನಿಯಮಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರದ ಬಜೆಟ್‌ನ ಹಲವು ಘೋಷಣೆಗಳು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬರುತ್ತಿದೆ.
/newsfirstlive-kannada/media/post_attachments/wp-content/uploads/2024/08/PANJAB-TOLL-PLAZA.jpg)
ವಾಹನ ಸವಾರರಿಗೆ ಟೋಲ್ ಬರೆ!
ಇಂದಿನಿಂದ ವಾಹನ ಸವಾರರ ಜೇಬಿಗೆ ಬೀಳಲಿದೆ ಕತ್ತರಿ
ಟೋಲ್ ದರ ಇಂದಿನಿಂದ ಶೇಕಡ 5 ರಷ್ಟು ಏರಿಕೆ ನಿಶ್ಚಿತ
ಹೈವೇ ಟೋಲ್ ಪ್ಲಾಜಾದಲ್ಲಿ ಕಲೆಕ್ಟ್ ಮಾಡುವ ಸುಂಕ ಹೆಚ್ಚಳ
ಒಂದೇ ವರ್ಷದಲ್ಲಿ ಶೇ.35 ರಷ್ಟು ಟೋಲ್ ಸುಂಕ ಹೆಚ್ಚಳ
ದೇಶದಲ್ಲಿ ರಾಜ್ಯ ಹೆದ್ದಾರಿ ಟೋಲ್ ಪ್ಲಾಜಾಗಳ ಸಂಖ್ಯೆ 323
ದೇಶಾದ್ಯಂತ ಒಟ್ಟು 1 ಸಾವಿರದ 181 ಟೋಲ್ ಪ್ಲಾಜಾಗಳಿವೆ
2023-24 ರಲ್ಲಿ ₹42,196 ಕೋಟಿ ಟೋಲ್ ಶುಲ್ಕ ಸಂಗ್ರಹ
2024-25 ರಲ್ಲಿ 64,809 ಕೋಟಿ ರೂಪಾಯಿ ಶುಲ್ಕ ಸಂಗ್ರಹ
ಕರ್ನಾಟಕ ರಾಜ್ಯದ್ಯಾಂತ 66 ಟೋಲ್ ಪ್ಲಾಜಾಗಳು ಇವೆ
5 ವರ್ಷಗಳಲ್ಲಿ ಈ ಟೋಲ್‌ಗಳಿಂದ 13,702 ಕೋಟಿ ಸಂಗ್ರಹ
ಈ ಎಲ್ಲಾ ಟೋಲ್‌ಗಳಲ್ಲಿ ಇಂದಿನಿಂದ 5% ಸುಂಕ ಹೆಚ್ಚಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us