ಮೊನಾಲಿಸಾಳಿಂದ ಐಐಟಿ ಬಾಬಾ.. ಇಂಟರ್​ನೆಟ್​ನಲ್ಲಿ ಸಂಚಲನ ಮೂಡಿಸಿದ ಮಹಾಕುಂಭದ ಈ ಘಟನೆಗಳು

author-image
Gopal Kulkarni
Updated On
‘ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ’- ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯ ವರದಿ ಹೇಳಿದ್ದೇನು?
Advertisment
  • 45 ದಿನಗಳ ಮಹಾಕುಂಭಮೇಳಕ್ಕೆ ತೆರೆಬೀಳಲು ಕ್ಷಣಗಣನೆ ಆರಂಭ
  • ಈ ಮಹೋತ್ಸವದಲ್ಲಿ ನಡೆದಿವೆ ಅನೇಕ ಅನನ್ಯ ಘಟನೆಗಳು
  • ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೆಷನ್ ಹುಟ್ಟಿಸಿದ್ದು ಯಾರು?

45 ದಿನಗಳ ಕುಂಭಮೇಳಕ್ಕೆ ಇಂದು ತೆರೆ ಬೀಳಲಿದೆ. ಈ 45 ದಿನಗಳಲ್ಲಿ ಪ್ರಯಾಗರಾಜ್​ನ ತ್ರಿವೇಣಿ ಸಂಗಮದಲ್ಲಿ ಮಹಾಜನಸಾಗರವೇ ಮಿಂದು ಹೋಗಿದೆ. 45 ದಿನಗಳಲ್ಲಿ ಪ್ರಯಾಗರಾಜ್​ನಲ್ಲಿ ಭಕ್ತಿಯ ಸಂಗಮವಾಗಿದೆ. ಈ ದೇಶದ ಜನತೆಯ ಸಂಸ್ಕೃತಿ ಮತ್ತು ದೈವಭಕ್ತಿಯ ಪರಿಚಯ ಇಡೀ ಜಗತ್ತಿಗೆ ಈ ಮಹಾಕುಂಭಮೇಳದಿಂದ ಪರಿಚಯವಾಗಿದೆ.

ಈ ಒಂದು ಸನಾತನರ ಪರಂಪರೆಯ ದಿವ್ಯತೆಗೆ ಮನಸೋತು ಕೇವಲ ದೇಶದಿಂದ ಮಾತ್ರವಲ್ಲ ವಿದೇಶದಿಂದಲೂ ಗಣ್ಯಾತೀಗಣ್ಯರು ಬಂದು ಗಂಗೆಯಲ್ಲಿ ಮಿಂದು ಪುನೀತರಾಗಿ ಹೋಗಿದ್ದಾರೆ. ಈ 45 ದಿನಗಳಲ್ಲಿ ಗಂಗೆಯ ತಟದಲ್ಲಿ ಸಾವಿರಾರು ಘಟನೆಗಳು ನಡೆದಿವೆ. ಸೆಲೆಬ್ರೆಟಿಗಳಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳು ಕೂಡ ಗಂಗೆಯೆಂಬ ಪಾಪವಿನಾಶಿನಿಯ ಮಡಿಲಲ್ಲಿ ಮಿಂದೆದ್ದು ಹೋಗಿದ್ದಾರೆ. ಹಾಗೆಯೇ ಸೋಷಿಯಲ್​ ಮೀಡಿಯಾಗಳಲ್ಲಿ ಹಲ್​ಚಲ್ ಸೃಷ್ಟಿಸಿದ ಎಷ್ಟೋ ಘಟನೆಗಳು ನಡೆದಿವೆ. ಝಿರೋದಿಂದ ಹೀರೋ ಆದವರು ಇದ್ದಾರೆ.ನೋಡಿದವರು ಬೆಚ್ಚಿ ಬೀಳಬೇಕು ಅಂತಹ ಘಟನೆಗಳು ಕೂಡ ನಡೆದಿವೆ. ಅಂತಹ ಕೆಲವು ಅಪರೂಪದ ಘಟನೆಗಳನ್ನು ನಾವು ಇಲ್ಲಿ ನಿಮಗೆ ಹೇಳುತ್ತೇವೆ.

publive-image

ಮೊನಾಲಿಸಾ
ಮೋನಿ ಬೋನ್ಸ್ಲೇ , 16ರ ಹಾಲುಗಲ್ಲದ ಹುಡುಗಿ, ಕಣ್ಣಲ್ಲಿಯೇ ಯಾವುದೋ ಚುಂಬಕತೆಯ ಮಾದಕತೆಯ ಸೆಳುವಿನ ಚೆಲುವನ್ನಿಟ್ಟುಕೊಂಡ ಬಂದ ಹುಡುಗಿ ಇಡೀ ಕುಂಭಮೇಳದಲ್ಲಿ ರಾತ್ರೋ ರಾತ್ರಿ ಜನಪ್ರಿಯತೆಗೆ ಬಂದಳು.ಮಹಾಕುಂಭದಲ್ಲಿ ರುದ್ರಾಕ್ಷಿ ಮಾರಲು ಬಂದ ಹುಡುಗಿಯ ಕಂಗಳಿಗೆ ಅಲ್ಲಿ ನೆರೆದಿದ್ದ ಭಕ್ತಕೋಟಿಯೇ ಮರುಳಾಗಿ ಹೋಗಿತ್ತು. ಗಂಗೆಯಲ್ಲಿ ಮಿಯ್ಯಲು ಬಂದ ಕೋಟಿ ಕೋಟಿ ಜನ ಇವಳ ಕಂಗಳಲ್ಲಿ ಮಿಂದೆದ್ದೇ ಜಾಸ್ತಿ ಎನ್ನುವಷ್ಟು ಖ್ಯಾತಿ ಪಡೆದಳು. ಮಧ್ಯಪ್ರದೇಶದ ಇಂದೋರ್​ನಿಂದ ಬಂದ 16ರ ಬಾಲೆ ಕುಂಭಮೇಳದಲ್ಲಿ ಜನರು ಅಕೆಯ ವಿಡಿಯೋ ತೆಗೆಯುವುದರಿಂದ ಬೇಸತ್ತು ವಾಪಸ್ ತನ್ನೂರಿಗೆ ಹೋದಳು. ಈಗ ಸಿನಿಮಾವೊಂದರಲ್ಲಿ ನಟಿಸುವ ಭಾಗ್ಯ ಅವಳದ್ದಾಗಿದೆ. ರುದ್ರಾಕ್ಷಿ ಮಾರಲು ಬಂದ ಮೀನಾಕ್ಷಿಯಂತವಳ ನಸೀಬು ರಾತ್ರೋ ರಾತ್ರಿ ಬದಲಾಗಿದೆ.

publive-image

ಐಐಟಿ ಬಾಬಾ ಅಲಿಯಾಸ್​ ಅಭಯ್ ಸಿಂಗ್
ಗೋರಖ್​ನ ಅಖಾ ಮಸಾನಿಯ ನಾಗಾಸಾಧು ಅಭಯ್​ ಸಿಂಗ್​ ಕೂಡ ಹೀಗೆಯೇ ಏಕಾಏಕಿ ಜನಪ್ರಿಯತೆಗೆ ಬಂದವರು. ಇವರು ನಾಗಾಸಾಧು ಆಗುವ ಮೊದಲು ಬಾಂಬೆ ಐಐಟಿಯಲಲ್ಲಿ ಇಂಜನಿಯರಿಂಗ್​ ಮುಗಿಸಿದ್ದರು. ಮುಂದೆ ಕೆನಡಾದಲ್ಲಿ ಕೆಲವು ವರ್ಷ ಕೆಲಸವನ್ನು ಮಾಡಿದವರು ಲೌಕಿಕ ಜೀವನದಿಂದ ಮುಕ್ತಿ ಬಯಸಿ ಉತ್ತರ ಭಾರತಕ್ಕೆ ಬಂದು ನಾಗಾಸಾಧು ಆದವರು. ಈ ವ್ಯಕ್ತಿಯೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ದಿನ ದೊಡ್ಡ ಚರ್ಚೆಗೆ ಒಳಗಾದವರು. ಅವರ ಸಂದರ್ಶನ ಮಾತುಗಳು ಕೂಡ ಅತಿಹೆಚ್ಚು ವೀವ್ಸ್ ಪಡೆದವು.

ಬಾಬಾ ರಾಮದೇವ್ ವೈರಲ್ ವಿಡಿಯೋ
ಇನ್ನು ಮಹಾಕುಂಭಮೇಳದಲ್ಲಿ ತುಂಬಾ ಸದ್ದು ಮಾಡಿದ ಮತ್ತೊಂದು ವಿಷಯ ಅಂದ್ರೆ ಅದು ಯೋಗಗುರು ರಾಮದೇವ್ ಬಾಬಾ ಅವರ ವಿಡಿಯೋ. ತಮ್ಮ ತಲೆಗೂದಲನ್ನು ಗಂಗೆಯಲ್ಲಿ ಮೀಯಿಸಿದ ಮೇಲೆಕ್ಕೆತ್ತುವಾಗ ಪಕ್ಕದ ಸಾಧವಿನ ಮುಖಕ್ಕೆ ಅವರ ಜಟೆಯ ಕೂದಲು ಪಡೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿತ್ತು.

publive-image

'ಮಮತಾ ಕುಲಕರ್ಣಿ
90ರ ದಶಕದ ಬಾಲಿವುಡ್​ನ ಅತ್ಯಂತ ಬಹುಬೇಡಿಕೆಯ ನಟಿ ಮಮತಾ ಕುಲಕರ್ಣಿ ಕುಂಭಮೇಳದಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದರು. ಮಮತಾ ಕುಲಕರ್ಣಿಯ ಹೆಸರು ವಿಶ್ವದಲ್ಲಿ ಮತ್ತೊಂದು ಬಾರಿ ಪಸರಿಸಿತು. ಒಂದು ಕಾಲದಲ್ಲಿ ಡ್ರಗ್ಸ್ ಕೇಸ್​ನಲ್ಲಿ ಸಿಲುಕಿದ್ದ ಮಮತಾ ಕುಲಕರ್ಣಿ ಈ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಸೇರಿಕೊಂಡು ಸಾಧ್ವಿಯಾಗಿ ಬದಲಾಗಿದ್ದು ಎಲ್ಲರ ಹುಬ್ಬೇರಿಸಿತ್ತು. ಹಲವು ಧಾರ್ಮಿಕ ಮುಖಂಡರ ವಿರೋಧದಿಂದ ಆಕೆಯನ್ನು ಮಹಾಮಂಡಲೇಶ್ವರದಿಂದ ಕೈಬಿಡಲಾಯಿತು. ಇದು ಮಾಧ್ಯಮಗಳಲ್ಲಿಯೂ ಕೂಡ ದೊಡ್ಡ ಚರ್ಚೆ ಆಗಿತ್ತು.

ಸ್ಮಾರ್ಟ್​ಫೋನ್​ನನ್ನು ಗಂಗೆಯಲ್ಲಿ ಮುಳುಗಿಸಿದ ಮಹಿಳೆ
ಇನ್ನು ಕುಂಭಮೇಳಕ್ಕೆ ಪವಿತ್ರ ಸ್ನಾನಕ್ಕೆ ಬಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕರೆತರಲಾಗಲಿಲ್ಲಾ ಎಂದು ಅವರಿಗೆ ವಿಡಿಯೋ ಕಾಲ್ ಮಾಡಿ ಸ್ಮಾರ್ಟ್​ಫೋನ್​ನ್ನು ಗಂಗೆಯಲ್ಲಿ ಮುಳುಗಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.

publive-image

ಗಂಗೆಯ ದಡದಲ್ಲಿ ಹ್ಯಾರಿ ಪಾಟರ್.
ಇನ್ನು ಮಹಾಕುಂಭದಲ್ಲಿ ಮತ್ತೊಬ್ಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದ. ನೋಡಲು ಇಂಗ್ಲಿಷ್​ ಸಿನಿಮಾದ ಹ್ಯಾರಿ ಪಾಟರ್​ನಂತೆ ಕಾಣುವ ವ್ಯಕ್ತಿಯ ವಿಡಿಯೋ ದೊಡ್ಡದಾಗಿ ವೈರಲ್ ಆಗಿತ್ತು. ಪುಫರ್ ಜಾಕೆಟ್ ಜೀನ್ಸ್​ನಲ್ಲಿ ಪ್ರಸಾದ ಸೇವಿಸುತ್ತಿದ್ದ ವ್ಯಕ್ತಿಯ ವಿಡಿಯೋ ಪ್ರಯಾಗರಾಜ್​ಗೆ ಬಂದಿರುವ ಹ್ಯಾರಿ ಪಾಟರ್ ಎಂತಲೇ ಫೇಮಸ್ ಆಗಿತ್ತು.

ಇದನ್ನೂ ಓದಿ:Kumbh Mela; ಗಂಗೆಯಲ್ಲಿ ಮಿಂದಿದ್ದು ಎಷ್ಟು ಕೋಟಿ ಭಕ್ತರು.. ಶಿವರಾತ್ರಿಯಂದೇ ವಿದ್ಯುಕ್ತ ತೆರೆ

1,200 ಕಿಲೋ ಮೀಟರ್ ದೂರದಿಂದ ಬಂದ ಜೋಡಿ
ಇನ್ನು ಮುಂಬೈನಿಂದ ಪ್ರಯಾಗರಾಜ್​ವರೆಗೆ ಅಂದ್ರೆ ಸುಮಾರು 1200 ಕಿಲೋ ಮೀಟರ್​ ದೂರ ಬೈಕ್​ ಜರ್ನಿ ಮಾಡಿಕೊಂಡು ಬಂದ ಜೋಡಿಯೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿತ್ತು. ರಾಜೇಶ್ ಹಾಗೂ ಸಾಧನಾ ಮೆಹ್ತಾ ಎಂಬ ಜೋಡಿ ದೊಡ್ಡ ಸದ್ದು ಮಾಡಿತ್ತು. ಟ್ರೈನ್ ಟಿಕೆಟ್ ತುಂಬಾ ದುಬಾರಿ ಎಂದುಕೊಂಡು ಬೈಕ್​ನಲ್ಲಿಯೇ ಈ ಜೋಡಿ ಪ್ರಯಾಗರಾಜ್​ಗೆ ಬಂದು ಪವಿತ್ರ ಸ್ನಾನ ಮಾಡಿತ್ತು.

View this post on Instagram

A post shared by @daily_over_dose

ಬ್ಯುಸಿನೆಸ್​ಮ್ಯಾನ್​ ಬಾಬಾ
ಧಾರ್ಮಿಕ ಪಥದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ತನ್ನ ಮೂರು ಸಾವಿರ ಕೋಟಿ ಮೌಲ್ಯದ ಉದ್ಯಮವನ್ನು ಬಿಟ್ಟು ಬಂದ ವ್ಯಕ್ತಿಯೊಬ್ಬರು ಕೂಡ ಹೀಗೆಯೇ ಏಕಾಏಕಿ ಫೇಮಸ್ ಆಗಿದ್ದರು. ಅಂತರಂಗದ ಶಾಂತಿಗಾಗಿ ತಮ್ಮ ಮೂರು ಸಾವಿರ ಕೋಟಿ ಉದ್ಯಮದ ಸಾಮ್ರಾಜ್ಯ ತೊರೆದು ಸಾಮಾನ್ಯ ಸಾಧುವಿನಂತೆ ಕುಂಭಮೇಳದಲ್ಲಿ ಇವರು ಹೆಜ್ಜೆ ಹಾಕಿದ್ದು ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ:45 ದಿನಗಳ ಮಹಾಕುಂಭಮೇಳಕ್ಕೆ ಇಂದು ತೆರೆ.. ಶಿವರಾತ್ರಿ ಪ್ರಯುಕ್ತ ಕೋಟ್ಯಾಂತರ ಭಕ್ತರು ಬರುವ ನಿರೀಕ್ಷೆ

publive-image

ಪತ್ನಿ ಕಳೆದು ಹೋದ ಬಗ್ಗೆ ಮೂರು ಬಾರಿ ದೂರ ಕೊಟ್ಟ ವೃದ್ಧ
ಕುಂಭಮೇಳ ಎಂದರೆ ವ್ಯಕ್ತಿಗಳು ಕಳೆದು ಹೋಗುವುದು, ಮತ್ತೆ ಜೊತೆಯಾಗುವುದು ಕಾಮನ್​. ಆದ್ರೆ ಕುಂಭಮೇಳಕ್ಕೆ ಬಂದಿದ್ದ ಒಬ್ಬ ವೃದ್ಧ ತಮ್ಮ ಪತ್ನಿ ಕಳೆದು ಹೋಗಿದ್ದಾಳೆ ಎಂದು ಮೂರು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಮೂರು ಬಾರಿಯೂ ಕೂಡ ಪೊಲೀಸರು ಆ ವೃದ್ಧರಿಗೆ ಅವರ ಪತ್ನಿಯನ್ನು ಹುಡುಕಿಕೊಟ್ಟಿದ್ದರು. ಇದನ್ನು ಒಂದು ವಿಡಿಯೋದಲ್ಲಿ ಆ ತಾತಾ ಹೇಳಿಕೊಂಡಿದ್ದ. ಇದು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment