/newsfirstlive-kannada/media/post_attachments/wp-content/uploads/2024/08/Rishab-Shetty-puneeth-Rajkumar-1.jpg)
ನವದೆಹಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಇಂದು ಘೋಷಣೆ ಮಾಡಲಾಗಿದೆ. 2022ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಸಿನಿಮಾ ಹಾಗೂ ಸಿನಿಮಾ ಕ್ಷೇತ್ರದ ಪ್ರತಿಭೆಗಳ ಹೆಸರನ್ನು ಇಂದು ಘೋಷಿಸಲಾಗಿದೆ. ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯದಿಂದ ಘೋಷಣೆಯಾದ ಪಟ್ಟಿಯಲ್ಲಿ ಕನ್ನಡದ ಎರಡು ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಗುರುತಿಸಿಕೊಂಡಿವೆ.
/newsfirstlive-kannada/media/post_attachments/wp-content/uploads/2023/11/KANTARA_1st_LOOK.jpg)
ಅತ್ಯುತ್ತಮ ಚಿತ್ರ ಪ್ರಶಸ್ತಿ ಕನ್ನಡದ ಕೆಜಿಎಫ್ ಚಿತ್ರಕ್ಕೆ ಸಿಕ್ಕಿದ್ದು. ಅತ್ಯುತ್ತಮ ನಟ ಪ್ರಶಸ್ತಿ ಕಾಂತಾರದ ರಿಷಬ್ ಶೆಟ್ಟಿಯವರಿಗೆ ದಕ್ಕಿದ್ರೆ, ಕಾಂತಾರಾಗೆ ಅತ್ಯುತ್ತಮ ಮನರಂಜನೆ ಸಿನಿಮಾ ಎಂಬ ಪ್ರಶಸ್ತಿಯೂ ಕೂಡ ಸಿಕ್ಕಿದೆ ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನಿತ್ಯಾ ಮೆನನ್ ಗಳಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ನಾಲ್ಕನೇ ನಟರಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕನ್ನಡಕ್ಕೆ ಸಿಕ್ಕ ರಾಷ್ಟ್ರೀಯ ಪ್ರಶಸ್ತಿಗಳು ಯಾವುವು ಅಂತ ನೋಡುವುದಾದ್ರೆ,
/newsfirstlive-kannada/media/post_attachments/wp-content/uploads/2024/08/CHOMAN-DUDI.jpg)
ಶ್ರೇಷ್ಠ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟರು
1975 ಎಂ ವಿ ವಾಸುದೇವ. ಚಿತ್ರ: ಚೋಮನ ದುಡಿ
1986- ಚಾರುಹಾಸನ್. ಚಿತ್ರ: ತಬರನ ಕಥೆ
2014- ಸಂಚಾರಿ ವಿಜಯ್: ಚಿತ್ರ: ನಾನು ಅವನಲ್ಲ ಅವಳು
2024- ರಿಷಬ್ ಶೆಟ್ಟಿ. ಚಿತ್ರ: ಕಾಂತಾರ
/newsfirstlive-kannada/media/post_attachments/wp-content/uploads/2024/08/GULABI-TALKIESU.jpg)
ಶ್ರೇಷ್ಠ ನಟಿ ಪ್ರಶಸ್ತಿ ಪಡೆದ ಕನ್ನಡದ ನಟಿಯರು
1973- ನಂದಿನಿ ಭಕ್ತವತ್ಸಲಂ. ಚಿತ್ರ:ಕಾಡು
2004- ತಾರಾ. ಚಿತ್ರ: ಹಸೀನಾ
2007- ಉಮಾಶ್ರೀ. ಚಿತ್ರ: ಗುಲಾಬಿ ಟಾಕೀಸು
ಇದನ್ನೂ ಓದಿ: ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ ವಿಜಯಲಕ್ಷ್ಮಿ; ದರ್ಶನ್ ಪತ್ನಿ ಹೇಳಿದ್ದೇನು?
ರಾಷ್ಟ್ರ ಪ್ರಶಸ್ತಿ ಪಡೆದ ಶ್ರೇಷ್ಠ ಕನ್ನಡ ಚಿತ್ರಗಳು
1970 ಸಂಸ್ಕಾರ
1975 ಚೋಮನದುಡಿ
1977- ಘಟಶ್ರಾದ್ಧ
1986- ತಬರನ ಕಥೆ
1997- ತಾಯಿ ಸಾಹೇಬ
2001- ದ್ವೀಪ
2024 ಕೆಜಿಎಫ್-2
/newsfirstlive-kannada/media/post_attachments/wp-content/uploads/2024/08/Puneeth-Rajkumar-Award.jpg)
ಅಪ್ಪುಗೆ ಬಾಲನಟ ಪ್ರಶಸ್ತಿ!
1985ರಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಬೆಟ್ಟದ ಹೂವು ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟನಾಗಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
1994ರಲ್ಲಿ ಕೊಟ್ರೇಶಿ ಕನಸು ಸಿನಿಮಾದ ಅಭಿನಯಕ್ಕಾಗಿ ವಿಜಯ್ ರಾಘವೇಂದ್ರ ಅವರಿಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಸಿಕ್ಕಿದೆ.
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಶ್ರೇಷ್ಠ ನಿರ್ದೇಶಕರು
1971. ಚಿತ್ರ: ವಂಶವೃಕ್ಷ: ನಿರ್ದೇಶಕರು: ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್
1976- ಚಿತ್ರ : ಪಲ್ಲವಿ: ನಿರ್ದೇಶಕರು: ಪಿ. ಲಂಕೇಶ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us