/newsfirstlive-kannada/media/post_attachments/wp-content/uploads/2024/11/Mushroom-Farming.jpg)
ಮನಸ್ಸು ಇದ್ದಲ್ಲಿ ಮಾರ್ಗ ಎಂಬ ಗಾದೆಯ ಮಾತುಗಳೇ ಇವೆ. ನಾವು ಯಾವುದನ್ನಾದರು ಸಾಧಿಸಬೇಕು ಅಂತ ಇದ್ರೆ ಅದರತ್ತ ನಿರಂತರ ಶ್ರಮ ಹಾಗೂ ಶ್ರದ್ಧೆಯನ್ನಿಟ್ಟು ಕೆಲಸ ಮಾಡಿದರೆ ಯಶಸ್ಸು ಅನ್ನೋದು ತಾನಾಗಿಯೇ ಬರುತ್ತದೆ. ಲಕ್, ಅದೃಷ್ಟ ಹಣೆಬರಹ ಅಂದುಕೊಂಡು ಕುಳಿತರೆ ಯಾವ ಸಾಧನೆಯೂ ಆಗಲ್ಲ. ಮನಸ್ಸಿಟ್ಟು ನಾವು ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದರೆ ಗೆಲುವು ಖಂಡಿತ ಎನ್ನುವದಕ್ಕೆ ಬಿಹಾರ ಮೂಲದ ಈ ಮಹಿಳೆಯೇ ಸಾಕ್ಷಿ
ಇದನ್ನೂ ಓದಿ:11 ಡ್ರೈವಿಂಗ್ ಲೈಸೆನ್ಸ್.. ಬೃಹತ್ ವಾಹನಗಳನ್ನು ಚಲಾಯಿಸಿದ ಭಾರತದ ಮೊದಲ ಮಹಿಳೆ.. ಯಾರೀ ಗಟ್ಟಿಗಿತ್ತಿ?
ಪ್ರತಿಭಾ ಝಾ ಎಂಬ ಬಿಹಾರ ಮೂಲದ ಮಹಿಳೆ ತನ್ನ 15ನೇ ವಯಸ್ಸಿನಲ್ಲಿ ಸರ್ಕಾರದ ಕೃಷಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಾಯಿಯ ಅನಾರೋಗ್ಯದ ಹಿನ್ನೆಲೆ ತಮ್ಮ 16ನೇ ವಯಸ್ಸಿಗೆ ಮದುವೆಯಾಗುತ್ತಾರೆ. 2016ರಲ್ಲಿ ಮಿರ್ಜಾಪುರದಲ್ಲಿ ತಮ್ಮ ಪತಿಯೊಂದಿಗೆ ವಾಸವಾಗಿದ್ದ ಪ್ರತಿಭಾ, ಅವರ ಪತಿಗೆ ಹೈದ್ರಾಬಾದ್ಗೆ ವರ್ಗವಾದಾಗ ಹೊಸ ದಾರಿಯೊಂದು ತೆರೆದುಕೊಳ್ಳುತ್ತದೆ. ಮೊದಲು ಪತಿಯೊಂದಿಗೆ ಹೋದ ಪ್ರತಿಭಾ ಅವರು ಅವರ ಅತ್ತೆ ಮಾವ ಕಾಯಿಲೆಗೆ ಬಿದ್ದ ಕಾರಣ ವಾಪಸ್ ಮಿರ್ಜಾಪುರದ ಹನ್ಸಿ ಗ್ರಾಮಕ್ಕೆ ವಾಪಸ್ ಆಗುತ್ತಾರೆ. ಇದೇ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಮಶ್ರೂಮ್ ಬ್ಯುಸಿನೆಸ್ನಲ್ಲಿ ಸಕ್ಸಸ್ ಕಂಡಿದ್ದ ಒಬ್ಬರ ಕಥೆಯನ್ನು ಓದುತ್ತಾರೆ.
ಇದನ್ನೂ ಓದಿ:ಕೋಳಿ ಮುಂಜಾನೆ ಯಾಕೆ ಕೂಗುತ್ತದೆ..? ನಿಮಗೆ ಗೊತ್ತಾ ಈ ಅಚ್ಚರಿ ವಿಚಾರಗಳು..?
ಆಗ ಅವರಿಗೆ ಅವರು ಚಿಕ್ಕವರಿದ್ದಾಗ ಅವರ ತಂದೆ ಮಶ್ರೂಮ್ ಫಾರ್ಮ್ಗಳಿಗೆ ಕರೆದುಕೊಂಡು ಹೋಗುತ್ತಿರುವುದು ನೆನಪಾಗುತ್ತದೆ. ಕೂಡಲೇ ನಾನು ಈ ವ್ಯಾಪಾರ ಶುರು ಮಾಡಬೇಕು ಎಂದು ನಿರ್ಧರಿಸಿದ ಅವರು ಕೂಡಲೇ ಈ ಬಗ್ಗೆ ತಮ್ಮ ಪತಿಯೊಂದಿಗೆ ಚರ್ಚೆ ಮಾಡುತ್ತಾರೆ. ಆದ್ರೆ ಎಲ್ಲ ಕಡೆಯೂ ವಿರೋಧ ಕೇಳಿ ಬರುತ್ತದೆ. ಹೆಣ್ಣು ಮಕ್ಕಳು ವ್ಯಾಪಾರದಲ್ಲಿ ತೊಡಗುವ ಪದ್ಧತಿ ನಮ್ಮಲ್ಲಿ ಇಲ್ಲ ಎಂದೇ ಹೇಳುತ್ತಾರೆ. ಆದ್ರೆ ಪ್ರತಿಭಾ ಅವರ ಪತಿ ಮಾತ್ರ ಅವರ ಬೆನ್ನಿಗೆ ನಿಲ್ಲುತ್ತಾರೆ.
ಕೂಡಲೇ ದರ್ಬಂಗ್ ಕೃಷಿ ವಿಭಾಗಕ್ಕೆ ಭೇಟಿ ನೀಡಿದ ಪ್ರತಿಭಾ ಮಶ್ರೂಮ್ ಬೆಳೆಯ ಪ್ರಾಥಮಿಕ ವಿಷಯವನ್ನು ತಿಳಿದುಕೊಳ್ಳುತ್ತಾರೆ. 2016ರಲ್ಲಿ ಮೊದಲ ಬಾರಿ ಮಶ್ರೂಮ್ ಬೆಳೆ ಬೆಳೆಯುತ್ತಾರೆ. ಕೃಷಿ ವಿಶ್ವವಿದ್ಯಾಲಯದಿಂದ 1 ಕೆಜಿ ಮಿಲ್ಕಿ ಮಶ್ರೂಮ್ ಬೀಜಗಳನ್ನು ತೆಗೆದುಕೊಂಡು ಪ್ರತಿಭಾ 600 ರೂಪಾಯಿ ಕೊಟ್ಟು ಮತ್ತೆ ನಾಲ್ಕು ಕೆಜಿ ಮಶ್ರೂಮ್ ಬೀಜಗಳನ್ನ ಸ್ಥಳೀಯ ಬೀಜ ಮಾರಾಟಗಾರರಲ್ಲಿ ಖರೀದಿಸುತ್ತಾರೆ. ಬತ್ತದ ಹುಲ್ಲು , ಪಾಲಿ ಬ್ಯಾಗ್ಸ್ ಹಾಗೂ ಇತರ ವಸ್ತುಗಳಿಗಾಗಿ 400 ರೂಪಾಯಿ ಖರ್ಚು ಮಾಡುತ್ತಾರೆ ಪ್ರತಿಭಾ. ಈ ಕೃಷಿಗಾರಿಕೆಗೆ ಹೊಸಬರಾಗಿದ್ದ ಪ್ರತಿಭಾಗೆ ಮೊದಲ ಪ್ರತಿ ಬ್ಯಾಗ್ಗೆ ಕೇವಲ 6 ಕೆಜಿ ಮಶ್ರೂಮ್ ಇಳುವರಿ ಮಾತ್ರ ಬರುತ್ತದೆ. ಒಂದು ಬ್ಯಾಗ್ಗೆ 10 ಕೆಜಿ ಬರಬೇಕಿದ್ದ ಮಶ್ರೂಮ್ 6 ಕೆಜಿ ಬರುತ್ತದೆ. 30 ಕೆಜಿ ಮಾರಾಟ ಮಾಡಿದ ಪ್ರತಿಭಾ 2500 ರೂಪಾಯಿ ಪಡೆಯುತ್ತಾರೆ. ಮೊದಲ ಹಂತದಲ್ಲಿ 1500 ರೂಪಾಯಿ ಲಾಭ ಪಡೆಯುತ್ತಾರೆ.
ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಮಶ್ರೂಮ್ ಕೃಷಿ ಉತ್ಪಾದನೆಯ ಬಗ್ಗೆ 15 ದಿನಗಳ ಕಾಲ ಮಾಸ್ಟರ್ ತರಬೇತಿ ಪಡೆಯುತ್ತಾರೆ. ಅಲ್ಲಿಂದ ನೂರು ಕೆಜಿ ಮಶ್ರೂಮ್ ಬೀಜಗಳನ್ನು ತಂದ ಇವರು ತಮ್ಮ ಮಶ್ರೂಮ್ ಕೃಷಿಯನ್ನ ಬೇರೆಯದ್ದೇ ಹಂತದಲ್ಲಿ ಆರಂಭಿಸುತ್ತಾರೆ. ದಿನೇ ದಿನೇ ಉತ್ತಮ ಇಳುವರಿಯನ್ನು ತೆಗೆದ ಪ್ರತಿಭಾ ಈಗ ತಿಂಗಳಿಗೆ ಎರಡು ಲಕ್ಷ ರೂಪಾಯಿ ಗಳಿಸುತ್ತಾರೆ. ಅದು ಮಾತ್ರವಲ್ಲ, ಅವರು ಮಶ್ರೂಮ್ ಕೃಷಿಯ ಬಗ್ಗೆ ಅಲ್ಲಲ್ಲಿ ತರಬೇತಿಯನ್ನು ಕೂಡ ನೀಡುತ್ತಾರೆ. ಪ್ರತಿ ಸೆಷನ್ಗೆ ಒಂದು ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಷ್ಟೊಂದು ಜನಪ್ರಿಯತೆಯನ್ನು ಪಡೆದಿದ್ದಾರೆ ಪ್ರತಿಭಾ. ಮಶ್ರೂಮ್ ಮಾರಾಟದ ಜೊತೆಗೆ ಅವುಗಳ ಬೀಜಗಳನ್ನು ಮಾರಾಟ ಮಾಡುತ್ತಾ ಅಪಾರ ಯಶಸ್ಸುನ್ನು ಕಂಡಿದ್ದಾರೆ ಪ್ರತಿಭಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ