/newsfirstlive-kannada/media/post_attachments/wp-content/uploads/2025/06/VARUN-CHAKRAVARTHY.jpg)
ಭಾರತೀಯ ಕ್ರಿಕೆಟ್ ರಂಗದಲ್ಲಿ ದೊಡ್ಡ ಸಾಧನೆ ಮಾಡುವುದು ಸುಲಭದ ಮಾತಲ್ಲ. ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೂ ಭಾರತದ ಕ್ರಿಕೆಟ್ ರಂಗದಲ್ಲಿ ಸ್ಪರ್ಧೆಯು ಅತ್ಯಂತ ಕಠಿಣವಾಗಿದೆ. ಪ್ರತಿಭಾನ್ವಿತ ಮಹತ್ವಾಕಾಂಕ್ಷಿ ಕ್ರಿಕೆಟಿಗರು ಆಟದ ಎಲ್ಲಾ ಹಂತಗಳಲ್ಲಿ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಪರಿಸ್ಥಿತಿ ಹೇಗಿದೆಯೆಂದರೆ ಅನೇಕರು ಬೆರಳೆಣಿಕೆಯಷ್ಟು ಪಂದ್ಯಗಳನ್ನು ಮಾತ್ರ ಆಡಲು ಅವಕಾಶ ಪಡೆಯುತ್ತಾರೆ. ಆದರೆ ಕೆಲವರು ತಮ್ಮ ಕ್ರಿಕೆಟ್ ಕ್ಷೇತ್ರದಲ್ಲಿ ಚೊಚ್ಚಲ ಪಂದ್ಯವನ್ನು ಆಡಲು ಅವಕಾಶವನ್ನೇ ಪಡೆಯಲ್ಲ. ಪ್ರಸ್ತುತ ಭಾರತದ ಅತ್ಯುತ್ತಮ ವೈಟ್-ಬಾಲ್ ಕ್ರಿಕೆಟ್ ಸ್ಪಿನ್ನರ್ ಆಗಿರುವ ವರುಣ್ ಚಕ್ರವರ್ತಿಯ ಕಥೆಯು ಇಂಟರೆಸ್ಟಿಂಗ್ ಆಗಿದೆ. ಈಗಾಗಲೇ 33 ವರ್ಷ ವಯಸ್ಸಿನವರಾಗಿರುವ ವರುಣ್ ಚಕ್ರವರ್ತಿ , ಕೇವಲ 4 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಕ್ರಿಕೆಟ್‌ನಲ್ಲಿ 42 ಪಟ್ಟು ಅದ್ಭುತ ವೇತನ ಏರಿಕೆಯಾದ ಬಗ್ಗೆ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾಗಿದ್ದ ಆರ್ ಅಶ್ವಿನ್ ಅವರಿಗೆ ವರುಣ್ ಚಕ್ರವರ್ತಿ ಮಾಹಿತಿ ನೀಡಿದ್ದಾರೆ. ಚಲನಚಿತ್ರಗಳಲ್ಲಿ ಕೇವಲ ರೂ. 500 ರೂಪಾಯಿ, 600 ರೂಪಾಯಿ ಗಳಿಸುತ್ತಿದ್ದ ವರುಣ್ ಚಕ್ರವರ್ತಿ ಕ್ರಿಕೆಟ್ ರಂಗದಲ್ಲಿ ಒಂದೇ ಬಾರಿಗೆ 42 ಪಟ್ಟು ವೇತನ ಏರಿಕೆ ಕಂಡಿದ್ದಾರೆ. ಒಂದೇ ದಿನ 25,652 ರೂಪಾಯಿ ಹಣವನ್ನು ಗಳಿಸಿದ್ದಾರೆ. ಆರ್.ಅಶ್ವಿನ್ ಅವರ ಯೂಟ್ಯೂಬ್ ಚಾನಲ್ನಲ್ಲಿ ಟೀಮ್ ಇಂಡಿಯಾ ತಂಡವನ್ನು ಸೇರುವ ಮೊದಲು ತಮ್ಮ ವೃತ್ತಿಜೀವನದ ಏರಿಳಿತಗಳ ಬಗ್ಗೆ ವರುಣ್ ಚಕ್ರವರ್ತಿ ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: ಸಿರಾಜ್ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!
ವರುಣ್ ಚಕ್ರವರ್ತಿ ನಾಲ್ಕು ವರ್ಷಗಳ ಹಿಂದೆ 29ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದಕ್ಕೂ ಹಿಂದೆ ಸಹಾಯಕ ವಾಸ್ತುಶಿಲ್ಪಿಯಾಗಿ ತಿಂಗಳಿಗೆ ಸುಮಾರು 18,000 ರೂಪಾಯಿ ಗಳಿಸುತ್ತಿದ್ದರು. ಬಳಿಕ ಸಿನಿಮಾಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಲು ಆರಂಭಿಸಿದ್ದರು. ಈ ವೇಳೆ ವರುಣ್ ಚಕ್ರವರ್ತಿ ದಿನಕ್ಕೆ 600 ರೂಪಾಯಿ ಗಳಿಸುತ್ತಿದ್ದರು. ಈಗ ಕ್ರಿಕೆಟಿಗನಾಗಿ ದಿನವೊಂದಕ್ಕೆ 300 ಅಮೆರಿಕನ್ ಡಾಲರ್ ಗಳಿಸುತ್ತಿದ್ದಾರೆ. 600 ಡಾಲರ್ ಅನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 25,652 ರೂಪಾಯಿ ಪಡೆಯುತ್ತಿದ್ದಾರೆ. ಭಾರತದ ಟಿ20 ವಿಶ್ವಕಪ್ ಮತ್ತು ಏಕದಿನ ತಂಡಗಳಲ್ಲಿ ತನಗಾಗಿ ಒಂದು ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕ್ರಿಕೆಟ್ ಅನ್ನು ಯಾವಾಗಲೂ ಕೆರಿಯರ್ ಆಗಿ ವರುಣ್ ನೋಡುತ್ತಿರಲಿಲ್ಲವಂತೆ. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಚಾಟ್ ಮಾಡುವಾಗ ವರುಣ್, ಅವರು ಆರಂಭದಲ್ಲಿ ವಾಸ್ತುಶಿಲ್ಪ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಿದ್ದನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಚಲನಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ ಎಂದು ಕೂಡ ವಿಷಯ ಬಹಿರಂಗಪಡಿಸಿದ್ದಾರೆ. ಕ್ರಿಕೆಟರ್ ವರುಣ್ ಚಕ್ರವರ್ತಿಯಲ್ಲಿ
ಇದನ್ನೂ ಓದಿ: ಪೊಲೀಸರ ಮುಂದೆ ಮಹತ್ವದ ಹೇಳಿಕೆ ಕೊಟ್ಟ ಸಂತ್ರಸ್ತೆ.. ಯಶ್ ದಯಾಳ್ ವಿರುದ್ಧ ಮಾಡಿದ ಆರೋಪ ಏನು..?
ಕಾಲೇಜು ಮುಗಿಸಿದ ತಕ್ಷಣ, ನಾನು ಒಂದು ವಾಸ್ತುಶಿಲ್ಪ ಕಂಪನಿಯಲ್ಲಿ ಸಹಾಯಕ ವಾಸ್ತುಶಿಲ್ಪಿಯಾಗಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದೆ. ನಾನು ತಿಂಗಳಿಗೆ ಸುಮಾರು 14 ಸಾವಿರದಿಂದ ಕೆರಿಯರ್ ಪ್ರಾರಂಭಿಸಿದೆ. ನಾನು ಅಲ್ಲಿ ಕೆಲಸ ಬಿಡುವ ಸಮಯದಲ್ಲಿ ಅದು 18 ಸಾವಿರವಾಗಿತ್ತು. ನಾನು ಆ ಕೆಲಸವನ್ನು ತೊರೆದ ನಂತರ, ಸ್ವಲ್ಪ ಸಮಯದವರೆಗೆ, ಸಂಗೀತದ ಮೇಲಿನ ನನ್ನ ಪ್ರೀತಿಯಿಂದ ಗಿಟಾರ್ ಅನ್ನು ಕೈಗೆತ್ತಿಕೊಂಡೆ. ಶೀಘ್ರದಲ್ಲೇ ನೀವು ಕೆಲವು ಕಲೆಯನ್ನು ಮುಂದುವರಿಸಲು ಬಯಸಿದರೆ ಪ್ರೀತಿ ಒಳಗಿನಿಂದ ಬರಬೇಕು ಎಂದು ನಾನು ಅರಿತುಕೊಂಡೆ. ನಿಮ್ಮ ಗುರಿ ಇತರರನ್ನು ಮೆಚ್ಚಿಸುವುದು ಅಥವಾ ಇತರರಿಂದ ಗಮನ ಸೆಳೆಯುವುದು ಆಗಿದ್ದರೆ, ಅದು ಎಂದಿಗೂ ಕೆಲಸ ಮಾಡುವುದಿಲ್ಲ. ನಾನು ಒಂದು ಗಂಟೆಗಿಂತ ಹೆಚ್ಚು ಕಾಲ ಗಿಟಾರ್ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ನಾನು 6-8 ತಿಂಗಳ ನಂತರವೇ ಅದನ್ನು ಅರಿತುಕೊಂಡೆ . ನಂತರ ನಾನು ನಿಲ್ಲಿಸಲು ನಿರ್ಧರಿಸಿದೆ. ನಂತರ ನಾನು ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣದಲ್ಲಿ ನನ್ನ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಚಂಡಮಾರುತ ವರ್ಧಾ ಸಂಭವಿಸುವವರೆಗೆ ಅದು ಒಂದು ವರ್ಷದವರೆಗೆ ಚೆನ್ನಾಗಿ ನಡೆಯಿತು. ಬಳಿಕ ನಾನು ನನ್ನ ಎಲ್ಲಾ ಇನ್ ವೆಸ್ಟ್ ಮೆಂಟ್ ಹಣವನ್ನು ಕಳೆದುಕೊಂಡೆ. ಆದ್ದರಿಂದ ಅದು ಹಾಗೆಯೇ ಕೊನೆಗೊಂಡಿತು. ಆಗ ನನಗೆ 24-25 ವರ್ಷ ವಯಸ್ಸಾಗಿತ್ತು, ಎಂದು ವರುಣ್ ಚಕ್ರವರ್ತಿ ಪ್ರಾಮಾಣಿಕವಾಗಿ ತಮ್ಮ ಜೀವನದ ಏರಿಳಿತಗಳ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: RCB ಬೌಲರ್ ಯಶ್ ದಯಾಳ್ ಅರೆಸ್ಟ್ ಆಗ್ತಾರಾ, ಎಫ್ಐಆರ್ನಲ್ಲಿ ಏನಿದೆ..? ಸಿಎಂ ಕಚೇರಿಯಿಂದ ತನಿಖೆಗೆ ಆದೇಶ!
ನನ್ನ ಕೆಲವು ಸ್ನೇಹಿತರು ಚಲನಚಿತ್ರೋದ್ಯಮದ ಭಾಗವಾಗಿದ್ದರು. ನಾನು ಬಹಳಷ್ಟು ಚಲನಚಿತ್ರಗಳನ್ನು ನೋಡಲು ಮತ್ತು ಅವರೊಂದಿಗೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ನಾನು ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನಾನು ಆಗ ಹುಡುಗರೊಂದಿಗೆ ಮಾತನಾಡಲು ಪ್ರಾರಂಭಿಸಿದೆ. ಅವರು ಕ್ರಿಕೆಟ್ ಮೈದಾನಗಳಲ್ಲಿ ಜೀವಾ ಎಂಬ ಚಲನಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ನನಗೆ ತಿಳಿಯಿತು. ಸಹಾಯಕ ನಿರ್ದೇಶಕನಾಗುವ ಉದ್ದೇಶದಿಂದ ನಾನು ಅಲ್ಲಿಗೆ ಹೋಗಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ನನಗೆ ಸರಿಯಾಗಿ ಅದನ್ನು ತಿಳಿಸಲು ಕೂಡ ಸಾಧ್ಯವಾಗಲಿಲ್ಲ. ನಂತರ ಜಾಹೀರಾತುದಾರರಲ್ಲಿ ಒಬ್ಬರು ನನಗೆ ಕ್ರಿಕೆಟ್ ಆಡುತ್ತೀಯಾ ಎಂದು ಕೇಳಿದರು. ನಾನು, 'ಟೆನಿಸ್-ಬಾಲ್ ಕ್ರಿಕೆಟ್ ಮಾತ್ರ' ಎಂದು ಹೇಳಿದೆ.
ಹಾಗಾಗಿ ನಂತರ ನಾನು ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಯಿತು, ಅಲ್ಲಿ ನಾನು ದಿನಕ್ಕೆ 600 ರೂಪಾಯಿ ಸಂಬಳದೊಂದಿಗೆ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಲು ನಿರ್ಧರಿಸಿದೆ. ಆ ಹಣ ಆ ಸಮಯದಲ್ಲಿ ಜೀವನದಲ್ಲಿ ಸಾಕಷ್ಟು ಸಹಾಯ ಮಾಡಿತ್ತು ಎಂದು ವರುಣ್ ಚಕ್ರವರ್ತಿ ಹೇಳಿದ್ದಾರೆ. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ದಿನಕ್ಕೆ 300 ಡಾಲರ್ ದುಡಿಯುತ್ತಿದ್ದೇನೆ. ಅಂದರೆ ವೇತನದಲ್ಲಿ 42 ಪಟ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಆಂಗ್ಲರಿಗೆ ನಡುಕ ಹುಟ್ಟಿಸಿದ ರಿಷಭ್ ಪಂತ್.. ವಿಕೆಟ್ ಕೀಪರ್ ಕೌಂಟರ್ ಅಟ್ಯಾಕ್ ಹೇಗಿರುತ್ತೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ