ಸಿಂಗಲ್ ಮದರ್​​ನಿಂದ ಮಾಡ್ರನ್ ಫ್ಯಾಮಿಲಿಗೆ ಬಂದ ನಟಿ ದಿವ್ಯಾ ಶ್ರೀಧರ್ ಈಗ ಹೇಗಿದ್ದಾರೆ?

author-image
Ganesh
Updated On
ಸಿಂಗಲ್ ಮದರ್​​ನಿಂದ ಮಾಡ್ರನ್ ಫ್ಯಾಮಿಲಿಗೆ ಬಂದ ನಟಿ ದಿವ್ಯಾ ಶ್ರೀಧರ್ ಈಗ ಹೇಗಿದ್ದಾರೆ?
Advertisment
  • ಕ್ರಿಸ್ ವೇಣುಗೋಪಾಲ್- ದಿವ್ಯಾ ನಡುವಿನ ವಯಸ್ಸಿನ ಅಂತರ ಎಷ್ಟು?
  • ನೆಗೆಟಿವ್ ಪ್ರಚಾರದ ವಿರುದ್ಧ ಬಲವಾಗಿ ನಿಂತ ದಿವ್ಯಾ ಶ್ರೀಧರ್
  • ಎರಡನೇ ಮದುವೆ ಬಗ್ಗೆ ದಿವ್ಯಾ ಶ್ರೀಧರ್ ಹೇಳಿದ್ದೇನು..?

ಸಿಂಗಲ್ ಮದರ್​ನಿಂದ ಮಾಡ್ರನ್ ಫ್ಯಾಮಿಲಿಗೆ ಬಂದವರು ಕೇರಳದ ಧಾರಾವಾಹಿ ನಟಿ ದಿವ್ಯಾ ಶ್ರೀಧರ್. ಇವರ ಜೀವನದ ಕಥೆಯೇ ಸಮಾಜದ ವಿವಾಹ, ಕುಟುಂಬದ ಕಲ್ಪನೆಯನ್ನು ಮುರಿದು ಅದರಾಚೆಗೂ ಇರುವ ಸಾಧ್ಯತೆಯನ್ನು ಹುಡುಕಿ ಹೊರಟ ದಿಟ್ಟ ಪಯಣ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಬೇಗ ಆ ದಾಂಪತ್ಯ ಜೀವನ ಮುರಿದು ಬಿದ್ದಿದ್ದರಿಂದ ಏಕಾಂಗಿಯಾಗಿಯೇ ಮಕ್ಕಳನ್ನು ಸಾಕಿ, ಸಲಹುವ ಸವಾಲು ದಿವ್ಯಾ ಶ್ರೀಧರ್​ಗೆ ಎದುರಾಗಿತ್ತು. ಈ ಸವಾಲನ್ನು ನಿಭಾಯಿಸುವ ಮಧ್ಯೆಯೇ ಸಮಾಜದ ವಿವಾಹದ ಕಲ್ಪನೆಯನ್ನು ಮುರಿದು ಮಧ್ಯ ವಯಸ್ಸಿನಲ್ಲಿ ತನಗಿಂತ ವಯಸ್ಸಿನಲ್ಲಿ ದೊಡ್ಡವರಾದವರನ್ನು ವಿವಾಹವಾಗಿ ಮತ್ತೆ ಸಂಸಾರಿಕ ಜೀವನಕ್ಕೆ ಕಳೆದ ವರ್ಷ ದಿವ್ಯಾ ಶ್ರೀಧರ್ ಕಾಲಿಟ್ಟಿದ್ದರು. ಇದು ಚರ್ಚೆಗೂ ಕಾರಣವಾಗಿತ್ತು. ಜೊತೆ ಜೊತೆಗೆ ದಿವ್ಯಾ ಶ್ರೀಧರ್ ಅವರ ದಿಟ್ಟ ನಿರ್ಧಾರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ದಿವ್ಯಾ ಶ್ರೀಧರ್ ಅವರ 2ನೇ ವಿವಾಹ ಹೇಗೆ ಸಾಗುತ್ತಿದೆ, ದಿವ್ಯಾ ಶ್ರೀಧರ್ ಹೇಗಿದ್ದಾರೆ, ಅವರ ಎರಡನೇ ಪತಿ ಹೇಗಿದ್ದಾರೆ, ಅವರ ಭಾವನೆಗಳೇನು ಅನ್ನೋದನ್ನು ನಿಮ್ಮ ಮುಂದೆ ಈ ವರದಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

publive-image

ಸಂಪ್ರದಾಯಿಕವಾಗಿ ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ತಾಯಂದಿರು ಕಣ್ಣೀರು ಹಾಕುತ್ತಾರೆ. ದಿವ್ಯಾ ಶ್ರೀಧರ್ ಬದುಕಿನಲ್ಲಿ ಇದು ಉಲ್ಟಾ ಆಗಿತ್ತು. 18 ವರ್ಷದ ಬೆಳೆದು ನಿಂತ ಮಗಳ ಎದುರು ತಾಯಿ ದಿವ್ಯಾ ಶ್ರೀಧರ್ -ಕ್ರಿಸ್ ವೇಣುಗೋಪಾಲ್ ರನ್ನು ವಿವಾಹವಾಗಿದ್ದರು. ದಿವ್ಯಾ ಶ್ರೀಧರ್- ಕ್ರಿಸ್ ವೇಣುಗೋಪಾಲ್ ಇಬ್ಬರಿಗೂ ಇದು ಎರಡನೇ ವಿವಾಹ. ಕ್ರಿಸ್ ವೇಣುಗೋಪಾಲ್​​ರನ್ನು ಮದುವೆಯಾದ ದಿನ, ದಿವ್ಯಾ ನಗು ನಗುತ್ತಾ ನಿಂತಿದ್ದರು. ಇವರಿಬ್ಬರ ಮದುವೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮದುವೆಗೆ ವಯಸ್ಸಿನ ಅಂತರ ಇಲ್ಲ. ಮದುವೆಗೆ ನಿಷ್ಕಲ್ಮಶ ಪ್ರೀತಿ ಮಾತ್ರ ಮುಖ್ಯ ಅನ್ನೋದನ್ನು ಇಬ್ಬರು ಸಾಬೀತುಪಡಿಸಿದ್ದಾರೆ ಎಂದೇ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆಲವರು ವ್ಯಂಗ್ಯದ ಮಾತುಗಳನ್ನು ಆಡಿದ್ದರು.

publive-image

ಕನಸು ಈಡೇರಿದೆ..

ದಿವ್ಯಾ ಶ್ರೀಧರ್ -ಕ್ರಿಸ್ ವೇಣುಗೋಪಾಲ್ ಇಬ್ಬರೂ ಧಾರಾವಾಹಿಗಳಲ್ಲಿ ಜೊತೆಯಾಗಿ ನಟಿಸುತ್ತಾ ಪರಿಚಯವಾದವರು. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಗೆಳೆಯರು, ನೀವು ಇಬ್ಬರು ಏಕೆ ವಿವಾಹ ಆಗಬಾರದು ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ಅದನ್ನು ಒಪ್ಪಿ ವಿವಾಹವಾದವರು. ದಿವ್ಯಾ ಶ್ರೀಧರ್ ಗೆ ಆದಾಗಲೇ ಒಮ್ಮೆ ವಿವಾಹವಾಗಿ ಪತಿಯಿಂದ ಚಿಕ್ಕ ವಯಸ್ಸಿನಲ್ಲೇ ಡಿವೋರ್ಸ್ ಪಡೆದಿದ್ದರು. ಹೀಗಾಗಿ ದಿವ್ಯಾ ಅವರಿಗೆ 2ನೇ ವಿವಾಹದ ಮೂಲಕ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಮತ್ತೆ ತಂದೆಯ ಪ್ರೀತಿ ಸಿಗುತ್ತೆ ಎಂಬ ನಿರೀಕ್ಷೆ. ಜೊತೆಗೆ ತಮ್ಮ ಜೀವನಕ್ಕೆೊಂದು ಸ್ಥಿರತೆ ಸಿಗುತ್ತೆ ಎಂಬ ನಿರೀಕ್ಷೆಗಳಿದ್ದವು. ಈಗ ಆ ನಿರೀಕ್ಷೆಗಳು ಕಳೆದೊಂದು ವರ್ಷದಲ್ಲಿ ಈಡೇರಿವೆ. ದಿವ್ಯಾ ಮಗಳು ಮಾಯಾ, ಹೊಸ ಜರ್ನಿಯನ್ನು ಆರಂಭಿಸಿದ್ದು, ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಮತ್ತು ಏವಿಯೇಷನ್ ಕೋರ್ಸ್ ನಲ್ಲಿ ಪದವಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: WCLನಲ್ಲಿ ವಿಂಟೇಜ್ ಎಬಿಡಿ ದರ್ಶನ.. 2 ವಿಸ್ಫೋಟಕ ಶತಕ.. ಹೇಗಿತ್ತು ಖದರ್​​..?

publive-image

ದಿವ್ಯಾ ಪತಿ ಕ್ರಿಸ್ ವೇಣುಗೋಪಾಲ್, ಈ ಬಗ್ಗೆ ಇನ್ಸ್​ಟಾಗ್ರಾಮ್​ನಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಯೂನಿರ್ವಸಿಟಿಯಲ್ಲಿ ತಾನು, ದಿವ್ಯಾ, ಮಾಯಾ ಹಾಗೂ ಆಕೆಯ ಸ್ನೇಹಿತರು ಇರುವ ಫೋಟೋವನ್ನು ಕ್ರಿಸ್ ವೇಣುಗೋಪಾಲ್ ಹಂಚಿಕೊಂಡಿದ್ದಾರೆ. ಮಾಯಾ ಭವಿಷ್ಯಕ್ಕೆ ಎಲ್ಲರ ಪ್ರಾರ್ಥನೆ, ಆಶೀರ್ವಾದವಿರಲಿ ಎಂದು ಕ್ರಿಸ್ ವೇಣುಗೋಪಾಲ್ ಕೋರಿದ್ದಾರೆ. ಮಾಯಾ, ತನ್ನ ವಿದ್ಯಾಭ್ಯಾಸದ ಜೊತೆಗೆ ೞಎಕ್ಸಿಕ್ಯುಟೀವ್ ಟ್ರೇನಿಂಗ್ ಅನ್ನು ಪಡೆಯುತ್ತಿದ್ದಾರೆ.

publive-image

ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ದಿವ್ಯಾ, ಬಹಳಷ್ಟು ವರ್ಷ ಏಕಾಂಗಿಯಾಗಿ ಯಾರ ಬೆಂಬಲವೂ ಇಲ್ಲದೆ ಮಕ್ಕಳನ್ನು ಬೆಳೆಸಿದ್ದರು. ಜೀವನದ ವೈಯಕ್ತಿಕ, ವೃತ್ತಿ ಬದುಕಿನ ಸವಾಲುಗಳ ಮಧ್ಯೆ ಮಕ್ಕಳನ್ನು ಬೆಳೆಸಿದ್ದ ದಿವ್ಯಾ, ಮಕ್ಕಳೆಡೆಗಿನ ಈಕೆಯ ಬದ್ಧತೆಗೆ ಸಾಟಿಯೇ ಇಲ್ಲ.

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

publive-image

ದಿವ್ಯಾ ಮತ್ತು ಕ್ರಿಸ್ ವೇಣುಗೋಪಾಲ್, ಒಂದೇ ಸೀರಿಯಲ್​ನಲ್ಲಿ ನಟಿಸುತ್ತಿದ್ದರಿಂದ ಪರಸ್ಪರ ಭೇಟಿಯಾಗಿದ್ದರು. ದಿವ್ಯಾ ಎಂದೂ ಕೂಡ ಕ್ರಿಸ್ ವೇಣುಗೋಪಾಲ್ ಜೊತೆ ತನ್ನ ವಿವಾಹ, ವಿವಾಹ ವಿಚ್ಛೇದನದ ಬಗ್ಗೆ ಮಾತನಾಡಿರಲಿಲ್ಲ. ಕ್ರಿಸ್ ವೇಣುಗೋಪಾಲ್ ತರಬೇತಿ ಪಡೆದ ಸೈಕಲಾಜಿಸ್ಟ್. ಹೀಗಾಗಿ ಆಕೆಯ ಭಾವನೆಗಳು ಬೇಗನೇ ಕ್ರಿಸ್ ವೇಣುಗೋಪಾಲ್​ಗೆ ಅರ್ಥವಾದವು. ಇಬ್ಬರು ಪರಸ್ಪರ ಹತ್ತಿರವಾದರು. ಈ ಆತ್ಮೀಯತೆಯೇ ಪ್ರೀತಿ, ಪ್ರೇಮವಾಗಿ ಪರಿವರ್ತನೆಯಾಗಿ ಇಬ್ಬರು ವಿವಾಹವಾಗುವ ತೀರ್ಮಾನ ಮಾಡಿದ್ದರು.

ದಿವ್ಯಾರ ಇಬ್ಬರು ಮಕ್ಕಳಿಗೂ ಕ್ರಿಸ್ ವೇಣುಗೋಪಾಲ್ ತಂದೆಯಾಗಿದ್ದಾರೆ. ದಿವ್ಯಾರ ಕಿರಿಯ ಮಗ, ಕ್ರಿಸ್ ವೇಣುಗೋಪಾಲ್ ಜೊತೆ ಸಂತೋಷದಿಂದ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾನೆ. ಕ್ರಿಸ್ ವೇಣುಗೋಪಾಲ್ ಮತ್ತು ಮಗ, ಪೊಂಗಲ್ ಹಬ್ಬದ ವೇಳೆ ಜನರಿಗೆ ಕೋಲ್ಡ್ ಡ್ರಿಂಕ್ಸ್ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಹಳಷ್ಟು ಜನರ ಹೃದಯ ಮುಟ್ಟಿತ್ತು.

publive-image

ದಿವ್ಯಾ ಮತ್ತು ಕ್ರಿಸ್ ವೇಣುಗೋಪಾಲ್ ಪರಸ್ಪರ ಸಂತೋಷದಿಂದ ಇದ್ದರೂ ಕೂಡ ಗುರುವಾಯೂರೂ ದೇವಾಲಯದಲ್ಲಿ ಮದುವೆ ಆದ ಇವರಿಬ್ಬರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆ, ಮುಂದುವರಿದೇ ಇತ್ತು. ಆನ್​ಲೈನ್ ಟ್ರೋಲ್​ಗಳಲ್ಲಿ ಕೆಲವರು ಕ್ರಿಸ್ ವೇಣುಗೋಪಾಲ್ ಬಗ್ಗೆ ಟೀಕೆ ಮಾಡಿದ್ದರು. ಕ್ರಿಸ್ ವೇಣುಗೋಪಾಲ್ ವಯಸ್ಸಾದಂತೆ ಕಾಣುವುದು, ಉದ್ದನೆಯ ಗ್ರೇ ಗಡ್ಡದಿಂದ ಕ್ರಿಸ್, ದಿವ್ಯಾಗಿಂತ ವಯಸ್ಸಿನಲ್ಲಿ ಭಾರಿ ದೊಡ್ಡವರು. ಅಂಥವರ ಜೊತೆ ದಿವ್ಯಾ ಮದುವೆಯಾಗಿದ್ದಾರೆ ಎಂದೆಲ್ಲಾ ಟೀಕೆ ಮಾಡಿದ್ದರು. ಈ ಟೀಕೆಗಳಿಗೆಲ್ಲಾ ದಿವ್ಯಾ ಮತ್ತು ಕ್ರಿಸ್ ವೇಣುಗೋಪಾಲ್ ಇಬ್ಬರೂ ತಲೆಕೆಡಿಸಿಕೊಂಡಿಲ್ಲ. ದಿವ್ಯಾ ಶ್ರೀಧರ್, ಆನ್ ಲೈನ್ ಗಾಸಿಪ್, ನೆಗೆಟಿವ್ ಪ್ರಚಾರದ ವಿರುದ್ಧ ಬಲವಾಗಿ ನಿಂತಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು..?

publive-image

ನಾನು ಸೆ*ಕ್ಸ್ ಒಂದಕ್ಕಾಗಿ ಮದುವೆಯಾಗಿಲ್ಲ. ನನಗೆ ನನ್ನ ಮಕ್ಕಳಿಗೆ ತಂದೆ ಬೇಕಾಗಿತ್ತು. ನನಗೆ ಗಂಡ ಮತ್ತು ಒಂದು ಐಡೆಂಟಿಟಿ ಬೇಕಾಗಿತ್ತು. ಸೆ*ಕ್ಸ್ ಜೀವನದ ಒಂದು ಭಾಗವಷ್ಟೇ ಎಂದು ದಿಟ್ಟವಾಗಿ ಹೇಳಿದ್ದಾರೆ. ತಮ್ಮ ಹಾಗೂ ಕ್ರಿಸ್ ವೇಣುಗೋಪಾಲ್ ವಯಸ್ಸಿನ ಬಗ್ಗೆಯೂ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ನ್ಯೂಸ್​ನಲ್ಲಿ 60 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ. ಸತ್ಯ ಏನೆಂದರೆ ನಾನು ಹುಟ್ಟಿದ್ದು 1984ರಲ್ಲಿ. ಕ್ರಿಸ್ ವೇಣುಗೋಪಾಲ್ ಹುಟ್ಟಿದ್ದು 1975ರಲ್ಲಿ. ಕ್ರಿಸ್ ವೇಣುಗೋಪಾಲ್​​ಗೆ ಈಗ 49 ವರ್ಷ ವಯಸ್ಸು. ನನಗೆ 40 ವರ್ಷ ವಯಸ್ಸು. ಒಂದು ವೇಳೆ ನಾನು ನನಗಿಂತ ಇನ್ನೂ ಹೆಚ್ಚು ವಯಸ್ಸಾದವರನ್ನು ಮದುವೆಯಾದರೆ ಅದರಿಂದ ಬೇರೆಯವರಿಗೆ ಏನು ಚಿಂತೆ, ತೊಂದರೆ ಎಂದು ದಿವ್ಯಾ ಪ್ರಶ್ನಿಸಿದ್ದಾರೆ.

publive-image

ಕ್ರಿಸ್ ವೇಣುಗೋಪಾಲ್, ಪ್ರಸಿದ್ಧ ಧಾರಾವಾಹಿ ಪತ್ತರಮಟ್ಟುವಿನಲ್ಲಿ ಅಜ್ಜನ ಪಾತ್ರದಲ್ಲೂ ನಟಿಸಿದ್ದಾರೆ. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ದೊಡ್ಡ ವ್ಯಕ್ತಿತ್ವವನ್ನು ಕ್ರಿಸ್ ವೇಣುಗೋಪಾಲ್ ಹೊಂದಿದ್ದಾರೆ. ಕ್ರಿಸ್ ವೇಣುಗೋಪಾಲ್ ಹಿಂದೆ ರೇಡಿಯೋ ಜಾಕಿ ಆಗಿದ್ದರು. ಮೋಟಿವೇಷನಲ್ ಸ್ಪೀಕರ್, ಬರಹಗಾರ, ವಾಯ್ಸ್ ಓವರ್ ಕೋಚ್, ತರಬೇತಿ ಪಡೆದ ಹಿಪ್ನೋಥೆರಪಿಸ್ಟ್. ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಸೈಕಾಲಜಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಜೊತೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಡಿಜಿಟಲ್ ಫಿಲಂ ಮೇಕಿಂಗ್ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ. ಬಹಳಷ್ಟು ಸೀರಿಯಲ್​​ಗಳಿಗೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: 8.8 ತೀವ್ರತೆಯಲ್ಲಿ ಭೂಕಂಪ.. ಭಯಾನಕ ಸುನಾನಿ ಎಚ್ಚರಿಕೆ.. ರಷ್ಯಾ ಕರಾವಳಿ ಅಕ್ಷರಶಃ ಪ್ರಕ್ಷುಬದ್ಧ..!

publive-image

ಈಗ ದಿವ್ಯಾ ಮತ್ತು ಕ್ರಿಸ್ ವೇಣುಗೋಪಾಲ್ ಇಬ್ಬರೂ ಜೊತೆಯಾಗಿ ಮಕ್ಕಳನ್ನು ಪ್ರೀತಿಯಿಂದ ಮಾರ್ಡನ್ ಫ್ಯಾಮಿಲಿಯಲ್ಲಿ ಬೆಳೆಸುತ್ತಿದ್ದಾರೆ. ಇವರ ಸಂಬಂಧವು ಭಾರತದ ಮಧ್ಯಮ ವರ್ಗದ ಸಂಪ್ರದಾಯಿಕ ಪ್ರೀತಿ, ಮರು ಮದುವೆ, ಪೇರೇಟಿಂಗ್ ಗೆ ಸವಾಲಾಗಿದೆ. ಇಬ್ಬರು ಕೂಡ ದೃಢತೆ, ಮುಕ್ತತೆಯಿಂದ ಪ್ರೀತಿ ತೋರಿಸಿದ್ದಾರೆ. ಪರಸ್ಪರರನ್ನು ಅರ್ಥ ಮಾಡಿಕೊಂಡಿದ್ದಾರೆ. ಬೇರೆಯವರ ಮಾತು ಟೀಕೆಗಳಿಗಿಂತ ಮಕ್ಕಳ ಯೋಗಕ್ಷೇಮ ಮುಖ್ಯ ಎಂಬ ತತ್ವದಲ್ಲಿ ನಂಬಿಕೆ ಇರಿಸಿ ಬಾಳಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment