/newsfirstlive-kannada/media/post_attachments/wp-content/uploads/2024/12/SUVARNA_SOUDHA-1.jpg)
ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಅರಂಭವಾಗಲಿದೆ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ದೊಡ್ಡ ಜಟಾಪಟಿಯೇ ನಡೆಯಲಿದೆ ಎಂದು ಊಹಿಸಲಾಗಿತ್ತು. ಆದ್ರೆ ವಿಪಕ್ಷಗಳಲ್ಲಿ ಸಮನ್ವಯದ ಕೊರತೆ ಈಗಾಗಲೇ ಎದ್ದು ಕಾಣಿಸುತ್ತಿದೆ. ಕಲಾಪ ಆರಂಭ ಆಗೋಕೆ ಕೇವಲ ಒಂದೇ ಒಂದು ದಿನ ಬಾಕಿಯಿದೆ. ಆದರೂ ಕೂಡ ವಿಪಕ್ಷಗಳಾದ ಜೆಡಿಎಸ್​ ಹಾಗೂ ಬಿಜೆಪಿ ಇನ್ನೂ ರೂಪುರೇಷೆ ಸಿದ್ಧಗೊಂಡಿಲ್ಲ. ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಬೇಕಾದ ಬಗ್ಗೆ ಇನ್ನೂ ಮೈತ್ರಿ ಪಡೆ ತೀರ್ಮಾನ ಮಾಡಿಲ್ಲ.
ಇದನ್ನೂ ಓದಿ:ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು! ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅರೋಗ್ಯ ಸಚಿವ
ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳ ಕೈಯಲ್ಲಿ ಬರೀ ಅಸ್ತ್ರಗಳಲ್ಲ, ಬ್ರಹ್ಮಾಸ್ತ್ರಗಳೇ ಇವೆ. ಮುಡಾ ಹಗರದಿಂದ ಹಿಡಿದು ವಕ್ಫ್​ಬೋರ್ಡ್​ನಿಂದ ರೈತರು ದೇವಾಲಯಗಳಿಗೆ ಹೋಗಿರುವ ನೋಟಿಸ್, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿರು ಬಾಣಂತಿಯ ಸರಣಿ ಸಾವು. ಗ್ಯಾರಂಟಿ ಅನುಷ್ಠಾನದಲ್ಲಾಗುತ್ತಿರುವ ಲೋಪ, ಕುಂಠಿತಗೊಂಡಿರುವ ಅಭಿವೃದ್ಧಿ , ಉತ್ತರ ಕರ್ನಾಟಕದ ಸಮಸ್ಯೆಗಳು, ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಹೀಗೆ ಹಲವು ಅಸ್ತ್ರಗಳು ಕೈಯಲ್ಲಿ ಇದ್ದರೂ ಕೂಡ ವಿಪಕ್ಷಗಳು ಯುದ್ಧಕ್ಕೆ ಇನ್ನೂ ಸಜ್ಜಾಗಿಲ್ಲ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; 24.89 ಕೋಟಿ ಹಣ ಖರ್ಚು.. ಯಾವುದಕ್ಕೆ ಎಷ್ಟು ವೆಚ್ಚ?, ಇಲ್ಲಿದೆ ಮಾಹಿತಿ
ಈಗಾಗಲೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡದ ಕುರಿತು ಸಾಕಷ್ಟು ಅಸಮಧಾನಗಳನ್ನು ಶಾಸಕರು ಹೊರ ಹಾಕಿದ್ದಾರೆ. ಆದ್ರೆ ಇಲ್ಲಿಯವರೆಗೂ ಜೆಡಿಎಸ್​ ಬಿಜೆಪಿ ಸಮನ್ವಯ ಸಭೆ ಆಗಿಲ್ಲ. ಸರ್ಕಾರವನ್ನು ಕಟ್ಟಿ ಹಾಕುಲು ಯಾವುದೇ ರೀತಿ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಅನೇಕ ಪ್ರಮುಖ ಸಮಸ್ಯೆಗಳಿದ್ದು ಇದರ ಬಗ್ಗೆ ಹೋರಾಟಕ್ಕೆ ವಿಪಕ್ಷ ನಾಯಕರು ರಣತಂತ್ರ ರೂಪಿಸಬೇಕು. ಆದ್ರೆ ಇಲ್ಲಿಯವರೆಗೆ ಯಾವುದೇ ರೀತಿಯ ಹೋರಾಟದ ಬಗ್ಗೆ ವಿಪಕ್ಷಗಳಲ್ಲಿ ತೀರ್ಮಾನವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us