ಮದುವೆಯಾದ 3 ದಿನಕ್ಕೆ ಸ್ಕೆಚ್‌.. ಮೇಘಾಲಯ ಹನಿಮೂನ್ ಕೇಸ್‌ನ ಸಂಪೂರ್ಣ ಮಾಹಿತಿ ಬಹಿರಂಗ

author-image
admin
Updated On
ಮಂಗಳಸೂತ್ರ ಬಿಚ್ಚಿಟ್ಟಿದ್ದ ಸೋನಮ್‌.. ಮೇಘಾಲಯ ಹನಿಮೂನ್ ಕೇಸ್‌ಗೆ ಹೊಸ ಟ್ವಿಸ್ಟ್‌!
Advertisment
  • ಪ್ರಿಯಕರ ರಾಜ ಸಿಂಗ್ ಕುಶ್ವಾಹಾಗೆ ಮೆಸೇಜ್ ಮಾಡಿದ್ದ ಸೋನಮ್
  • ಮೇಘಾಲಯಕ್ಕೆ ಒನ್ ವೇ ಟಿಕೆಟ್ ಮಾತ್ರ ಬುಕ್ ಮಾಡಿದ್ದಳು
  • ಮೇಘಾಲಯದ ವೇ ಸಾಡಾಂಗ್ ಫಾಲ್ಸ್ ಬಳಿ ಕೊನೆಯ ನೆಟ್‌ವರ್ಕ್

ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದ ರಾಜ ರಘುವಂಶಿ ಕೇಸ್‌ನ ಸ್ಫೋಟಕ ವಿವರಗಳು ಬಹಿರಂಗವಾಗುತ್ತಿದೆ. ರಾಜ ರಘುವಂಶಿ ಪತ್ನಿ ಸೋನಮ್‌ ಹಾಗೂ ಸುಪಾರಿ ಕಿಲ್ಲರ್‌ಗಳನ್ನು ಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮದುವೆಯಾದ ಮೂರೇ ದಿನಕ್ಕೆ ರಾಜ ರಘುವಂಶಿ ಹತ್ಯೆಗೆ ಪತ್ನಿ ಸೋನಮ್‌ ಪ್ಲ್ಯಾನ್ ಮಾಡಿದ್ದಾರೆ. ಪ್ರಿಯಕರ ರಾಜ ಸಿಂಗ್ ಕುಶ್ವಾಹಾಗೆ ಮೆಸೇಜ್ ಮಾಡಿದ್ದ ಸೋನಮ್, ಪತಿ ರಾಜ ರಘುವಂಶಿ ನನಗೆ ಹತ್ತಿರವಾಗಲು ಯತ್ನಿಸುತ್ತಿದ್ದಾನೆ. ಇದು ನನಗೆ ಇಷ್ಟ ಇಲ್ಲ ಎಂದಿದ್ದಾರೆ.

ಈ ಮೆಸೇಜ್‌ ನೋಡಿದ ಬಳಿಕ ಪ್ರಿಯಕರ ರಾಜ ಸಿಂಗ್ ಕುಶ್ವಾಹಾ ಹಾಗೂ ಸೋನಮ್‌ ಇಬ್ಬರು ಸೇರಿ ರಾಜ ರಘುವಂಶಿ ಹತ್ಯೆಗೆ ಪ್ಲ್ಯಾನ್ ಮಾಡಿದ್ದಾರೆ. ಮೇಘಾಲಯಕ್ಕೆ ಹನಿಮೂನ್‌ಗೆ ಹೋಗುವ ಪ್ಲ್ಯಾನ್ ಮಾಡಿದ್ದೇ ಸೋನಮ್. ಇದು ರಾಜ ರಘುವಂಶಿ ಕುಟುಂಬಕ್ಕೆ ಇಷ್ಟವೇ ಇರಲಿಲ್ಲ.

publive-image

ಕಳೆದ ಮೇ 23ರ ಬೆಳಗ್ಗೆ 10 ಗಂಟೆಗೆ ರಾಜ ರಘುವಂಶಿ ಅವರು ಕೊನೇ ಬಾರಿ ಜೀವಂತವಾಗಿ ಕಾಣಿಸಿಕೊಂಡಿದ್ದರು. ಸೋನಮ್- ರಾಜ ರಘುವಂಶಿಯನ್ನು ಟೂರಿಸ್ಟ್ ಗೈಡ್ ಆಲ್ಭರ್ಟ್‌ ನೋಡಿದ್ದರು. ಇಬ್ಬರಿಗೂ ಗೈಡ್ ಆಗಿ ಕೆಲಸ ಮಾಡುವುದಾಗಿ ಆಲ್ಭರ್ಟ್‌ ಮಾತುಕತೆ ನಡೆಸಿದ್ದಾರೆ. ಆದರೆ ಆಲ್ಬರ್ಟ್ ಬದಲಿಗೆ ಸೋನಮ್‌ ಬೇರೊಬ್ಬ ವ್ಯಕ್ತಿಯನ್ನು ಕರೆದೊಯ್ದಿದ್ದಾರೆ. ಟೂರಿಸ್ಟ್ ಗೈಡ್ ಆಲ್ಬರ್ಟ್ ಅವರು ಸೋನಮ್, ರಾಜ ರಘುವಂಶಿ ಜೊತೆ ಇನ್ನೂ ಮೂವರು ಇದ್ದರು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಸಿನಿಮಾದಲ್ಲಿ ನಟಿಸಲು ಯುವತಿಗೆ ಟಾರ್ಚರ್‌.. ಯಾರು ಈ ಶ್ವೇತಾ ಖಾನ್? ಏನಿದು ಪ್ರಕರಣ?  

ಟೂರಿಸ್ಟ್ ಗೈಡ್ ನೀಡಿದ್ದ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾಲ್ ರೆಕಾರ್ಡ್, ಲೋಕೇಷನ್ ಮ್ಯಾಪಿಂಗ್ ಮೂಲಕ ವೆರಿಫೈ ಮಾಡಿದ್ದಾರೆ. ಪ್ರಾರಂಭದಲ್ಲಿ ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರು, ಟೂರಿಸ್ಟ್ ಗೈಡ್‌ ಆಲ್ಬರ್ಟ್ ಹೇಳಿಕೆಯ ಬಳಿಕ ಸೋನಮ್ ಮೇಲೆ ಕೇಂದ್ರೀಕರಿಸಿದ್ದಾರೆ. ಆಮೇಲೆ ಸೋನಮ್ ವರ್ತನೆಯ ಮೇಲೂ ಪೊಲೀಸರಿಗೆ ಅನುಮಾನ ಶುರುವಾಗಿದೆ.

publive-image

ಸೋನಮ್, ರಾಜು ರಘುವಂಶಿ ಕುಟುಂಬಕ್ಕೆ ಹೇಳದೆ ಮೇಘಾಲಯಕ್ಕೆ ಒನ್ ವೇ ಟಿಕೆಟ್ ಮಾತ್ರ ಬುಕ್ ಮಾಡಿದ್ದಳು. ಪತಿ ರಾಜ ರಘುವಂಶಿಗೆ ಚಿನ್ನಾಭರಣಗಳನ್ನು ಧರಿಸಿಕೊಂಡು ಹನಿಮೂನ್‌ಗೆ ಬರಲು ಹೇಳಿದ್ದಳು. ಹೆಂಡತಿ ಮಾತು ಕೇಳಿದ್ದ ರಾಜ ರಘುವಂಶಿ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಹನಿಮೂನ್‌ಗೆ ಬಂದಿದ್ದ.

ಮೇಘಾಲಯದ ವೇ ಸಾಡಾಂಗ್ ಫಾಲ್ಸ್ ಬಳಿ ರಾಜ ರಘುವಂಶಿ ಫೋನ್ ನೆಟ್‌ವರ್ಕ್ ಪತ್ತೆಯಾಗಿತ್ತು. ಇದೇ ವೇ ಸಾಡಾಂಗ್ ಫಾಲ್ಸ್ ಬಳಿಯೇ ಹಂತಕರ ಮೊಬೈಲ್ ನೆಟ್ ವರ್ಕ್ ಕೂಡ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಸೋನಮ್, ಹಂತಕರ ಜೊತೆ ಕೋ ಅರ್ಡಿನೇಟ್ ಮಾಡಿಕೊಂಡು ಅಲ್ಲಿಗೆ ಕರೆಸಿಕೊಂಡು ಗಂಡನ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

publive-image

ಸೋನಮ್‌ ಅವರು ರಾಜ ಕುಶ್ವಾಹಾಗೆ ರಾಜ ರಘುವಂಶಿಯ ಲೈವ್ ಲೋಕೇಷನ್ ಶೇರ್ ಮಾಡಿದ್ದರು. ರಾಜ ಕುಶ್ವಾಹಾ ಲೈವ್ ಲೋಕೇಷನ್‌ ಅನ್ನು ಇನ್ನೂಳಿದ ಮೂವರು ಹಂತಕರಿಗೆ ರವಾನೆ ಮಾಡಿದ್ದ. ರಾಜ ರಘುವಂಶಿಯನ್ನ ಸೋನಮ್ ಹತ್ಯೆ ಮಾಡಿಸಿದ್ದಾಳೆ ಎಂಬುದಕ್ಕೆ ಸಾಕಷ್ಟು ಡಿಜಿಟಲ್ ಸಾಕ್ಷ್ಯ, ಸಾಂದರ್ಭಿಕ ಸಾಕ್ಷ್ಯ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳಿವೆ. ಸೋನಮ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಪ್ರಬಲ ಸಾಕ್ಷ್ಯಗಳಿವೆ ಎಂದು ಮೇಘಾಲಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment