/newsfirstlive-kannada/media/post_attachments/wp-content/uploads/2025/05/India-mock-drill.jpg)
ನವದೆಹಲಿ: ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿರುವ ಭಾರತ ನಾಳೆ ದೇಶಾದ್ಯಂತ ಐತಿಹಾಸಿಕ ಮಾಕ್ ಡ್ರಿಲ್ ಕೈಗೊಳ್ಳುತ್ತಿದೆ. ದೇಶದ 259 ಕಡೆ 3 ಹಂತಗಳಲ್ಲಿ ರಕ್ಷಣಾ ಮಾಕ್ ಡ್ರಿಲ್‌ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ‘ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಮಾಕ್ ಡ್ರಿಲ್ ನಡೆಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ನೀಡಿದೆ.
ನಾಳೆ ಸಂಜೆ 4 ಗಂಟೆಗೆ ದೇಶಾದ್ಯಂತ ರಕ್ಷಣಾ ಮಾಕ್ ಡ್ರಿಲ್ ನಡೆಯುತ್ತಿದ್ದು, ಗೃಹರಕ್ಷಕ ದಳ, NCC, NSS ವಿದ್ಯಾರ್ಥಿಗಳು ಭಾಗವಹಿಸಲು ಸೂಚನೆ ನೀಡಲಾಗಿದೆ.
ರಾಜ್ಯದ 3 ಭಾಗಗಳಲ್ಲಿ ಮಾಕ್ ಡ್ರಿಲ್!
ದೇಶದ 259 ಕಡೆಗಳಲ್ಲಿ ಕರ್ನಾಟಕದ ರಾಯಚೂರಿನ ಶಕ್ತಿನಗರ, ಕಾರವಾರದ ಮಲ್ಲಪುರ ಹಾಗೂ ಬೆಂಗಳೂರು ನಗರದ ಮೂರು ಭಾಗಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಸಿವಿಲ್ ಡಿಫೆನ್ಸ್‌ನ ಸಿಬ್ಬಂದಿ ಮಾತ್ರ ಈ ಅಣುಕು ಕವಾಯತಿನಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: ನಾಗರಿಕರ ಸ್ವಯಂ ರಕ್ಷಣೆಗಾಗಿ ಮಾಕ್ ಡ್ರಿಲ್.. ದೇಶದಲ್ಲಿ ನಾಳೆ ಏನೆಲ್ಲ ನಡೆಯಲಿದೆ..?
ಮೂರು ರೀತಿಯಲ್ಲಿ ಸೈರನ್!
ಮಾಕ್ ಡ್ರಿಲ್‌ನಲ್ಲಿ ಪ್ರಮುಖವಾಗಿ ಒಟ್ಟು ಮೂರು ರೀತಿಯಲ್ಲಿ ಸೈರನ್ ಕೇಳಿಸುತ್ತೆ. ಮೊದಲ ಸೈರನ್ ಅಟ್ಯಾಕ್ ನಡೆಯುವ ಬಗ್ಗೆ ಜನರಿಗೆ ಅಲರ್ಟ್ ಕೊಡುತ್ತೆ. ಎರಡನೇ ಸೈರನ್ ಅಟ್ಯಾಕ್ ಟೈಂನಲ್ಲಿ ಆಗುತ್ತೆ ಹಾಗೂ ಮೂರನೇ ಸೈರನ್ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಬಂದ ಸ್ಪಷ್ಟ ಮುನ್ಸೂಚನೆ ಆಗುತ್ತೆ.
ಮೊದಲ ಸೈರನ್ ಕೇಳಿಸಿದಾಗ ಜನರು ಏನ್ ಮಾಡಬೇಕು ಅನ್ನೋ ಬಗ್ಗೆ ನಾಳೆಯೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ನ್ಯೂಸ್ ಫಸ್ಟ್‌ಗೆ ಸಿವಿಲ್ ಡಿಫೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೇಗಿರಲಿದೆ ಯುದ್ಧದ ಮಾಕ್ ಡ್ರಿಲ್?
1. ವಾರ್ನಿಂಗ್ ಸೈರನ್
ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಶತ್ರುಗಳಿಂದ ವಾಯು ದಾಳಿ ನಡೆಯುವ ಸಾಧ್ಯತೆ ಇರುತ್ತೆ. ಹೀಗಾಗಿ ವಾಯುದಾಳಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸೈರನ್ ಮೊಳಗಿಸಿ ಮಾಹಿತಿ ನೀಡಲಾಗುತ್ತೆ.
2. ಸ್ವಯಂ ರಕ್ಷಣೆ
ದೇಶದಲ್ಲಿರುವ ಯುವ ಪೀಳಿಗೆ ಯುದ್ಧ ನೋಡಿಲ್ಲ. ಹೀಗಾಗಿ ಶತ್ರು ರಾಷ್ಟ್ರದ ದಾಳಿ ವೇಳೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ತರಬೇತಿ ನೀಡುವುದು ಅತ್ಯಗತ್ಯವಾಗಿದೆ.
3. ರಾತ್ರಿ ವಿದ್ಯುತ್ ಆಫ್!
ವಾಯುದಾಳಿ ವೇಳೆ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಆಫ್ ಆಗಿರುತ್ತೆ. ವೈರಿಗಳಿಗೆ ಜನಸಂಖ್ಯೆ ವಾಸಿಸುವ ಗುರುತು ಸಿಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತದೆ.
4. ಪ್ರಮುಖ ಸ್ಥಾವರಗಳ ಮರೆಮಾಚುವಿಕೆ
ಪ್ರಮುಖ ಸ್ಥಾವರಗಳು ದೇಶದ ಆಸ್ತಿ ಆಗಿರುತ್ತೆ. ಪ್ರಮುಖ ಸ್ಥಾವರಗಳ ಮೇಲೆ ದಾಳಿ ಆಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಮಾಹಿತಿ ನೀಡಿ ಶತ್ರುಗಳಿಂದ ಮರೆಮಾಚಲಾಗುತ್ತದೆ.
5. ಸ್ಥಳಾಂತರದ ಪೂರ್ವಾಭ್ಯಾಸ
ದುರ್ಗಮ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ತರಬೇತಿ ನೀಡಲಾಗುತ್ತದೆ. ನಾಗರಿಕರ ಸ್ಥಳಾಂತರ & ರಕ್ಷಣೆ ಹೇಗೆಂದು ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ