/newsfirstlive-kannada/media/post_attachments/wp-content/uploads/2024/05/colors-kannada1.jpg)
ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ. ಸಿನಿಮಾ ನಾಯಕಿಯ ಕಥೆ ಇದಾಗಿದ್ದು, ಹೀರೋಯಿನ್ ಬದುಕು ಯಾವಾಗಲು ಬಿಂದಾಸ್​ ಆಗಿರುತ್ತೆ, ಅವ್ರಿಗೇನು ಕಮ್ಮಿ ಅನ್ನೋ ಮಾತುಗಳು ಕೇಳಿ ಬರುವುದು ಸಹಜ. ಆದ್ರೇ ಅಸಲಿಯಲ್ಲಿ ಅವ್ರಿಗೂ ನೋವಿರುತ್ತೆ. ಬಣ್ಣ ಹಚ್ಚಿ ಕಣ್ಣಿಗೆ ಕಲರ್​ಫುಲ್​ ಆಗಿ ಕಾಣಿಸುವಷ್ಟು ಕಲಾವಿದರ ಬದುಕು ಇರೋದಿಲ್ಲ. ಇದೇ ಎಳೆಯನ್ನು ಇಟ್ಕೊಂಡು ಬಂದಿರೋ ನಿನಗಾಗಿ ಅದ್ಧೂರಿಯಾಗಿ ಲಾಂಚ್​ ಆಗಿದೆ.
/newsfirstlive-kannada/media/post_attachments/wp-content/uploads/2024/05/divya1.jpg)
ನಿನಗಾಗಿ ಮೊದಲ ಸಂಚಿಕೆ ಪ್ರೊಮೋದಲ್ಲಿ ತೋರಿಸಿದಂತೆ ಆಕರ್ಷಕವಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್​ ಆಗಿ ಮಿಂಚುತ್ತಿರೋ ರಚನಾ ಬದುಕಲ್ಲಿ ಅಮ್ಮನೇ ಎಲ್ಲಾ. ವಜ್ರೇಶ್ವರಿಯದ್ದೇ ಆಟ ಅಖಾಡ. ಇನ್ನು, ಜೀವ ಪಾತ್ರ ವಾಸ್ತವಕ್ಕೆ ಹತ್ತಿರವಾಗುವಂತಿದೆ. ಜೀವನಿಗೆ ಮಗಳೇ ಜೀವ. ಅಪ್ಪ-ಮಗಳ ಕಾಂಬಿನೇಷನ್​ ಚಂದವಾಗಿದೆ. ವೀಕ್ಷಕರಿಗೆ ಹಿತವಾದ ಅನುಭವ ನೀಡುತ್ತೆ. ಮುಗ್ಧ ಮನಸ್ಸಿನ ನಾಯಕಿ ಆಗಿ ದಿವ್ಯ ಉರುಡುಗ ಸೋಗಸಾಗಿ ಅಭಿನಯಿಸಿದ್ದಾರೆ.
View this post on Instagram
ರಿತ್ವಿಕ್​ ಜೀವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಮುದ್ದು ಕೃಷ್ಣಾ, ಹೆಸರಿಗೆ ತಕ್ಕಂತೆ ತುಂಟಿ, ಅಪ್ಪನನ್ನ ಸದಾ ಗೋಳಾಡಿಸೋ ಗೊಂಬೆ. ಉಳಿದ ಎಲ್ಲಾ ಪಾತ್ರಗಳು ಗಮನ ಸೇಳಿಯುವಂತಿವೆ. ಪ್ರತಿ ಸೀನ್​, ಫ್ರೇಮ್​ ನೋಡಿದ್ರೇ ಸಿನಿಮಾ ರೀತಿಯಲ್ಲೇ ದೊಡ್ಡಮಟ್ಟದ ಬಂಡವಾಳ ಹಾಕಿದ್ದಾರೆ. ನಿನಗಾಗಿ ಮೊದಲ ದಿನ ಭರ್ಜರಿಯಾಗಿಯೇ ಮೂಡಿಬಂದಿದ್ದು, ಇದೇ ಕ್ವಾಲಿಟಿ ಉಳಿಸಿಕೊಂಡು ಹೋದ್ರೇ ಟಾಪ್​ ಧಾರಾವಾಹಿ ಆಗೋದ್ರಲ್ಲಿ ಡೌಟ್​ ಇಲ್ಲ. ಸದ್ಯ ಮುಂದಿನ ದಿನಗಳಲ್ಲಿ ವೀಕ್ಷಕರು ಈ ಧಾರಾವಾಹಿಯನ್ನು ನಂಬರ್​ 1​ ಸ್ಥಾನಕ್ಕೆ ತರುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us