newsfirstkannada.com

ಸಿನಿಮಾವನ್ನೇ ಮೀರಿಸುತ್ತೆ ಈ ಸೀರಿಯಲ್​​.. ದಿವ್ಯಾ ಉರುಡುಗ ನಟನೆಗೆ ಕನ್ನಡಿಗರು ಕೊಟ್ರು ಫುಲ್​ ಮಾರ್ಕ್ಸ್​​!

Share :

Published May 29, 2024 at 6:09am

    ಗಿಣಿರಾಮ ಧಾರಾವಾಹಿಯಲ್ಲಿ ಕಮಾಲ್​ ಮಾಡಿದ್ದ ನಟ ರಿತ್ವಿಕ್ ಹೊಸ ಲುಕ್​ನಲ್ಲಿ​

    ನಿನಗಾಗಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಹೊಸ ವಿಲನ್ ಖಡಕ್​ ಎಂಟ್ರಿ

    ನಿನಗಾಗಿ ಸೀರಿಯಲ್​ ಅನ್ನು ನಂಬರ್​ 1​ ಸ್ಥಾನಕ್ಕೆ ಕೊಂಡೊಯ್ಯುತ್ತಾರಾ ಪ್ರೇಕ್ಷಕರು!

ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ. ಸಿನಿಮಾ ನಾಯಕಿಯ ಕಥೆ ಇದಾಗಿದ್ದು, ಹೀರೋಯಿನ್ ಬದುಕು ಯಾವಾಗಲು ಬಿಂದಾಸ್​ ಆಗಿರುತ್ತೆ, ಅವ್ರಿಗೇನು ಕಮ್ಮಿ ಅನ್ನೋ ಮಾತುಗಳು ಕೇಳಿ ಬರುವುದು ಸಹಜ. ಆದ್ರೇ ಅಸಲಿಯಲ್ಲಿ ಅವ್ರಿಗೂ ನೋವಿರುತ್ತೆ. ಬಣ್ಣ ಹಚ್ಚಿ ಕಣ್ಣಿಗೆ ಕಲರ್​ಫುಲ್​ ಆಗಿ ಕಾಣಿಸುವಷ್ಟು ಕಲಾವಿದರ ಬದುಕು ಇರೋದಿಲ್ಲ. ಇದೇ ಎಳೆಯನ್ನು ಇಟ್ಕೊಂಡು ಬಂದಿರೋ ನಿನಗಾಗಿ ಅದ್ಧೂರಿಯಾಗಿ ಲಾಂಚ್​ ಆಗಿದೆ.

ಇದನ್ನೂ ಓದಿ: ಡಿವೋರ್ಸ್​​ ಸುದ್ದಿ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಮನೆಯಿಂದ ಹೊರನಡೆದ ನತಾಶಾ.. ಅಸಲಿಗೆ ನಡೆದಿದ್ದೇನು?

ನಿನಗಾಗಿ ಮೊದಲ ಸಂಚಿಕೆ ಪ್ರೊಮೋದಲ್ಲಿ ತೋರಿಸಿದಂತೆ ಆಕರ್ಷಕವಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್​ ಆಗಿ ಮಿಂಚುತ್ತಿರೋ ರಚನಾ ಬದುಕಲ್ಲಿ ಅಮ್ಮನೇ ಎಲ್ಲಾ. ವಜ್ರೇಶ್ವರಿಯದ್ದೇ ಆಟ ಅಖಾಡ. ಇನ್ನು, ಜೀವ ಪಾತ್ರ ವಾಸ್ತವಕ್ಕೆ ಹತ್ತಿರವಾಗುವಂತಿದೆ. ಜೀವನಿಗೆ ಮಗಳೇ ಜೀವ. ಅಪ್ಪ-ಮಗಳ ಕಾಂಬಿನೇಷನ್​ ಚಂದವಾಗಿದೆ. ವೀಕ್ಷಕರಿಗೆ ಹಿತವಾದ ಅನುಭವ ನೀಡುತ್ತೆ. ಮುಗ್ಧ ಮನಸ್ಸಿನ ನಾಯಕಿ ಆಗಿ ದಿವ್ಯ ಉರುಡುಗ ಸೋಗಸಾಗಿ ಅಭಿನಯಿಸಿದ್ದಾರೆ.

ರಿತ್ವಿಕ್​ ಜೀವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಮುದ್ದು ಕೃಷ್ಣಾ, ಹೆಸರಿಗೆ ತಕ್ಕಂತೆ ತುಂಟಿ, ಅಪ್ಪನನ್ನ ಸದಾ ಗೋಳಾಡಿಸೋ ಗೊಂಬೆ. ಉಳಿದ ಎಲ್ಲಾ ಪಾತ್ರಗಳು ಗಮನ ಸೇಳಿಯುವಂತಿವೆ. ಪ್ರತಿ ಸೀನ್​, ಫ್ರೇಮ್​ ನೋಡಿದ್ರೇ ಸಿನಿಮಾ ರೀತಿಯಲ್ಲೇ ದೊಡ್ಡಮಟ್ಟದ ಬಂಡವಾಳ ಹಾಕಿದ್ದಾರೆ. ನಿನಗಾಗಿ ಮೊದಲ ದಿನ ಭರ್ಜರಿಯಾಗಿಯೇ ಮೂಡಿಬಂದಿದ್ದು, ಇದೇ ಕ್ವಾಲಿಟಿ ಉಳಿಸಿಕೊಂಡು ಹೋದ್ರೇ ಟಾಪ್​ ಧಾರಾವಾಹಿ ಆಗೋದ್ರಲ್ಲಿ ಡೌಟ್​ ಇಲ್ಲ. ಸದ್ಯ ಮುಂದಿನ ದಿನಗಳಲ್ಲಿ ವೀಕ್ಷಕರು ಈ ಧಾರಾವಾಹಿಯನ್ನು ನಂಬರ್​ 1​ ಸ್ಥಾನಕ್ಕೆ ತರುತ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾವನ್ನೇ ಮೀರಿಸುತ್ತೆ ಈ ಸೀರಿಯಲ್​​.. ದಿವ್ಯಾ ಉರುಡುಗ ನಟನೆಗೆ ಕನ್ನಡಿಗರು ಕೊಟ್ರು ಫುಲ್​ ಮಾರ್ಕ್ಸ್​​!

https://newsfirstlive.com/wp-content/uploads/2024/05/colors-kannada1.jpg

Load More