/newsfirstlive-kannada/media/post_attachments/wp-content/uploads/2025/04/RAHUL-GANDHI.jpg)
ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತ ದಿಟ್ಟ ನಿಲುವು ತಳೆದಿದೆ. ಉಗ್ರರ ದಾಳಿಗೆ ಪ್ರತ್ಯುತ್ತರದ ಆಕ್ರೋಶವು ಏಕಸ್ವರದಲ್ಲಿ ಕೇಳಿಸ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ಒಮ್ಮತದ ತೀರ್ಮಾನವೂ ಆಗಿದೆ.
ಕೇಂದ್ರ ಸರ್ಕಾರದ ಕ್ರಮಗಳಿಗೆ ಒಮ್ಮತದ ಒಪ್ಪಿಗೆ
ಭಾರತ ದುಃಖ ತಪ್ತದಲ್ಲಿದೆ.. ಕಾಶ್ಮೀರದಲ್ಲಿ ಹರಿದ ಅಮಾಯಕರ ರಕ್ತಕ್ಕೆ ಪ್ರತೀಕಾರ ಬೇಡ್ತಿದೆ. 140 ಕೋಟಿ ಭಾರತೀಯರ ಕಣ್ಣೀರು ಆಕ್ರೋಶವಾಗಿ ಸ್ಫೋಟಿಸ್ತಿದೆ. ಅಮಾಯಕ ಜೀವಗಳ ಬಲಿ ಪಡೆದ ಉಗ್ರರ ಹುಟ್ಟಡಗಲಿದೆ.. ಇದೇ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೀತು. ಈ ಸಭೆಯಲ್ಲಿ ಉಗ್ರರ ದಾಳಿಯಲ್ಲಿ ಎಲ್ಲಾ ಪಕ್ಷಗಳು ಒಕ್ಕೊರಲಾಗಿ ಖಂಡಿಸಿವೆ. ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ಬೆಂಬಲ ನೀಡುವುದಾಗಿ ತಿಳಿಸಿವೆ.
ಇದನ್ನೂ ಓದಿ: UPSC ಪಾಸ್ ಮಾಡಿದ ಚಂಬಲ್ ಡಾಕು ಮೊಮ್ಮಗ.. ಇವರ ಸಾಧನೆ ಸ್ಟೋರಿ ಕೇಳಿದ್ರೆ ನೀವು ಶಾಕ್ ಆಗ್ತೀರಾ!
ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರ ವಿರುದ್ಧ ಭಾರತದ ರಾಜಕಾರಣಿಗಳು ತೊಡೆತಟ್ಟಿದ್ದಾರೆ. ಎಲ್ಲಾ ವಿಚಾರಗಳಲ್ಲೂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ಕೇಂದ್ರ ಸರ್ಕಾರ ಹಾಗೂ ವಿಪಕ್ಷ ನಾಯಕರು ಇದೀಗ ಏಕತೆಯ ಮಂತ್ರ ಜಪಿಸಿದ್ದಾರೆ. ಈ ಮೂಲಕ ದೇಶದ ಭದ್ರತೆ, ಏಕತೆ, ಸುರಕ್ಷತೆಯ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಲಾಯ್ತು. ಈ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಕ್ಕೂ ನಾವು ಬದ್ಧ ಅಂತ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!
ಸರ್ವ ಪಕ್ಷಗಳ ಸಭೆಯಲ್ಲಿ ಭಾಗಿಯಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಭೆಯಲ್ಲಿ ಎಲ್ಲರೂ ಖಂಡಿಸಿದ್ರು ಯಾವುದೇ ಕ್ರಮ ಕೈಗೊಳ್ಳಲು ವಿರೋಧ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ ರಾಹುಲ್ ಗಾಂಧಿ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆ ಪ್ರಯತ್ನಗಳ ಬಗ್ಗೆ ಚರ್ಚೆಯಾಗಿದ್ದು, ಸರ್ಕಾರ ಯಾವುದೇ ಕ್ರಮಕೈಗೊಂಡರೂ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಸಿಂಧು ನದಿ ನೀರಿನ ಒಪ್ಪಂದ ರದ್ದುಗೊಳಿಸಿರುವ ಬಗ್ಗೆ ಭಾರತ, ಪಾಕಿಸ್ತಾನಕ್ಕೆ ಪತ್ರದ ಮುಖೇನ ಮಾಹಿತಿ ನೀಡಿದೆ. ಸಿಂಧು ನದಿ ನೀರು ಹಂಚಿಕೆ ಒಪ್ಪಂದ ರದ್ದು ಬಗ್ಗೆ ಮಾಹಿತಿ ನೀಡಿ ಪಾಪಿಸ್ತಾನಕ್ಕೆ ಟಕ್ಕರ್ ಕೊಟ್ಟಿದೆ. ಇಡೀ ಪಾಕ್ಗೆ ಅನ್ನ ನೀಡುವ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಕ್ಕೆ ಸಿಂಧೂ ಹರಿಯಿದಿದ್ರೆ ಬಿಕಾರಿ ದೇಶ ಇನ್ನಷ್ಟು ಬಿಕ್ಕಲಿದೆ. ಸದ್ಯ ಉಗ್ರರನ್ನ ಮಟ್ಟಹಾಕಲು ಮೋದಿ ಪಣ ತೊಟ್ಟಿದ್ದು, ಪಾಕಿಸ್ತಾನಕ್ಕೆ ಸರಿಯಾಗಿ ಬುದ್ದಿ ಕಲಿಸುವ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: UPSC ಪಾಸ್ ಮಾಡಿದ ಚಂಬಲ್ ಡಾಕು ಮೊಮ್ಮಗ.. ಇವರ ಸಾಧನೆ ಸ್ಟೋರಿ ಕೇಳಿದ್ರೆ ನೀವು ಶಾಕ್ ಆಗ್ತೀರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ