newsfirstkannada.com

ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಕೆಲಸಕ್ಕೆ ಫುಲ್ ಫಿದಾ​​; ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ನೆಟ್ಟಿಗರು..!

Share :

Published August 4, 2024 at 1:17pm

Update August 4, 2024 at 5:14pm

    ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ದಿಟ್ಟ ಮಹಿಳೆ ಅಕ್ಕ ಅನು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತೆ ಅನು ವಿಡಿಯೋ

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ಈ ಕೆಚ್ಚೆದೆಯ ಕನ್ನಡತಿ

ಕನ್ನಡತಿ ‘ಅಕ್ಕ ಅನು’ ಯಾರಿಗೆ ಗೊತ್ತಿಲ್ಲ ಹೇಳಿ? ಸೋಷಿಯಲ್​ ಮೀಡಿಯಾ ಬಳಕೆದಾರರು ಇವರನ್ನು ಪ್ರತಿ ದಿನ ನೋಡಿರುತ್ತಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅಕ್ಕ ಅನು ಸುದ್ದಿಯಲ್ಲಿ ಇರುತ್ತಾರೆ. ಸರ್ಕಾರಿ ಶಾಲೆ, ದೇವಾಲಯ ಸೇರಿದಂತೆ ಇತರೆ ಪಾರಂಪರಿಕ ತಾಣಗಳಿಗೆ ಹೋಗಿ ಸ್ವಚ್ಛತೆ ಮತ್ತು ಪುನರುಜ್ಜೀವನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Filmfare Award: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಒಟ್ಟು 6 ಪ್ರಶಸ್ತಿಗಳು..!

ಈ ಕುರಿತ ಹಲವು ವಿಡಿಯೋಗಳನ್ನು ಅಕ್ಕ ಅನು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಅನು ಅವರು ಮಾಡುವ ಕೆಲಸಕ್ಕೆ ಸಾಕಷ್ಟು ಜನ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಿರುತ್ತಾರೆ. ಇನ್ನೂ ಕೆಲವರು ಅವರ ಕೆಲಸಕ್ಕೆ ಅಡೆ-ತಡೆ ಉಂಟು ಮಾಡ್ತಿರುತ್ತಾರೆ. ಆದರೆ ಅವರು ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ತಮ್ಮದೆಯಾದ ಕೆಲಸದಲ್ಲಿ ಬ್ಯುಸಿ ಆಗಿರುತ್ತಾರೆ.

ಕೆಚ್ಚೆದೆಯ ಕನ್ನಡತಿ ಅಂತಲೇ ಕರೆಸಿಕೊಳ್ಳುವ ಅಕ್ಕ ಅನು ಅವರು ಈ ಬಾರಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೀಸಾಗರಕ್ಕೆ ಹೋಗಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳಿಗಾಗಿ ಶಾಲೆಯ ಸುತ್ತ ಮುತ್ತ ಸ್ವಚ್ಛತೆ ಅಭಿಮಾನ ಕೈಗೊಂಡಿದ್ದಾರೆ. ಮಕ್ಕಳು ಕೇವಲ ಓದಿದರೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಶಿಕ್ಷಣದ ಜೊತೆಗೆ ಹೇಗೆ ಸ್ವಚ್ಛತೆಯಿಂದ ಇರಬೇಕು ಎಂಬುವುದನ್ನು ಅವರು ತಿಳಿಸಿಕೊಟ್ಟಿದ್ದಾರೆ. ತಮ್ಮದೇಯಾದ ಗುಂಪನ್ನು ಇಟ್ಟುಕೊಂಡು ಸರ್ಕಾರಿ ಪ್ರೌಢಶಾಲೆ ಲಕ್ಷ್ಮೀಸಾಗರಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಧ್ರುವಾ ಸರ್ಜಾಗೆ ಈ ವಿಚಾರದಲ್ಲಿ ಭಯವಂತೆ! ‘ಆ್ಯಕ್ಷನ್​ ಪ್ರಿನ್ಸ್​’ ಅಂತ ಕರಿಬೇಡಿ ಎಂದಿದ್ದೇಕೆ?

ಇದೇ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಅಲ್ಲಿರುವ ಶಾಲೆಗಳ ಅಭಿವೃದ್ಧಿ ಬಗ್ಗೆ ಗಮನಹರಿಸಿ, ಉತ್ತಮ ನಾಯಕತ್ವದೊಂದಿಗೆ ಸಮಾಜಸೇವೆ ಮಾಡುತ್ತಿರುವ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ, ತಾಯಿ ಚಾಮುಂಡೇಶ್ವರಿ ನಿಮಗೆ ಒಳ್ಳೆಯದು ಮಾಡಲಿ, ಈಗಿನ ಕಾಲದ ಮಾದರಿ ಹೆಣ್ಣು, ಹಸನ್ಮುಖಿ ಅನು ಅಕ್ಕ ನಿಮ್ಮ ಮಹತ್ಕಾರ್ಯಕ್ಕೆ ಧನ್ಯವಾದ ಕರುಣಾಮಯಿ, ನೀವು ಏನೇ ಕೆಲಸ ಮಾಡಿದ್ದರೂ ನಿಮ್ಮ ಹಿಂದೆ ನಾವಿದ್ದೇವೆ ಮುನ್ನುಗ್ಗಿ ಅಂತ ಕಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಕೆಲಸಕ್ಕೆ ಫುಲ್ ಫಿದಾ​​; ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ನೆಟ್ಟಿಗರು..!

https://newsfirstlive.com/wp-content/uploads/2024/08/akka.jpg

Load More