ಅಯ್ಯೋ ತಗಡೇ.. ಮತ್ತೆ ಯಾಕೆ ಗುಮ್ಮಿಸಿಕೊಳ್ತೀಯಾ? ಉಪ್ಪಿ UI ಹೊಸ ಸಾಂಗಲ್ಲಿ ದರ್ಶನ್​​ ಡೈಲಾಗ್​​!

author-image
Veena Gangani
Updated On
ಅಯ್ಯೋ ತಗಡೇ.. ಮತ್ತೆ ಯಾಕೆ ಗುಮ್ಮಿಸಿಕೊಳ್ತೀಯಾ? ಉಪ್ಪಿ UI ಹೊಸ ಸಾಂಗಲ್ಲಿ ದರ್ಶನ್​​ ಡೈಲಾಗ್​​!
Advertisment
  • ಉಪೇಂದ್ರ UI ಸಿನಿಮಾದ ಟ್ರೋಲ್​ ಸಾಂಗ್​ ರಿಲೀಸ್
  • ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್​ ಎಂದು ಸಾಂಗ್
  • ಇತ್ತೀಚೆಗೆ ಟ್ರೋಲ್​ ಆದ ಅಷ್ಟೂ ಡೈಲಾಗ್​ಗಳು ಬಳಕೆ

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರೋ ‘ಯುಐ’ ಚಿತ್ರದ ಲೇಟೆಸ್ಟ್‌ ಸಾಂಗ್ ರಿಲೀಸ್ ಆಗಿದೆ. ಈ ಹಿಂದೆ ಚೀಪ್ ಚೀಪ್ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದ ಉಪ್ಪಿ ಈಗ ಟ್ರೋಲ್​ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆದ ಪದಗಳನ್ನೇ ಹಾಡಿನ ಸಾಹಿತ್ಯ ರಚನೆ ಮಾಡಿರೋದು ಇದರ ಸ್ಪೆಷಲ್‌.

ಇದನ್ನು ಓದಿ: VIDEO: ಮಗ, ಸೊಸೆಯ ಭವಿಷ್ಯಕ್ಕಾಗಿ ನೀತಾ ಅಂಬಾನಿ ಅದ್ಭುತ ನೃತ್ಯ ಪ್ರದರ್ಶನ; ಏನಿದರ ವಿಶೇಷ?

publive-image

ಹೌದು, ರಿಲೀಸ್​ ಆದ ಹೊಸ ಸಾಂಗ್​ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಟ್ರೋಲ್​ ಆಗಿದ್ದ ಪದಗಳನ್ನೇ ಬಳಸಿ ಹಾಡು ರಚಿಸಲಾಗಿದೆ. ಇನ್ನು ಕನ್ನಡ ವರ್ಷನ್​ ಗೀತೆಗೆ ನರೇಶ್ ಕುಮಾರ್ ಎಂಬುವವರು ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಹಾಗೂ ಅಜನೀಶ್​ ಹಾಡಿದ್ದಾರೆ.

ಸದ್ಯ ಈ ಸಾಂಗ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಹಾಡಿನಲ್ಲಿ ಬಳಸಿದ ಟ್ರೋಲ್​ ಪದಗಳು ಇಲ್ಲಿವೆ. ಹಾರ್​ ಹೀರೋಗಳು, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್, ಹೆಂಗ್ ಪುಂಗ್ಲಿ, ಆಲ್​ರೈಟ್​ ಮುಂದಕ್ಕೆ ಹೋಗೋಣ, ಜೋಡೆತ್ತು, ರಾಜ್ಯಕ್ಕೆ ಖುಷಿ ಕೊಡೋ ಸುದ್ದಿ, ಅಕ್ಕ ಏನಂತೀರಾ? ನಾ ಡ್ರೈವರ್ ತಗಡು, ಗುಮ್ಮಿಸಿಕೊಂಡು, ಕಂಜ್ರಾಜಲೇಷನ್ ಬ್ರದರ್, ಹೀರೋ ಎಲ್ಲಿದ್ದಿಯಪ್ಪಾ? (ನಿಖಿಲ್ ಎಲ್ಲಿದ್ದಿಯಪ್ಪಾ), ನಾನು ನಂದಿನಿ, ಗೂಸ್​ಬಂಪ್ಸ್, ​ ಡೋಲೋ 650.. ಬಿಸಿ ರಾಗಿ ಮುದ್ದೆ, ಬಡವರ ಮಕ್ಳು ಬೆಳಿಬೇಕು, ಸುಂದರನ ಸನ್ಯಾಸಿ, (ಅನ್ಯಾಯಕಾರಿ ಬ್ರಹ್ಮ.. ಸುಂದರನ ಸಂನ್ಯಾಸಿ ಮಾಡಬಹುದೇ) ಫ್ರೀ ಫ್ರೀ ಫ್ರೀ ಎಲ್ಲಾ ಫ್ರೀ ಚಂದ್ರು ಇನ್ನು ಹಲವು ಟ್ರೋಲ್‌ ಶಬ್ಧಗಳನ್ನೇ ಈ ಸಾಂಗ್​ನಲ್ಲಿ ಬಳಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

Advertisment