ಫನ್ ಬಕೆಟ್ ಭಾರ್ಗವ್‌ಗೆ ಬಿಗ್ ಶಾಕ್‌.. 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್; ಕಾರಣವೇನು?

author-image
admin
Updated On
ಫನ್ ಬಕೆಟ್ ಭಾರ್ಗವ್‌ಗೆ ಬಿಗ್ ಶಾಕ್‌.. 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್; ಕಾರಣವೇನು?
Advertisment
  • ತೆಲುಗಿನ ಫನ್ ಬಕೆಟ್‌ ಭಾರ್ಗವ್‌ಗೆ ಕಠಿಣ ಜೈಲು ಶಿಕ್ಷೆ ಪ್ರಕಟ
  • ಕಾಮಿಡಿ ವಿಡಿಯೋ ಮೂಲಕ ಫೇಮಸ್‌ ಆಗಿದ್ದ ಭಾರ್ಗವ್‌ಗೆ ಜೈಲು
  • ವಿಶಾಖಪಟ್ಟಣಂನ ಪೋಕ್ಸೋ ಕೋರ್ಟ್‌ನಿಂದ ಮಹತ್ವದ ಆದೇಶ

ಹೈದರಾಬಾದ್: ಇತ್ತೀಚೆಗೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ರೀಲ್ಸ್‌ಗಳು ರಾತ್ರೋರಾತ್ರಿ ಹಲವರನ್ನ ಸೆಲೆಬ್ರಿಟಿಗಳನ್ನಾಗಿ ಮಾಡಿ ಬಿಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ವಿಡಿಯೋಗಳನ್ನು ಬಿಟ್ಟು ಸಾಕಷ್ಟು ಖ್ಯಾತಿ ಗಳಿಸುತ್ತಿದ್ದಾರೆ.

ಈ ಸೆಲೆಬ್ರಿಟಿಗಳದ್ದು ತೆರೆ ಮೇಲೆ ಒಂದು ಮುಖ ಆದ್ರೆ, ತೆರೆ ಹಿಂದಿನದ್ದೂ ಕರಾಳ ಮುಖ. ಹೀಗೆ ಫೇಮಸ್ ಆಗಿದ್ದ ತೆಲುಗಿನ ಫನ್ ಬಕೆಟ್‌ ಭಾರ್ಗವ್‌ಗೆ ಇದೀಗ ಕಠಿಣ ಜೈಲು ಶಿಕ್ಷೆಯಾಗಿದೆ. ಬರೋಬ್ಬರಿ 20 ವರ್ಷ ಕೋರ್ಟ್​ ಈತನಿಗೆ ಸೆರೆವಾಸದ ಸಜೆ ನೀಡಿದೆ.

‘ಫನ್ ಭಾರ್ಗವ್​’ ಹುಡುಗಾಟ!
ಭಾರ್ಗವ್‌, ತೆಲುಗು ಯೂಟ್ಯೂಬರ್. ಟಿಕ್‌ಟಾಕ್‌ನಲ್ಲಿ ಕಾಮಿಡಿ ವಿಡಿಯೋ ಮಾಡುವ ಮೂಲಕ ಖ್ಯಾತಿಗಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಇವರ ಹೆಸರಿಲ್ಲಿ ‘ಫನ್ ಬಕೆಟ್ ಭಾರ್ಗವ್’ ಅನ್ನೋ ಚಾನೆಲ್ ಇದೆ.

publive-image

ಭಾರ್ಗವ್ ಮೇಲಿರುವ ಆರೋಪ ಏನು?
ಫನ್ ಭಾರ್ಗವ್ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪವಿದ್ದು, ಪ್ರಕರಣ ದಾಖಲಾಗಿತ್ತು. 2021ರಲ್ಲಿ ಭಾರ್ಗವ್ ಟಿಕ್ ಟಾಕ್‌ ವಿಡಿಯೋಗಳನ್ನು ಮಾಡುವ ನೆಪದಲ್ಲಿ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಅನ್ನೋ ಆರೋಪದಲ್ಲಿ ಕೇಸ್ ದಾಖಲಿಸಲಾಗಿತ್ತು.

ತೆಲುಗು ಯೂಟ್ಯೂಬರ್ ಫನ್ ಬಕೆಟ್ ಭಾರ್ಗವ್​, ಬಾಲಕಿಯನ್ನ ತನ್ನ ಮನೆಗೆ ಕರೆದೊಯ್ದು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂತ್ರಸ್ತ ಬಾಲಕಿಗೆ ವಿಷಯ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದರಂತೆ. ಬಾಲಕಿ ಗರ್ಭಿಣಿಯಾದ ಬಳಿಕ ಆಕೆಯ ತಾಯಿ ದೂರು ನೀಡಿದ್ದಾರೆ.

ಇದನ್ನೂ ಓದಿ: BBK11: ರಜತ್​, ಭವ್ಯಾಗೆ ಕಾದಿದೆ ಮಾರಿಹಬ್ಬ.. ಕಿಚ್ಚ ಸುದೀಪ್​ ಕೈಗೆ ಸಿಕ್ಕಿ ಬಿದ್ರು! ಇಬ್ಬರು ಮಾಡಿದ ತಪ್ಪೇನು? 

14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ದಿಶಾ ಕಾಯ್ದೆ, ಫೋಕ್ಸೋ ಕಾಯ್ದೆಯಡಿ ಭಾರ್ಗವ್ ಬಂಧನವಾಗಿತ್ತು. ವಿಚಾರಣೆ ನಡೆಸಿರುವ ವಿಶಾಖಪಟ್ಟಣಂನ ಪೋಕ್ಸೋ ಕೋರ್ಟ್ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಕಠಿಣ ಜೈಲು ಶಿಕ್ಷೆಯ ಜೊತೆಗೆ ಫನ್ ಭಾರ್ಗವ್‌ ಅವರು ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment