ಈ ಯಂಗ್​ ಪ್ಲೇಯರ್​ ಕ್ವಾಟ್ಲೆಯಿಂದ ಹಿಟ್​ಮ್ಯಾನ್​ಗೆ ಟೆನ್ಷನ್.. ಕಂಟ್ರೋಲ್ ಮಾಡೋಕೆ ಆಗ್ತಿಲ್ಲವೆಂದ ರೋಹಿತ್ ಶರ್ಮಾ!

author-image
Bheemappa
Updated On
ಟಿ20 ಕ್ರಿಕೆಟ್​​ ನಿವೃತ್ತಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ರೋಹಿತ್.. ಏನದು?
Advertisment
  • ಆನ್​​ಫೀಲ್ಡ್, ಹಾಫ್​ಫೀಲ್ಡ್​ನಲ್ಲೂ ರೋಹಿತ್​ಗೆ ಕಾಟ ಕೊಡ್ತಾರೆ
  • ತಂಡದ ಎಲ್ಲ ಆಟಗಾರರನ್ನು ಕಂಟ್ರೋಲ್ ಮಾಡೋ ರೋಹಿತ್
  • ಯಂಗ್ ಪ್ಲೇಯರ್ ಕುರಿತು ಎಳೆ, ಎಳೆಯಾಗಿ ಹೇಳಿದ ಕ್ಯಾಪ್ಟನ್

ನಾಯಕತ್ವದ ಮುಂದೆ ರೋಹಿತ್​ ಶರ್ಮಾ ಮುಂದೆ ಮತ್ತೊಬ್ಬರಿಲ್ಲ. ಎಂತಹ ಟಫ್​ ಸಿಚುವೇಶನ್​​ನಲ್ಲೂ ಆಟಗಾರರು ಹಾಗೂ ತಂಡವನ್ನ ಕೂಲ್​​ ಆಗಿ ಹ್ಯಾಂಡಲ್ ಮಾಡ್ತಾರೆ. ಆದ್ರೆ ತಂಡದಲ್ಲಿನ ಆ ಒಬ್ಬ ಆಟಗಾರರನ್ನ ಮಾತ್ರ ಹಿಟ್​​​​​ಮ್ಯಾನ್​ಗೆ ಕಂಟ್ರೋಲ್ ಮಾಡೋಕೆ ಆಗ್ತಿಲ್ಲ. ಆ ಪ್ಲೇಯರ್ ಯಾರು ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಭೀಕರ ಘಟನೆ.. ಎಲ್ರೂ ನೋಡ್​ ನೋಡ್ತಿದ್ದಂತೆ ಟೆರಸ್​ ಮೇಲಿನಿಂದ ಬಿದ್ದ ಮಹಿಳೆ

publive-image

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​​ ಶರ್ಮಾಗೆ ಆನ್​​​ ಫೀಲ್ಡ್​​​ನಲ್ಲಿ ಎಲ್ಲ ಆಟಗಾರರನ್ನ ಈಸಿಯಾಗಿ ಕಂಟ್ರೋಲ್ ಮಾಡ್ತಾರೆ. ಒಬ್ಬರನ್ನ ಹೊರತಪಡಿಸಿ. ಆ ಆಟಗಾರ ಯಾರು ಅಂದ್ರೆ ರಿಷಬ್​ ಪಂತ್​​. ಹೌದು, ಎಲ್ಲರನ್ನ ಸಲೀಸಾಗಿ ಹ್ಯಾಂಡಲ್ ಮಾಡುವ ಕ್ಯಾಪ್ಟನ್​ ರೋಹಿತ್​​​​​​, ಪಂತ್​ರನ್ನ ಮಾತ್ರ ಆನ್​​ಫೀಲ್ಡ್​​ನಲ್ಲಿ ಮಾತ್ರ ಕಂಟ್ರೋಲ್​ ಮಾಡೋಕೆ ಆಗಲ್ಲ. ಯಾಕಂದ್ರೆ ಪಂತ್​ ಒಂದಿಲ್ಲೊಂದು ಕ್ವಾಟ್ಲೆ ಕೊಡ್ತಾನೆ ಇರ್ತಾರೆ.

ಇದನ್ನೂ ಓದಿ:ಹಾಡಹಗಲೇ ಕಾರಿನಲ್ಲಿ ಮಹಿಳೆಯನ್ನು ಎಳೆದೊಯ್ದ ಪಾಪಿಗಳು.. ಗಂಡನ ಕಡೆಯವರಿಂದ ನಡೀತಾ ಕೃತ್ಯ?

publive-image

ಎಂತಹ ಸೀರಿಯಸ್​​​​ ಸಂದರ್ಭವೇ ಆಗಿರ್ಲಿಲ್ಲ. ಪಂತ್​ ತಲೆಹರಟೆ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲ. ಇದು ಬರೀ ಆನ್​​ಫೀಲ್ಡ್​​ಗೆ ಸೀಮಿತವಾಗಿಲ್ಲ. ಆಫ್​​ ದಿ ಫೀಲ್ಡ್​ನಲ್ಲೂ ಅದೇ ಕಥೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಸುಖಾಸುಮ್ಮನೇ ಹಿಟ್​ಮ್ಯಾನ್ ಕಾಲೆಳೆಯೋದು, ಇಲ್ಲ ಏನಾದ್ರು ಜೋಕ್ಸ್​​ ಹೇಳಿ, ರೇಗಿಸ್ತಾರೆ. ಆ ಮಟ್ಟಿಗೆ ಇಬ್ಬರ ಬಾಂಧವ್ಯ ಗಟ್ಟಿಯಾಗಿದೆ. ಇನ್ನೊಂದೆಡೆ ಪಂತ್​ರ ಈ ಅತಿಯಾದ ತಲೆಹರಟೆ ನನಗೆ ದೊಡ್ಡ ಟೆನ್ಷನ್​​​​​​ ಎಂದು ರೋಹಿತ್​​ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment