/newsfirstlive-kannada/media/post_attachments/wp-content/uploads/2025/05/Subbanna_Ayyappan_1.jpg)
ಮೈಸೂರು: ನಿಗೂಢವಾಗಿ ಮೃತಪಟ್ಟಿದ್ದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ನಿವೃತ್ತ ನಿರ್ದೇಶಕ ಮತ್ತು ಪದ್ಮಶ್ರೀ ಪುರಸ್ಕೃತ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ (70) ಅವರ ಅಂತ್ಯಕ್ರಿಯೆ ಬಂಬೂಬಜಾರ್​ ಬಳಿಯ ಜೋಡಿ ತೆಂಗಿನಮರದ ಮುಕ್ತಿಧಾಮದಲ್ಲಿ ನಿನ್ನೆ ಸಂಜೆ ನಡೆಯಿತು.
ಕೆಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ ಅವರ ಪಾರ್ಥಿವ ಶರೀರವನ್ನು ವಿಶ್ವೇಶ್ವರನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಸಂಕಲ್ಪ ಬಂಸತ ಅಪಾರ್ಟ್​​ಮೆಂಟ್​ ನಿವಾಸಕ್ಕೆ ತರಲಾಯಿತು. ಇಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹೊದಿಸಿ, ರಾಷ್ಟ್ರಗೀತೆ ನುಡಿಸಿ ಮೂರು ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ಸಿನಿಮಾದಿಂದ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ರಾಕೇಶ್ ಪೂಜಾರಿ; ಅಸಲಿಗೆ ಏನಾಯ್ತು?
/newsfirstlive-kannada/media/post_attachments/wp-content/uploads/2025/05/Subbanna_Ayyappan.jpg)
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ನಿವೃತ್ತ ನಿರ್ದೇಶಕ ಮತ್ತು ಪದ್ಮಶ್ರೀ ಪುರಸ್ಕೃತ ಪ್ರೋ.ಸುಬ್ಬಣ್ಣ ಅಯ್ಯಪ್ಪನ್ (70) ನಿಗೂಢವಾಗಿ ಮೃತಪಟ್ಟಿದ್ದರು. ಮೇ 7 ರಂದು ನಾಪತ್ತೆ ಆಗಿದ್ದ ಪ್ರೋ.ಸುಬ್ಬಣ್ಣ ಅಯ್ಯಪ್ಪನ್, ಮೇ 10 ರಂದು ಶವವಾಗಿ ಪತ್ತೆ ಆಗಿದ್ದರು, ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಅವರ ಮೃತದೇಹವು ಪತ್ತೆಯಾಗಿತ್ತು. ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ಮೇ 10 ರಂದು ಸಂಜೆ ನದಿಯಲ್ಲಿ ಸುಬ್ಬಣ್ಣ ಅಯ್ಯಪ್ಪನ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಅದು ವಿಜ್ಞಾನಿ ಮೃತದೇಹ ಎಂದು ಗುರುತಿಸಿದ್ದರು. ಇನ್ನು ಕಾವೇರಿ ನದಿ ದಡದಲ್ಲಿ ನಿಲ್ಲಿಸಲಾಗಿದ್ದ ಅವರ ಬೈಕ್​ಅನ್ನು ಸಹ ಪತ್ತೆ ಮಾಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us