ದಲಿತ CM ಕೂಗಿಗೆ ಮತ್ತೆ ಮರುಜನ್ಮ.. ಸ್ಫೋಟಕ ಹೇಳಿಕೆ ಕೊಟ್ಟ ಪರಮೇಶ್ವರ್..!

author-image
Harshith AS
Updated On
ದಲಿತ CM ಕೂಗಿಗೆ ಮತ್ತೆ ಮರುಜನ್ಮ.. ಸ್ಫೋಟಕ ಹೇಳಿಕೆ ಕೊಟ್ಟ ಪರಮೇಶ್ವರ್..!
Advertisment
  • CM ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಒಳಗೊಳಗೆ ನಡೆಯುತ್ತಿದೆ ಫೈಟ್?
  • KPCC ಮಾಜಿ ಸಾರಥಿ ಪರಮೇಶ್ವರ್ ಆಸೆ ನನಸಾಗುತ್ತಾ?
  • ಪರಂ ಡಿ.ಕೆ.ಶಿವಕುಮಾರ್​ಗೆ ಕೊಟ್ಟ ಟಾಂಗ್​ ಏನು ಗೊತ್ತಾ?

ರಾಜ್ಯದಲ್ಲಿ ಕಾಂಗ್ರೆಸ್​​​ ಅಧಿಕಾರಕ್ಕೆ ಬಂದು ತಿಂಗಳಾಗಿಲ್ಲ. ಆಗಲೇ ದಲಿತ ಸಿಎಂ ಕೂಗು ಜೋರಾಗ್ತಿದೆ. ಗ್ಯಾರಂಟಿಗಳಲ್ಲಿ ಸರ್ಕಾರ ಬ್ಯುಸಿ ಆಗಿದ್ದು, ಈ ಮಧ್ಯೆ ಪರಮೇಶ್ವರ್​​​ ಮತ್ತೊಮ್ಮೆ ಸಿಎಂ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ನಾನು ಯಾಕೆ ಸಿಎಂ ಆಗಬಾರದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಮಗೆ ಅವಕಾಶ ತಪ್ಪಿಸಿದ್ದಾರೆ ಅಂತ ಹೇಳಿದ್ದಾರೆ. ಅಲ್ಲದೆ, 2018ರಲ್ಲಿ ಕಾಂಗ್ರೆಸ್​ಗೆ ಸೋಲಿನ ವಿಶ್ಲೇಷಣೆ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ಸಂದೇಶಗಳನ್ನ ರವಾನಿಸಿದೆ. ಅಹಿಂದ ಸಮುದಾಯದ ಅನಭಿಷಿಕ್ತ ನಾಯಕ ಪಟ್ಟ ಸಿದ್ದರಾಮಯ್ಯಗೆ ಗಟ್ಟಿ ಆಗಿದೆ. ಇದೀಗ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್​​ ಸಿಂಹಾಸನ ಏರಿದೆ. ಸಿದ್ದರಾಮಯ್ಯ ಸಿಎಂ ಆಗಿ, ಡಿಕೆಶಿ ಡಿಸಿಎಂ ಆಗಿದ್ದೂ ಆಯ್ತು. ಇದೇ ಹೊತ್ತಲ್ಲೇ ದಲಿತ ಸಿಎಂ ವಿವಾದ ತಣ್ಣಗೆ ನಿದ್ದೆಗೆ ಜಾರಿತ್ತು. ಆದ್ರೆ, ಇದೀಗ ಮತ್ತೆ ದಲಿತ ಸಿಎಂ ಕೂಗನ್ನ ಪರಮೇಶ್ವರ್​​ ಹೊರ ಹಾಕಿದ್ದಾರೆ.

publive-image

ದಲಿತ ಮುಖ್ಯಮಂತ್ರಿ ಆಸೆಗೆ ಮರುಜೀವ ತುಂಬಿದ ಪರಮೇಶ್ವರ್​​!

ರಾಜ್ಯ ಕಾಂಗ್ರೆಸ್‌ನ ಕನಸುಗಾರ ಪರಮೇಶ್ವರ್​​​ ಮತ್ತೆ ದಲಿತ ಸಿಎಂ ಕನಸನ್ನ ಬಿತ್ತಿದ್ದಾರೆ. ಪರಿಶಿಷ್ಟ ಸಮುದಾಯಗಳ ಸಹೋದರತ್ವ ಸಮಾವೇಶದಲ್ಲಿ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್, ತಾವು ಸಿಎಂ ಆಗಬೇಕು ಅಂತ ಪುನರುಚ್ಚರಿಸಿ, ದಶಕದ ಡ್ರೀಮ್​​ಗೆ ಜಾರಿದ್ದಾರೆ. 2018ರ ಸೋಲನ್ನ ಪಕ್ಷದ ನಾಯಕರಿಗೂ ನೆನಪಿಸಿದ್ದಾರೆ.

ನಾನು ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಪ್ರಶ್ನೆ?

ಯಾವಾಗಲೂ ನಾನೂ ಸಿಎಂ ಆಗಬೇಕು ಅಂತ ಹೇಳುತ್ತೇನೆ. ಯಾಕೆ ನಾನು ಮುಖ್ಯಮಂತ್ರಿ ಯಾಕೆ ಆಗಬಾರದಾ ಅಂತ ಪ್ರಶ್ನಿಸುವ ಮೂಲಕ ಪರಂ ಮತ್ತೊಮ್ಮೆ ಸಿಎಂ ಆಸೆ ಬಿಚ್ಚಿಟ್ಟಿದ್ದಾರೆ.. ನಮಗೆ ಅವಕಾಶಗಳನ್ನು ತಪ್ಪಿಸಿದ್ದಾರೆ ಅಂತ ಬೇಸರ ಹೊರಹಾಕಿದ್ರು.. ಅಲ್ಲದೆ, 2018ರ ಸೋಲು ಯಾಕಾಯ್ತು ಅನ್ನೋದಕ್ಕೆ ಕಾರಣ ಕೊಟ್ಟಿದ್ದಾರೆ.

publive-image

ಡಿಕೆಶಿಗೆ ಪರಮೇಶ್ವರ್ ಪರೋಕ್ಷ ಟಾಂಗ್!

ಸಿಎಂ ಕನಸನ್ನು ಬಿಚ್ಚಿಟ್ಟ ಕೆಪಿಸಿಸಿ ಮಾಜಿ ಸಾರಥಿ ಪರಮೇಶ್ವರ್​, ನನ್ನ ನೇತೃತ್ವದಲ್ಲಿ ಕಾಂಗ್ರೆಸ್ 9 ವರ್ಷದ ಬಳಿಕ ಅಧಿಕಾರಕ್ಕೆ ಬಂತು. ಆಗ ನನ್ನಿಂದ ಅಂತ ನಾನು ಹೇಳಿಕೊಂಡಿಲ್ಲ. ಆದರೆ ಇವಾಗ ನನ್ನ ಅಧ್ಯಕ್ಷತೆ ಯಲ್ಲಿ ಅಧಿಕಾರಕ್ಕೆ ಬಂತು ಅಂತ ಹೇಳಿಕೊಳ್ತಾರೆ ಎಂದು ಡಿಕೆಶಿಗೆ ಟಾಂಗ್ ಕೊಟ್ರು.

publive-image

ಇನ್ನು, 51 ಮೀಸಲು ಕ್ಷೇತ್ರಗಳ ಪೈಕಿ 37ರಲ್ಲಿ ಕಾಂಗ್ರೆಸ್​​​ ಗೆದ್ದಿದೆ. ಬೇರೆ ಕ್ಷೇತ್ರಗಳಲ್ಲೂ ನಮ್ಮ ಸಮುದಾಯ ಮತ ಹಾಕಿದ್ದು, 135 ಸೀಟು ಬರಲು ಕಾರಣ ಅಂತ ಹೇಳಿದ್ದಾರೆ. ಒಟ್ಟಾರೆ, ಪರಿಶಿಷ್ಟ ಸಮುದಾಯಗಳ ಸಮಾವೇಶದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗಿಗೆ ಮರುಜನ್ಮ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಕೂಗಿಗೆ ಯಾವೆಲ್ಲ ದನಿಗಳು ಧ್ವನಿಗೂಡಿಸ್ತಾವೆ ಅನ್ನೋದು ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment