/newsfirstlive-kannada/media/post_attachments/wp-content/uploads/2024/10/GTD-ON-MUDA-CASE.jpg)
ಮಾತು ಆಡಿದ್ರೆ ಹೋಯ್ತು ಮುತ್ತು ಒಡೆದ್ರೆ ಹೋಯ್ತು ಅಂತಾರೆ. ಹಾಗಂತ ಈ ಗಾದೆ ರಾಜಕಾರಣಿಗಳಿಗೆ ಗೊತ್ತಿಲ್ಲ ಅಂತಲ್ಲ. ಕೆಲವು ಚಾಣಾಕ್ಷ್ಯ ರಾಜಕಾರಣಿಗಳು ಗೊತ್ತಿದ್ರೂ ಬೇಕು ಅಂತಾನೇ ಬಾಣ ಬಿಡ್ತಾರೆ. ಕಾರಣ, ಅದ್ರಿಂದ ಅವರು ಅಂದುಕೊಂಡಿರೋ ಕಾರ್ಯವಾಗುತ್ತೆ. ಜೆಡಿಎಸ್‌ನ ಕಟ್ಟಾಳು, ದೇವೇಗೌಡರ ಆಪ್ತ ಜಿ.ಟಿ.ದೇವೇಗೌಡರು ಕೂಡ ಈಗ ಅದೇ ಹಾದಿಯಲ್ಲಿ ಇದ್ದಾರಾ ಅನ್ನೋ ಅನುಮಾನಗಳು ಸದ್ಯ ಮೂಡುತ್ತಿವೆ. ಅವರೊಬ್ಬ ಚಾಣಾಕ್ಷ್ಯ ರಾಜಕಾರಣಿ. ಹಾಗಾದ್ರೆ, ಸಿದ್ದು ರಾಜೀನಾಮೆ ಕೊಡೋ ಅಗತ್ಯವಿಲ್ಲ ಅಂತಾ ಹೇಳಿದ್ದೇಕೆ? ಗುಣಗಾನದ ಹಿಂದಿರೋ ತಂತ್ರ ಏನು? ಈ ಲೇಖನದಲ್ಲಿದೆ ಸಂಪೂರ್ಣ ವಿವರ.
ಇದನ್ನೂ ಓದಿ:50 ಕೋಟಿ ಸುಲಿಗೆ ಆರೋಪ ಕೇಸ್; ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್
ರಾಜಕಾರಣಿಗಳ ರಾಜೀನಾಮೆ ವಾಗ್ಬಾಣಗಳನ್ನ, ಸಿಡಿ ಗುಂಡುಗಳನ್ನ ಕೇಳಿದ್ಮೇಲೆ ಬಹುಶಃ ನಿಮಗೆ 2018ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಎಲೆಕ್ಷನ್ ನೆನಪಾದ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ಅದು ಇಡೀ ರಾಜ್ಯವಷ್ಟೇ ಅಲ್ಲ, ಇಡೀ ದೇಶವನ್ನೇ ಸೆಳೆದ ಕ್ಷೇತ್ರ. ಅದ್ಕೆ ಕಾರಣ, ಅಂದಿನ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ರಣಕಹಳೆ ಮೊಳಗಿಸಿದ್ರೆ, ದಳದ ರಣಕಲಿಯಾಗಿ ಜಿ.ಟಿ.ದೇವೇಗೌಡ ತೊಡೆ ತಟ್ಟಿದ್ದು.
ಇದನ್ನೂ ಓದಿ:‘ಸಿಎಂ ರಾಜೀನಾಮೆ ಅಗತ್ಯವಿಲ್ಲ’ ಎಂದಿದ್ದೇಕೆ ಜಿಟಿಡಿ? ಈ ಹೇಳಿಕೆ ಹಿಂದಿನ 5 ಸೀಕ್ರೆಟ್ ರಿವೀಲ್
ಅಕ್ಷರಶಃ ಅದು ರಣರಣ ಯುದ್ಧ. ಅಲ್ಲಿ ದಳದ ಅಭ್ಯರ್ಥಿಯಾಗಿ ಜಿಟಿಡಿ ಮುಂದೆ ಇದ್ರೂ ಹಿಂದೆ ಸಾರಥಿಗಳಾಗಿ ದೇವೇಗೌಡರು, ಕುಮಾರಸ್ವಾಮಿ ಅವರಂತಹ ದೈತ್ಯಶಕ್ತಿ ಇತ್ತು. ಒಳಗಿಂದೊಳಗೆ ಬಿಜೆಪಿಯ ಬಲವೂ ಸಿಕ್ಕಿತ್ತು. ಪರಿಣಾಮ ಆ ಯುದ್ಧದಲ್ಲಿ ಸಿದ್ದರಾಮಯ್ಯ ಸೋಲು ಕಾಣ್ತಾರೆ. ಸ್ವಂತ ಕ್ಷೇತ್ರದಲ್ಲಿ ಸೋತು ಮುಖಭಂಗಕ್ಕೆ ಒಳಗಾಗ್ತಾರೆ. ಆದ್ರೆ, ಅಂದು ಸಿದ್ದರಾಮಯ್ಯಗೆ ಸೋಲುಣಿಸಿದ್ದ ಜಿಟಿ ದೇವೇಗೌಡ್ರೆ ಇವತ್ತು ಅಗ್ನಿ ಪರೀಕ್ಷೆಯ ಟೈಮ್‌ನಲ್ಲಿ ಸಿದ್ದು ಪರ ಭರ್ಜರಿ ಬ್ಯಾಟ್ ಬೀಸ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿಯ ವರಪುತ್ರ ಅಂತಾ ಗುಣಗಾನ ಮಾಡ್ತಿದ್ದಾರೆ. ಹಾಗಾದ್ರೆ, ಅಂದು ಸಿದ್ದು ವಿರುದ್ಧ ಹೋರಾಡಿದ್ದ ಟೀಮ್ ಛಿದ್ರವಾಯ್ತಾ? ಇಲ್ಲವೇ ಇದರ ಹಿಂದೆ ಇನ್ನೇನಾದ್ರೂ ರಣತಂತ್ರ ಅಡಗಿಯಾ?
ಹೆಚ್‌ಡಿಕೆ ರಿಸೈನ್ ಮಾಡ್ತಾರಾ? ಜಿಟಿಡಿ ಬಾಂಬ್!
ದಿನಬೆಳಗಾದ್ರೆ ಮುಡಾ ಕೇಸ್‌ನಲ್ಲಿ ಸಿದ್ದು ರಾಜೀನಾಮೆ ಕೊಡಬೇಕು ಅಂತಾ ಬಿಜೆಪಿ ಜೆಡಿಎಸ್ ನಾಯಕರು ಆಗ್ರಹ ಮಾಡ್ತಿದ್ದಾರೆ. ಬೀದಿಗೆ ಇಳಿದು ಹೋರಾಟ ಮಾಡ್ತಿದ್ದಾರೆ. ಎರಡೂ ಪಕ್ಷಗಳು ಸೇರ್ಕೊಂಡ್ ಮೈಸೂರು ಚಲೋ ಮಾಡಿ ಮುಗಿಸಿದ್ದಾರೆ. ಸದ್ಯ, ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿದ್ದು ಸಿದ್ದರಾಮಯ್ಯ ಎ1, ಅವ್ರ ಪತ್ನಿ ಪಾರ್ವತಿ ಎ2 ಆಗಿದ್ದಾರೆ. ಬಟ್, ಇಂತಾ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್‌ನ ಹಿರಿಯ ಶಾಸಕರು ಆಗಿರೋ ಜಿ.ಟಿ.ದೇವೇಗೌಡ್ರು ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿದ್ದು ಅಷ್ಟೇ ಅಲ್ಲ, ಸಿದ್ದು ಸಮುಖದಲ್ಲಿಯೇ ಕುಮಾರಸ್ವಾಮಿಗೆ ಭಾರೀ ಠಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ:ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿ -ದಸರಾ ಕಾರ್ಯಕ್ರಮದಲ್ಲಿ ಸಿದ್ದು ಕೌಂಟರ್
ಜಿಟಿ ದೇವೇಗೌಡರು ಇಂದು ಆಡಿದ ಮಾತಲ್ಲಿ ಆವೇಶವಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ ಇತ್ತು. ಹಾಗೇ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಶಾಕ್ ಕಾಣಿಸುತ್ತಿತ್ತು. ಬಹುಶಃ ಇದನ್ನು ದೋಸ್ತಿಗಳಿಗೆ ಅರಗಿಸಿಕೊಳ್ಳೋದು ಖಂಡಿತವಾಗಿಯೂ ಕಷ್ಟ. ಮೈಸೂರು ದಸರಾ ಉದ್ಘಾಟನೆಯ ಸಮಾರಂಭದಲ್ಲಿಯೇ ಜಿಟಿಡಿ ಅವರು ಇಂತಾದೊಂದು ಬೆಂಕಿ ಭಾಷಣ ಮಾಡಿದ್ದಾರೆ.
FIR ಆದವರೆಲ್ಲ ರಾಜೀನಾಮೆ ಕೊಡ್ಬೇಕಾ?
ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ಆಗಿದೆ, ಈ ಕ್ಷಣದಲ್ಲಿಯೇ ರಾಜೀನಾಮೆ ಕೊಡಬೇಕು ಅಂತಾ ಇಷ್ಟು ದಿನಗಳ ಕಾಲ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೋದಲ್ಲಿ ಬಂದಲ್ಲಿ ಆಗ್ರಹ ಮಾಡಿದ್ದಾರೆ. ಆದರೆ, ಇದೀಗ ಜೆಡಿಎಸ್ ನಾಯಕರೇ ಆಗಿರೋ ಜಿಟಿಡಿ ಎಫ್‌ಐಆರ್ ಆದವರೆಲ್ಲ ರಾಜೀನಾಮೆ ಕೊಡಬೇಕಾ? ಅಂತಾ ಪ್ರಶ್ನೆ ಮಾಡಿದ್ದಾರೆ. ಹಾಗೊಂದು ವೇಳೆ ಎಫ್‌ಐಆರ್ ಆದವರೆಲ್ಲ ರಾಜೀನಾಮೆ ಕೊಡಬೇಕಾದಲ್ಲಿ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೂ ಉಳಿಯೋದಿಲ್ಲ ಅಂತಾ ಮಾತಿನ ಬಾಣ ಬಿಟ್ಟಿದ್ದಾರೆ.
ರಾಜ್ಯಪಾಲರು, ಜಡ್ಜ್ ರಿಸೈನ್ ಮಾಡಿ ಅಂದಿಲ್ಲ!
ಪ್ರತಿನಿತ್ಯ ಕಾಂಗ್ರೆಸ್ ನಾಯಕರು, ಸಚಿವ್ರುಗಳು ಸಿದ್ದರಾಮಯ್ಯ ಅವ್ರನ್ನು ಸಮರ್ಥನೆ ಮಾಡಿಕೊಳ್ತಾ ಇದ್ರು. ಅವರು ಹಸ್ತದವ್ರೇ ಆಗಿರೋದ್ರಿಂದ ಅದ್ರಲ್ಲಿ ವಿಶೇಷತೆ ಅನ್ನೋದದು ಏನೂ ಇರಲಿಲ್ಲ. ಯಾಕಂದ್ರೆ, ಹಾಗೇ ಸಮರ್ಥನೆ ಮಾಡಿಕೊಳ್ಳುವುದು ಅವರ ಕರ್ತವ್ಯ. ಆದರೆ, ಇದೀಗ ದಳಕೋಟೆಯ ಗಟ್ಟಿ ಗುಂಡಿಗೆಯ ಶಾಸಕರಾಗಿರೋ ಜಿಟಿಡಿ ಹೇಳಿದ್ದು ಖಂಡಿತವಾಗಿಯೂ ವಿಭಿನ್ನವಾಗಿ ಕಾಣಿಸ್ತಿದೆ. ಅದ್ರಲ್ಲಿಯೂ ಸಿದ್ದು ರಾಜೀನಾಮೆಯನ್ನು ರಾಜ್ಯಪಾಲರು ಕೇಳಿದ್ದಾರಾ? ನ್ಯಾಯಾಧೀಶರು ರಾಜೀನಾಮೆ ಕೊಡಿ ಅಂತಾ ಉಲ್ಲೇಖ ಮಾಡಿದ್ದಾರಾ? ಅಂತಾ ಬಿಜೆಪಿ, ಜೆಡಿಎಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಸಿದ್ದುಗೆ ಚಾಮುಂಡೇಶ್ವರಿ ಆಶೀರ್ವಾದವಿದೆ!
ಸಿಎಂ ಸಿದ್ದರಾಮಯ್ಯ ಪಾಲಿಗೆ ಇದು ಅಗ್ನಿ ಪರೀಕ್ಷೆಯ ಕಾಲ. ಇದರಲ್ಲಿ ಗೆದ್ದು ಬರುತ್ತಾರೋ ಇಲ್ವೋ ಅನ್ನೋದ್ ಗೊತ್ತಿಲ್ಲ. ಆದರೆ, ವಿರೋಧ ಪಕ್ಷದಲ್ಲಿರೋ ಕೆಲವು ಶಾಸಕರ, ನಾಯಕರ ಮನಸ್ಸನ್ನು ಸಿದ್ದು ಗೆದ್ದಿದ್ದಾರೆ ಅನ್ನೋದು ದಸರಾ ಉದ್ಘಾಟನೆ ವೇಳೆ ಜಿಟಿಡಿ ಅವರು ಆಡಿರೋ ಮಾತುಗಳೇ ಸಾಕ್ಷಿ. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಯಾವ ಪ್ರಮಾಣದಲ್ಲಿದೆ ಅನ್ನೋದನ್ನು ಜಿಟಿಡಿ ತೆರೆದಿಟ್ಟಿದ್ದಾರೆ. ಅದು 2006ರಲ್ಲಿ ಹೆಚ್‌ಡಿಕೆ ಸಿಎಂ, ಯಡಿಯೂರಪ್ಪ ಡಿಸಿಎಂ ಆಗಿದ್ದಾಗ ಸಿದ್ದು ಸೋಲಿಸಲು ಮಾಡಿದ್ದ ರಣತಂತ್ರದ ಕಥೆ ಹೇಳಿದ್ದಾರೆ. ಅವಾಗ ಸಿದ್ದು ಗೆದ್ದಾಗಲೇ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಇದ್ದಿದ್ದು ಸಾಬೀತಾಗಿತ್ತು ಅನ್ನೋ ಮಾತುಗಳನ್ನು ಹೇಳುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಜಿಟಿಡಿ ಬ್ಯಾಟಿಂಗ್‌ಗೆ ಕಾಂಗ್ರೆಸ್ ಸಚಿವರು ಫುಲ್ ಖುಷ್!
ಇಷ್ಟ್ ದಿನಗಳ ಕಾಲ ರಾಜ್ಯ ರಾಜಕೀಯ ಅನ್ನೋದ್ ಹೇಗಿತ್ತು ಅಂದ್ರೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ನ ಬಹುತೇಕ ನಾಯಕರು ಸಿಡಿಗುಂಡುಗಳನ್ನು ಹಾರಿಸ್ತಿದರು. ಮುಗಿಬಿದ್ದು ರಾಜೀನಾಮೆ ಕೊಡಲೇಬೇಕು ಅಂತಾ ಬಿಗಿ ಪಟ್ಟು ಹಾಕ್ತಿದ್ರು. ಅದ್ರಲ್ಲಿಯೂ ಕುಮಾರಸ್ವಾಮಿ ಡಿಸೆಂಬರ್ ಡೆಡ್‌ಲೈನ್ ಅನ್ನು ಕೊಟ್ಟಿದ್ರು. ಬಟ್, ಇದೀಗ ಜಿಟಿಡಿ ಸ್ಟೇಟ್‌ಮೆಂಟ್ ಕಾಂಗ್ರೆಸ್ ಪಾಲಿಗೆ ಶಕ್ತಿ ಸಿಕ್ಕಿದಂತಾಗಿದೆ. ವಿರೋಧ ಪಕ್ಷದಲ್ಲಿರೋ ನಾಯಕರಲ್ಲಿ ಕೆಲವ್ರು ಸಿದ್ದು ಪರ ಖಂಡಿತವಾಗಿಯೂ ಇದ್ದಾರೆ ಅನ್ನೋ ಸುಳಿವು ಸಿಕ್ಕಿದೆ. ಹೀಗಾಗಿಯೇ ಜಿಟಿಡಿ ಹೇಳಿದ್ದು ಸರಿ ಇದೆ, ಸರಿ ಇದೆ ಅಂತಾ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಮುದ್ರೆ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ